ಧರ್ಮತ್ತಡ್ಕ:- “ಆಕಾಶ ಎಂದರೆ ಅದು ಅಚ್ಚರಿಗಳ ಲೋಕ.ಬಾಹ್ಯಾಕಾಶವು ವಿಸ್ಮಯಗಳ ಆಗರ.ಅದರ ಅಧ್ಯಯನ ಅದು ಮುಗಿಯದ ಯಾನ” ಎಂದು ಇಸ್ರೋ ಸಂಸ್ಥೆಯ ನಿವೃತ್ತರಾದ ವಿಜ್ಞಾನಿ ಡಾ.ಪಿ.ಜೆ.ಭಟ್ ಅವರು ಹೇಳಿದರು. ಅವರು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ವಿದ್ಯಾರ್ಥಿಗಳಿಗೆ ಸಂಯೋಜಿಸಲ್ಪಟ್ಟ ಅರಿವು~ ಆಕಾಶ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಮನ ಮುಟ್ಟುವಂತೆ ವಿವರಿಸಿದರು.

RELATED ARTICLES  ಮೇ 3 ರ ವರೆಗೆ ಲಾಕದ ಡೌನ್..! ಕರೋನಾ ಲಾಕ್ ಡೌನ್ ಬಗ್ಗೆ ಮೋದಿ ಮಾತು.

ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಿಶ್ವೇಶ್ವರ ಭಟ್ ಉಂಡೆಮನೆ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ಪರೀಕ್ಷೆ~ನಿರೀಕ್ಷೆ ಕಾರ್ಯಾಗಾರವನ್ನು ನಡೆಸಿಕೊಟ್ಟರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮವನ್ನು ಶಾಲಾ ಸಂಚಾಲಕಿ ಶ್ರೀಮತಿ ಶಾರದಾ ಅಮ್ಮ ಉದ್ಘಾಟಿಸಿದರು. ಶ್ರೀ ಕೇಶವಪ್ರಸಾದ ಇವರು ಅತಿಥಿಗಳನ್ನು ಪರಿಚಯಿಸಿದರು. ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಆಡಳಿತಾಧಿಕಾರಿ ಶ್ರೀ ಶ್ಯಾಮ ಭಟ್ ಹಾಗೂ ಶಾಲಾ ವ್ಯಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ಶುಭ‌ಹಾರೈಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿದರು. ಶ್ರೀ ಸತೀಶ ಕುಮಾರ್ ಶೆಟ್ಟಿ ವಂದಿಸಿದರು. ಶ್ರೀ ಗೋವಿಂದ ಭಟ್ ಕಾರ್ಯಕ್ರಮ ನಿರೂಪಿಸಿದರು. 180 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಶಾಲೆಯ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಸಹಕರಿಸಿದರು.

RELATED ARTICLES  ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಚಾಲನೆ.