ಕುಮಟಾ: ಶ್ರೀಶಕೆ 1940 ವಿಲಂಬಿ ಸಂವತ್ಸರದ ಪರಮ ಪವಿತ್ರ ಚಾತುರ್ಮಾಸ ವ್ರತವನ್ನು ಶ್ರೀ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ತಮ್ಮ ಪ್ರಿಯಶಿಷ್ಯ ಸ್ವಾಮೀಜಿ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ ಸಾಂಗತ್ಯದಲ್ಲಿ, ಹುಬ್ಬಳ್ಳಿಯಲ್ಲಿ ಅಲ್ಲಿನ ಸಮಾಜಬಾಂಧವರ ಆಗ್ರಹದ ಮೇರೆಗೆ ಆಚರಿಸಲು ಒಪ್ಪಿರುತ್ತಾರೆ.

ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಮರಗೋಳದಲ್ಲಿರುವ ಶ್ರೀ ಸಂಸ್ಥಾನದ ಸ್ವಂತ ನಿವೇಶನದಲ್ಲಿರುವ ಶ್ರೀ ವಿದ್ಯಾಧಿರಾಜ ಭವನದಲ್ಲಿ ನಡಸಲು ನಿರ್ಧರಿಸಲಾಗಿದೆ. ಅಗಸ್ಟ್ 2 ರಿಂದ ಸೆಪ್ಟೆಂಬರ್ 25 ರ ವರೆಗೆ ಸಂಪನ್ನಗೊಳ್ಳಲಿರುವ ವ್ರತಾಚರಣೆಯ ಪರ್ವಕಾಲದಲ್ಲಿ ಜರುಗುವ ವಿವಿಧ ಕಾರ್ಯಕ್ರಮಗಳನ್ನು ಇಲ್ಲಿನ ಸಮಾಜ ಬಾಂಧವರಿಗೆ ತಿಳಿಸಲು ಇಲ್ಲಿನ ವೆಂಕಟರಮಣ ದೇವಸ್ಥಾನದಲ್ಲಿ ತುರ್ತು ಸಭೆಯನ್ನು ಏರ್ಪಡಿಸಲಾಗಿತ್ತು.

RELATED ARTICLES  ನುಡಿದಂತೆ ನಡೆದರೆ ಮಾನವೀಯ ಮೌಲ್ಯಗಳಿಗೆ ಬೆಲೆ: ಡಾ|| ಎಮ್.ಆರ್.ನಾಯಕ

ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಚಾತುರ್ಮಾಸ ಸಮಿತಿ 2018, ಹುಬ್ಬಳ್ಳಿ ಪರವಾಗಿ, ಈ ಒಂದು ಗರುಶಿಷ್ಯ ಸ್ವಾಮೀಜಿಯವರ ಚಾತುರ್ಮಾಸ ಚಾರಿತ್ರಿಕವನ್ನಾಗಿಸಲು ಹಾಗೂ ಸಮಾಜಬಾಂಧವರು ಪುನೀತರಾಗಲು ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಲಿಕೊಳ್ಳಲು ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಸವಿನಯವಾಗಿ ವಿನಂತಿಸಿಕೊಳ್ಳಲಾಯಿತು.

RELATED ARTICLES  ಗ್ರಂಥಸ್ಥ ವ್ಯಕ್ತಿತ್ವದ ಮುಲ್ಲಾ ಇಲಾಖೆಗೆ ಮಾದರಿ “ಎದೆಯದನಿ” ಮುಲ್ಲಾಭಿನಂದನದ ಲೋಕಾರ್ಪಣದಲ್ಲಿ ಡಿಡಿಪಿಐ ಅಭಿಮತ

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ರಂಗಪ್ಪ ಕಾಮತ, ಹನುಮಂತ ಮಾಳಪ್ಪ ಪೈ, ದಿನೇಶ ರಾಮಂಚಂದ್ರ ನಾಯಕ, ವೆಂಕಟರಮಣ ದೇವಾಲಯದ ಮೊಕ್ತೇಶ್ವರ ವಸುದೇವ ಯಶ್ವಂತ ಪ್ರಭು, ಸ್ಥಾನಿಕ ದೇವಾಲಯಗಳ ಧರ್ಮದರ್ಶಿಗಳು, ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.