ಕುಮಟಾ: ಬೈಕ್ ಸ್ಕಿಡ್‌ ಆಗಿ ಆಯತಪ್ಪಿ ಕೆಳಗೆ ಬಿದ್ದ ಎಎಸ್ಐ ಸಾವಿಗೀಡಾಗಿದ್ದಾರೆ.

ಕುಮಟಾದ ವಿವೇಕನಗರದಲ್ಲಿ ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಹೊನ್ನಾವರ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿದ್ದ ಶಂಕರ ಗುಡಿಮನಿ (58) ಮೃತರು.

ಕುಮಟಾದಲ್ಲಿ ಸದ್ಯ ವಾಸಿಸುತ್ತಿದ್ದ ಅವರು ಪೇಟೆಯಿಂದ ಮನೆಗೆ ಮರಳುತ್ತಿದ್ದ ವೇಳೆ ಬಾಳಿಗಾ ಕಾಲೇಜಿನ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆಗೆ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಏಳಲಾಗದೇ ರಸ್ತೆಯಲ್ಲಿ ಒದ್ದಾಡಿದ್ದಾರೆ.

RELATED ARTICLES  ಭಾರತ ಸೇವಕ ಸಮಾಜದಿಂದ ಮಹಿಳಾ ದಿನಾಚರಣೆ: ಆಶಾ ನಾಯ್ಕರಿಗೆ ಸನ್ಮಾನ

ಈ ವೇಳೆ ಮಳೆಯೂ ಇದ್ದಿದ್ದರಿಂದ ಇದು ಯಾರ ಗಮನಕ್ಕೂ ಬಂದಿಲ್ಲ. ಸುಮಾರು ಒಂದೂವರೆ ಗಂಟೆಯ ಬಳಿಕ, ಮಳೆ ನಿತ್ತ ಮೇಲೆ ವ್ಯಕ್ತಿಯೊಬ್ಬರು ಅವರನ್ನು ಗಮನಿಸಿ ಪೊಲೀಸರ ಸಹಾಯದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ ಎನ್ನಲಾಗಿದೆ.

RELATED ARTICLES  ‘ಆಧಾರಶ್ರೀ ಪ್ರಶಸ್ತಿ’ಗೆ ಹೊನ್ನಾವರದ ಜೀವನಾಧಾರ ಟ್ರಸ್ಟ್ ನ ಜಾಕಿ ಡಿಸೋಜಾ ಅಯ್ಕೆ.

ಮಂಗಳವಾರ ತಡರಾತ್ರಿ ಕರ್ತವ್ಯ ತನ್ನ ಮನೆಗೆ ತೆರಳುತ್ತಿದ್ದ ಎಎಸ್​ಐ ಶಂಕರ ಗುಡಿಮನಿ, ಬೈಕ್​ ಚಲಾಯಿಸುವಾಗಲೇ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ನೀಡುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾರೆ.

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.