ಕುಮಟಾ: “ಮಗುವಿನ ಪ್ರಗತಿಯೇ ದೇಶದ ಪ್ರಗತಿ ಎಂದು ನಂಬಿರುವ ನಮ್ಮ ಘನ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗುಣಾತ್ಮಕ ಶಿಕ್ಷಣದ ಯಶಸ್ಸಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ತರುತ್ತಿದೆ. “ಶಾಲೆಗಾಗಿ ನಾವು ನೀವು” ಕಾರ್ಯಕ್ರಮವನ್ನು ಮಕ್ಕಳ ಶಿಕ್ಷಣದ ಹಕ್ಕು’ ಅಭಿಯಾನದ ಕಾರ್ಯಕ್ರಮವನ್ನಾಗಿ ಆಯೋಜಿಸಲಾಗುತ್ತದೆ” ಎಂದರು.

ಅವರು ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ “ಶಾಲೆಗಾಗಿ ನಾವು ನೀವು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ಹಿರೇಗುತ್ತಿ ಊರಿನ ಶೈಕ್ಷಣಿಕ ಅಭಿವೃದ್ದಿಗೆ ಎಲ್ಲರೂ .ಬೆಂಬಲ ನೀಡಬೇಕಿದೆ. ಶಿಕ್ಷಕರು ಸಂಘ ಸಂಸ್ಥೆಗಳು ಗ್ರಾಮದ ಪ್ರತಿಯೊಂದು ಬೀದಿಯಲ್ಲಿಯೂ ಮಕ್ಕಳ ಶಿಕ್ಷಣ ಹಕ್ಕು ಕುರಿತು ಜಾಗ್ರತಿ ಕಾರ್ಯಕ್ರಮ ಆಯೋಜಿಸಬೇಕು. ಆ ಮೂಲಕ ಹಕ್ಕಿನ ಮಹತ್ವವನ್ನು ಮನೆ-ಮನೆಗೆ ತಲುಪಿಸಬೇಕು” ಎಂದು ಆಶಿಸಿದರು.

ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಆನಂದ. ಬಿ. ನಾಯಕ ಜಿಲ್ಲಾ ಅಧ್ಯಕ್ಷರು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಉ.ಕ ರವರು “ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಆಚರಣೆಯ ಉದ್ದೇಶವೆನೆಂದರೆ ದೇಶದ ಶಿಕ್ಷಣ ವ್ಯವಸ್ಥೆಯ ಮುಖ್ಯ ವಾರಸುದಾರರು, ರೂವಾರಿಗಳಾದ ಶಿಕ್ಷಕರು ಸಮುದಾಯ ಸಹಭಾಗಿತ್ವದಲ್ಲಿ ಶಿಕ್ಷಣ ವ್ಯವಸ್ಥೆಯ ಆಗು-ಹೋಗುಗಳ ಬಗ್ಗೆ ಚರ್ಚಿಸಿ ರಾಜ್ಯದಲ್ಲಿ ಒಂದು ಸುಭದ್ರ ಶಿಕ್ಷಣ ವ್ಯವಸ್ಥೆ ಕಟ್ಟಿಕೊಳ್ಳುವುದು ಆಗಿದೆ ಎಂದರು.

RELATED ARTICLES  ಹೆಬ್ಬಾರ್ ಡ್ರೀಮ್ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಣೆ

ಮುಖ್ಯೋಧ್ಯಾಪಕರಾದ ರೋಹಿದಾಸ.ಎಸ್.ಗಾಂವಕರ್ ಮಾತನಾಡಿ “ನಮ್ಮ ಹೈಸ್ಕೂಲಿನ ಸುತ್ತಮುತಲಿನ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದವರು “ಶಾಲೆಗಾಗಿ ನಾವು ನೀವು” ಕಾರ್ಯಕ್ರಮದಡಿಯಲ್ಲಿ ನಮ್ಮ ಶಾಲೆಯಲ್ಲಿ ಒಂದು ಕಡೆ ಸೇರಿರುವುದು ತುಂಬ ಸಂತಸದ ವಿಚಾರ, ಗುಣಾತ್ಮಕ ಶಿಕ್ಷಣ ನೀಡಬೇಕಾದರೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ” ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು.ಹಿರೇಗುತ್ತಿ “ಶಾಲೆಗಾಗಿ ನಾವು-ನೀವು” ಕಾರ್ಯಕ್ರಮವು ಶೈಕ್ಷಣಿಕ ವಿಚಾರ ವಿನಿಮಯ ಮಗುವಿನ ಪ್ರಗತಿಯ ಪರಿಚಯ ಪ್ರಗತಿಗೆ ಮಾರ್ಗದರ್ಶನ ಮನೆ-ಮನೆಗಳಲ್ಲಿ ನ ಶೈಕ್ಷಣಿಕ ಪರಿಸರ ನಿರ್ಮಾಣಗೊಳ್ಳಲು ಈ ಯೋಜನೆ ಕಾರಣವಗಿದೆ ಎಂದರು. ಕಾರ್ಯಕ್ರಮ ಉದ್ದೇಶಿಸಿ ಎನ್.ಎನ್.ವಂದಿಗೆ ಮುಖ್ಯೋಧ್ಯಾಪಕರು, ವಿಜಯ ನಾಗೇಶ ನಾಯಕ ಮುಖ್ಯೋದ್ಯಾಪಕಿ ಹೊಸನಗರ, ನಮ್ರತಾ. ಬಿ. ನಾಯಕ ಮಾತನಾಡಿದರು.

RELATED ARTICLES  ಮಗನೊಂದಿಗೆ ನೀರಿಗಿಳಿದಿದ್ದ ಗುತ್ತಿಗೆದಾರ ದುರ್ಮರಣ

ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕ ವಿಶ್ವನಾಥ ಬೇವಿನಕಟ್ಟಿ,ಗುರುದೇವಿ ನಾಯಕ, ಅನಿತಾ ಪಿ. ಕಿಣಿ ಮುಖ್ಯೋಧ್ಯಾಪಕಿ ಉಳುವರೆ ಶಾಲೆ ಹಾಗೂ ಹೈಸ್ಕೂಲ್ ಶಿಕ್ಷಕ ವೃಂದದವರು ಪ್ರಾಥಮಿಕ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಶಶಿ ಸಂಗಡಿಗರ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಸಹನಾ ಗೌಡ ಸರ್ವರನ್ನು ಸ್ವಾಗತಿಸಿದಳು.ಹೈಸ್ಕೂಲ್ ಪ್ರಧಾನ ಕಾರ್ಯದರ್ಶಿ ವಂಕಟೇಶ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕ್ರತಿಕ ಸಂಘದ ಪ್ರತಿನಿಧಿ ವಿನಯಾ ಗೌಡ ವಂದಿಸಿದರು.

ವರದಿ: ಎನ್.ರಾಮು.ಹಿರೇಗುತ್ತಿ