ಕಾರವಾರ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿರುತ್ತದೆ. ಜೀವದ ಹಂಗು ತೊರೆದು ಇನ್ನೋರ್ವರ ಜೀವ ರಕ್ಷಣೆ ಮಾಡಿರುವ 6 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಜುಲೈ 31 ಕೋನೆಯ ದಿನವಾಗಿರುತ್ತದೆ. 1-7-2017 ರಿಂದ 30-6-2018 ರ ಅವಧಿಯಲ್ಲಿ ಇನ್ನೋರ್ವರ ರಕ್ಷಣೆ ಮಾಡಿದಂತಹ ಮಕ್ಕಳು ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.

RELATED ARTICLES  ಅ. 8 ರಂದು ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಹೆಚ್ಚಿನ ಮಾಹಿತಿ ಹಾಗೂ ನಿಗದಿತ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ ಕಛೇರಿಯಿಂದ ಪಡೆಯಬಹುದಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಜನ್ಮ ದಿನಾಂಕದ ದೃಡಿಕರಣ ಪತ್ರ, ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟವಾದ ಕುರಿತು ಪತ್ರಿಕಾ ತುಣುಕುಗಳು ಹಾಗೂ ನಡೆದಿರುವ ಘಟನೆಗೆ ಪೂರಕವಾದ ದಾಖಲಾತಿಗಳೊಂದಿಗೆ ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಲ್ಲಿಸುವಂತೆ ಉಪನಿರ್ದೇಶಕ ರಾಜೇಂದ್ರ ಬೇಕಲ್ ಕೋರಿದ್ದಾರೆ.

RELATED ARTICLES  ಅಂಕೋಲಾ: ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಆಂಗ್ಲ ಮಾಧ್ಯಮ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