ಗುಂಪೆ ವಲಯದ ಜುಲೈ ತಿಂಗಳ ಸಭೆಯು ತಾ.8-7-2018 ರಂದು ಚೆಕ್ಕೆ ಸುಬ್ರಹ್ಮಣ್ಯ ಭಟ್ ಇವರ ಮನೆಯಲ್ಲಿ ನಡೆಯಿತು. ಗುರುವಂದನೆ ಗೋ ವಂದನೆಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷ ಸ್ಥಾನವನ್ನು ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ಧ್ವಜಾರೋಹಣವನ್ನು ಮನೆಯ ಯಜಮಾನರಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ಚೆಕ್ಕೆ ನೆರವೇರಿಸಿದರು.
ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಗತ ಸಭೆಯ ವರದಿಯಿತ್ತರು, ಕೋಶಾಧಿಕಾರಿ ಜಯರಾಮ ಚೆಕ್ಕೆ ಲೆಕ್ಕ ಪತ್ರ ಮಂಡಿಸಿದರು.

ವಿಭಾಗ ವರದಿ:-
ತಾ. ೧೨-೦೭-೨೦೧೮ ರಂದು ಮಾಣಿ ಮಠದಲ್ಲಿ ರುದ್ರ ಪಾರಾಯಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರುದ್ರಾಧ್ಯಾಯಿಗಳು ಭಾಗವಹಿಸುವಂತೆ ಹೇಳಲಾಯಿತು.
ಶ್ರೀಮತಿ ಶಂಕರಿ ಎಚ್ ಇವರಿಗೆ ಪ್ರತಿ ತಿಂಗಳು ನೀಡುವ ಮುಷ್ಟಿ ಅಕ್ಕಿಯ ಹೊರತಾಗಿ ವಲಯ ಉಪಾಧ್ಯಕ್ಷರಾದ ಶ್ರೀಯುತ ಶಂಕರ ಭಟ್ ಇವರು ಸುಮಾರು ಒಂದು ವರ್ಷದಿಂದ ಪ್ರತಿ ತಿಂಗಳು ಸ್ವತಃ 5 ಕಿಲೋ ಅಕ್ಕಿ ನೀಡುತ್ತಿರುವುದನ್ನು ಸಭೆ ಗಮನಿಸಿ ಅವರ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಭಜನಾ ರಾಮಾಯಣ ಪಠಣ ಕುರಿತು ಎಲ್ಲ ಮನೆಗಳಿಗೆ ತಿಳಿಸಿ ಸಂಖ್ಯೆ ಹೆಚ್ಚು ಮಾಡಲು ತೀರ್ಮಾನಿಸಲಾಯಿತು.
ವಿದ್ಯಾನಿಧಿ ಸಹಾಯ ಆವಶ್ಯವಿರುವವರನ್ನು ಗುರುತಿಸಿ ಅವರಿಂದ ಅಪೇಕ್ಷಾ ಅರ್ಜಿ ಪಡೆಯಲು ತೀರ್ಮಾನಿಸಲಾಯಿತು

ಪ್ರತಿಭಾ ಪುರಸ್ಕಾರಕ್ಕೆ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳದಾ ಆದಿತ್ಯ ಇ.ಎಚ್, ಪ್ರಣವ ಕುಮಾರ, ಅಪೂರ್ವ ಎಡಕ್ಕಾನ , ಸುಧನ್ವ ಶಂಕರ ಯಂ ಇವರನ್ನು ಮುಳ್ಳೇರಿಯ ಮಂಡಲ ಉಪಾಧ್ಯಕ್ಷ ಶ್ರೀಯುತ ಕುಮಾರ ಪೈಸಾರಿ ಇವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ವಲಯದ ಪ್ರತಿ ಘಟಕದಲ್ಲಿ ವಾರ್ಷಿಕವಾಗಿ ಎರಡು ಘಟಕ ಸಭೆ ನಡೆಸಬೇಕಾದ ಆವಶ್ಯಕತೆಯನ್ನು ತಿಳಸಲಾಯಿತು

RELATED ARTICLES  ವಸತಿ ಶಾಲೆಯ ಸುಮಾರು ಎಂಬತ್ತು ವಿದ್ಯಾರ್ಥಿಗಳು ಅಸ್ವಸ್ಥ.

ಗೋಸ್ವರ್ಗ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆಗಳನ್ನು ಗುರಿಕ್ಕಾರರು ಹಾಗೂ ಶ್ರೀಕಾರ್ಯಕರ್ತರು ಮೂಲಕ ಎಲ್ಲಾ ಮನೆಗಳಿಗೆ ಅಭಿಯಾನ ಮೂಲಕ ವಿತರಿಸಲು ತೀರ್ಮಾನಿಸಲಾಯಿತು. ಗುಂಪೆ ವಲಯದ ಪರವಾಗಿರುವ ಭಿಕ್ಷಾ ಸೇವೆ ತಾ. 27-8-2018 ಸೋಮವಾರ ನಡೆಯಲಿರುವುದಾಗಿ ತಿಳಿಸಲಾಯಿತು.

