ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮನವಿಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಂಗೀಕರಿಸಿದ್ದು, ಬರುವ ಶುಕ್ರವಾರ ಮೋದಿ ಸರಕಾರ ಮತ್ತು ಪ್ರತಿಪಕ್ಷಗಳ ನಡುವಿನ ‘ಮೇಲಾಟ’ಕ್ಕೆ ಲೋಕಸಭೆ ಸಾಕ್ಷಿಯಾದ ಬೆನ್ನಲ್ಲೇ ಶಿವ ಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವಿಶ್ವಾಸ ಗೊತ್ತುವಳಿಯಲ್ಲಿ ನಾವು ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತೆವೆ ಎಂದು ತಿಳಿಸಿದ್ದಾರೆ ಎಂದು ವರದಿ ಆಗಿದೆ.ಈ ಬಗ್ಗೆ ಅಧಿಕೃತವಾದ ಘೋಷಣೆಯನ್ನು ಸಂಜೆವೇಳೆ ಉದ್ಧವ್ ಠಾಕ್ರೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.ಬಿಜೆಪಿ ನೇತೃತ್ವದ ಎನ್ ಡಿ ಎ ಒಕ್ಕೂಟವನ್ನು ಬೆಂಬಲಿಸುವ ನಿಟ್ಟಿನಲ್ಲಿ ಶಿವ ಸೇನೆ ತನ್ನ ಸಂಸದರಿಗೆ ವಿಪ್ ಕೂಡ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಗೆಲುವು ನಮ್ಮದೇ ಎನ್ನುತಿದೆ ಬಿಜೆಪಿ
ಕಳೆದ 4 ವರ್ಷಗಳಲ್ಲಿ ಕೈಗೊಂಡಿರುವ ಆರ್ಥಿಕ ಸುಧಾರಣೆ, ಉದ್ಯಮ ಸ್ನೇಹಿ ವಾತಾವರಣ ಹಾಗೂ ಜನ ಕಲ್ಯಾಣ ಯೋಜನೆಗಳಿಂದ ಬೀಗುತ್ತಿರುವ ಬಿಜೆಪಿ ಮತ್ತದರ ಮಿತ್ರಪಕ್ಷಗಳು ಅವಿಶ್ವಾಸ ಗೊತ್ತುವಳಿಯಿಂದ ಸರಕಾರಕ್ಕೆ ಧಕ್ಕೆಯಾಗದು ಎಂಬ ವಿಶ್ವಾಸದಲ್ಲಿವೆ. ಮಿತ್ರಪಕ್ಷಗಳ ಬೆಂಬಲದ ಹೊರತಾಗಿ 273 ಸದಸ್ಯಬಲ ಹೊಂದಿರುವ ಬಿಜೆಪಿಗೂ ಇದು ಚೆನ್ನಾಗಿ ಗೊತ್ತಿರುವುದರಿಂದ ಸವಾಲು ಎದುರಿಸಲು ಸಿದ್ಧ ಎಂದು ಘಂಟಾಘೋಷವಾಗಿ ಹೇಳಿದೆ.