ವಿನಾಯಕ ಬ್ರಹ್ಮೂರು ನಿರ್ದೇಶನದ, ಮಾನವನ ಜೀವನದಲ್ಲಿ ಘಟಿಸುವ ವಿಲಕ್ಷಣ ಸನ್ನಿವೇಶಗಳನ್ನು ಹೇಳುವ ಬಹುನಿರೀಕ್ಷಿತ ಸಂಧಿಗ್ಧಂ ೨ ಕಿರುಚಿತ್ರ ಅದ್ಧೂರಿಯಾಗಿ ರಿಲೀಸ್ ಆಗಿದೆ. ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಂಧಿಂಗ್ಧಂ ೨ ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ್ರು. ನಂತರ ಮಾತನಾಡಿದ ಅವರು ನಾನು ಸರಿ ಸುಮಾರು ಚಲನಚಿತ್ರವನ್ನು ವಿಕ್ಷಿಸದೇ ೨೦ ವರ್ಷಗಳೇ ಕಳೆದಿದೆ. ಆದರೆ ಈ ಚಿತ್ರದ ಟ್ರೇಲರ್ ಮೂಲಕ ಸಿನೇಮಾ ನೋಡುವ ಹುಚ್ಚು ಹೆಚ್ಚುವಂತಾಗಿದೆ. ಅದಕ್ಕೆ ಕಾರಣ ವಿನಾಯಕ ಬ್ರಹ್ಮೂರು. ಇಂತಹ ಪ್ರತಿಭೆಗಳು ನಮ್ಮ ಜಿಲ್ಲೆಯಲ್ಲಿ, ಅದರಲ್ಲೂ ನಮ್ಮ ತಾಲೂಕಿನಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ. ನಾವೆಲ್ಲರೂ ಸೇರಿ ಇಂತಹ ಪ್ರತಿಭೆಗಳಿಗೆ ಹೆಚ್ಚೆಚ್ಚು ಪ್ರೋತ್ಸಾಹಿಸಬೇಕು ಎಂದರು.
ಡಾ. ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಫ್ರೊ.ಎಸ್‌ವಿ ಶೇಣ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅದಲ್ಲದೇ ಈ ಚಿತ್ರದ ನಿರ್ದೇಶಕ ವಿನಾಯಕ ಬ್ರಹ್ಮೂರು, ನಟ ಎಮ್, ಎಚ್, ಗಣೇಶ ಹಾಗೂ ನಟಿ ಕಲ್ಪನಾ ಪಟಗಾರ ಇವರೆಲ್ಲರೂ ನಮ್ಮ ವಿದ್ಯಾಲಯದಲ್ಲಿ ಕಲಿತಂತಹ ವಿದ್ಯಾರ್ಥಿಗಳು ಎನ್ನಲು ನಮಗೆ ಹೆಮ್ಮೆ ಎಂದರು.
ಅತಿಥಿಗಳಾಗಿ ಆಗಮಿಸಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ. ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ಈ ಚಿತ್ರದ ನಿದೇಶಕ ವಿನಾಯಕ ಬ್ರಹ್ಮೂರು ಒಬ್ಬ ಪ್ರಾಮಾಣಿಕ, ಸರಳ, ಬುದ್ಧಿವಂತ ಶ್ರಮಜೀವಿ. ಉತ್ತರಕನ್ನಡ ಜಿಲ್ಲೆಯಲ್ಲಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸುವಂತಹ ಪ್ರತಿಭೆಗಳು ಬೆರಳೆಣಿಕೆಯಷ್ಟಿದೆ. ಇಂತಹ ಯುವ ಪ್ರತಿಭೆಗಳು ಮುಂದೆ ಬರಲು ನಮ್ಮ ನಿಮ್ಮೆಲ್ಲರ ಸಹಕಾರ ಅನಿವಾರ್ಯ ಎಂದರು.
ಪ್ರಗತಿ ಟ್ಯುಟೋರಿಯಲ್ ಹಾಗೂ ಜನಪರ ವೇದಿಕೆ ಸ್ಥಾಪಕ ಎಂ.ಜಿ.ಭಟ್ ಮಾತನಾಡಿ ಈ ಚಿತ್ರತಂಡ ಹಾಗೂ ನಿರ್ದೇಶಕ ಮತ್ತು ನಟ ನಟಿಯರು ಇನ್ನೂ ಹೆಚ್ಚೆಚ್ಚು ಚಿತ್ರಗಳನ್ನು ಮಾಡಲಿ ಕಿರುಚಿತ್ರದಿಂದ ಹಿರಿತೆರೆಯವರೆಗೂ ತಮ್ಮ ಹೆಜ್ಜೆಯನ್ನಿಡಲಿ. ಎಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ಕಿರುಚಿತ್ರವನ್ನ ಪ್ರದರ್ಶಿಸಲಾಯಿತು. ನೂರಾರು ವಿದ್ಯಾರ್ಥಿಗಳು ಹಾಗೂ ಇತರ ಗಣ್ಯರು ಚಿತ್ರವನ್ನ ವೀಕ್ಷಿಸಿದರು. ಇದೇ ವೇಳೆ ಈ ಚಿತ್ರವನ್ನು ನೋಡಿ ವಿಮರ್ಶೆ ಮಾಡಿದವರಿಗೆ, ಪ್ರಥಮ ದ್ವಿತಿಯ, ತೃತಿಯ ಬಹುಮಾನವನ್ನು ವಿತರಿಸಲಾಯಿತು. ಅದೇ ರೀತಿಯಾಗಿ ನಿರ್ದೇಶಕ ವಿನಾಯಕ ಬ್ರಹ್ಮೂರು ಅವರು ಬಂದಂತಹ ಗಣ್ಯರಿಗೆ ಹಾಗೂ ಕಿರುಚಿತ್ರಕ್ಕೆ ಶ್ರಮಿಸಿದ ತಂಡದ ಎಲ್ಲಾ ಸದಸ್ಯರುಗಳಿಗೆ ಸವಿನೆನಪಿನ ಕಾಣಿಕೆಯನ್ನು ನೀಡಿದರು.
ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ಕೆನರಾ ಸೊಸೈಟಿಯ ಶ್ರೀ ವಿನೋದ್ ಪ್ರಭು, ಪ್ರಾಂಶುಪಾಲರಾದ ಎನ್.ಜಿ. ಹೆಗಡೆ, ನಾಯಕ ಎಂ.ಹೆಚ್. ಗಣೇಶ್, ನಾಯಕಿ ಕಲ್ಪನಾ ಪಟಗಾರ್ ಉಪಸ್ಥಿತರಿದ್ದರು. ಚಿತ್ರ ಪ್ರದರ್ಶನದ ವೇಳೆ ನಟಿ ಪಲ್ಲವಿ ಪಟಗಾರ, ಸಿನಿಮಾಟೋಗ್ರಾಫರ್ ಸಂದೀಪ್ ಎಂ.ಪಿ. ಹಾಗೂ ಅಂತರಂಗ ಟೀಂ ನ ಎಜೆ ಅರು, ನಿತಿನ್ ಶಾನಭಾಗ, ಹಾಗೂ ಮಿಥುನ್ ಎಟಿ ಉಪಸ್ಥಿತರಿದ್ದರು.