ವಲಯ ಉಪಾಧ್ಯಕ್ಷರಾದ ಕಕ್ವೆ ಶಂಕರ ರಾವ್ ಮುಜುಂಗಾವು ಕಣ್ಣಿನ ಆಸ್ಪತ್ರೆಯ ಪ್ರಗತಿಯ ಬಗ್ಗೆ ತಿಳಿಸಿ ಸಮಾಜ ಭಾಂಧವರು ಆವಶ್ಯವಿರುವವರು ಇದರ ಉಪಯೋಗ ಪಡೆಯುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿರುವುದನ್ನು ತಿಳಿಸಿದರು. ಶಂಕರ ಧ್ಯಾನ ಮಂದಿರದ ಹಿಂದಿನ ಹಾಗೂ ಇಂದಿನ ಸ್ಥಿತಿಗಳನ್ನು ತಿಳಿಸಿದರು.
ವಲಯದಲ್ಲಿ ಇತ್ತೀಚೆಗೆ ನಿಧನರಾದ ಬೆತ್ತಕಾಡು ಗೋಪಾಲಕೃಷ್ಣ ಭಟ್ ಇವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಲಾಯಿತು.

ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್ ಮಾತನಾಡುತ್ತಾ ಚಾತುರ್ಮಾಸ್ಯ ಸಂದರ್ಭದಲ್ಲಿ ತಮ್ಮ ಅನುಕೂಲ ಇರುವ ಯಾವುದಾದರೊಂದು ದಿನ ಅಥವಾ ವಲಯ ಭಿಕ್ಷೆ ದಿನ ವಲಯದ ಪ್ರತಿ ಮನೆಯವರು ಮಠಕ್ಕೆ ಭೇಟಿ ನೀಡಿ ಶ್ರೀಗುರುಗಳಿಂದ ಮಂತ್ರಾಕ್ಷತೆ ಪಡೆಯಬೇಕು, ಶ್ರೀಗುರುಗಳು ನಿರ್ದೇಶಿಸಿದ ಯೋಜನೆಗಳಲ್ಲಿ ನಾವು ಪಾಲ್ಗೊಂಡು ಸಹಕಾರ ನೀಡಬೇಕು, ಮುಷ್ಠಿ ಭಿಕ್ಷೆ, ಬಿಂದು ಸಿಂಧು, ಧರ್ಮಭಾರತೀ ಚಂದಾ ಇವುಗಳಿಗೆ ವಲಯದ ಸರ್ವರೂ ಸಹಕರಿಸಬೇಕು ಕರೆ ಇತ್ತರು.

RELATED ARTICLES  ಸರಿಪಡಿಸಲು ತಂದ ರೆಡ್ಮಿ ಫೋನ್ ಬ್ಲಾಸ್ಟ! ಹೇಗಿದೆ ನೋಡಿ ಅಂಗಡಿಯ ಸಿಸಿ ಟಿ.ವಿ ವಿಡಿಯೋ!

ಮಂಡಲ ಉಪಾಧ್ಯಕ್ಷರಾದ ಕುಮಾರ ಪೈಸಾರಿ ಸಭೆಯಲ್ಲಿ ಭಾಗವಹಿಸಿ ಶ್ರೀಗುರು ಸಂಕಲ್ಪಿತ ಗೋಸ್ವರ್ಗ ಯೋಜನೆಯು ಕಲ್ಪನಾತೀತ, ಬೆಲ್ಲದ ರುಚಿ ಸವಿದು ಅನುಭವಿಸಬೇಕು ಹಾಗೇ ಗೋಸ್ವರ್ಗ ನೋಡಿ ಅನುಭವಿಸಬೇಕು, ನಾವು ಈ ಯೋಜನೆಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಸಹಕಾರ ನೀಡಬೇಕಾದ ಆವಶ್ಯಕತೆ ತಿಳಿಸಿದರು. ವಲಯಗಳಿಂದ ನಾವು ಸುಮಾರು ೫ ಲಕ್ಷಕ್ಕಿಂತಲೂ ಮಿಗಿಲಾಗಿ ಸಂಗ್ರಹಿಸಿ ಸೇವೆ ಸಲ್ಲಿಸ ಬೇಕೆಂದು ಅಭಿಪ್ರಾಯಪಟ್ಟರು. ಶಂಕರ ಧ್ಯಾನ ಮಂದಿರ ಒಂದು ಉತ್ತಮ ಯೋಜನೆ. ನಮ್ಮ ವಲಯದಲ್ಲಿರುವ ಈ ಧ್ಯಾನ ಮಂದಿರಕ್ಕೆ ಉತ್ತಮ ಪ್ರೋಜೆಕ್ಟ್ ತಯಾರಿಸಿ ಅದನ್ನು ಬೆಳೆಸಬೇಕಾದ ಆವಶ್ಯಕತೆಯನ್ನು ಸಭೆಗೆ ತಿಳಿಸಿದರು. ಮುಳ್ಳೇರಿಯಾ ಮಂಡಲದಲ್ಲಿರುವ ಒಂದು ಪುಟ್ಟ ವಲಯ ಗುಂಪೆ ವಲಯ, ವಾಮನ ಮೂರ್ತಿಯಂತಿರುವ ಈ ವಲಯದ ಕಾರ್ಯ ಶ್ಲಾಘನೀಯ ಎಂದು ವಲಯದ ಕೆಲಸ ಕಾರ್ಯಗಳನ್ನು ಗಮನಿಸಿ ವಲಯ ಸದಸ್ಯರ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಇನ್ನೂ ಉತ್ತಮ ಕಾರ್ಯಗಳು ಯೋಜನೆಗಳು ವಲಯದಲ್ಲಿ ರೂಪುಗೊಳ್ಳಲೆಂದು ಶುಭಹಾರೈಸಿದರು.

ರಾಮತಾರಕ ಜಪ, ಶಾಂತಿ ಮಂತ್ರ, ಶಂಖನಾದ ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.