ಶಿರಸಿ: ಶೀರೂರು ಶ್ರೀಗಳು ಸನ್ಯಾಸ ಜೀವನದಿಂದ ಭ್ರಷ್ಟರಾಗಿದ್ದಾರೆ ಅವರಿಗೆ ಮಗನಿದ್ದಾನೆ.ಅವರು ಮಠಾದೀಶರಲ್ಲ, ಅವರು ಸನ್ಯಾಸವನ್ನು ಬಿಟ್ಟಿದ್ದಾರೆ, ಅವರೇ ಒಪ್ಪಿಕೊಂಡಿದ್ದಾರೆ ಅದರಿಂದ ಅವರನ್ನು ನೋಡಲು ಹೋಗಿಲ್ಲ. ಮಠಾದೀಶರಿಗೆ ದ್ವೇಶವಿಲ್ಲ. ಅವರು ಪೀಠಾಧಿಪತಿ ಅಲ್ಲ ಎಂದು ಎಲ್ಲರೂ ತೀರ್ಮಾನ ಮಾಡಿ ಒಪ್ಪಿಕೊಂಡಿದ್ದೇವೆ, ಅಂತವರು ಸ್ವಾಮೀಜಿಗಳಾಗಲು ಸಾಧ್ಯವಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಅವರು, ಪಟ್ಟದ ದೇವರನ್ನು ಶೀರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ. ನನಗೆ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರಿಂದ ಪಟ್ಟದ ದೇವರನ್ನು ಕೊಡಲಿಲ್ಲ . ಸ್ವಾಮಿಗಳಾದ ಮೇಲೆ ಧರ್ಮ ಬೇಕು ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಎಂದು ಹೇಳಿದ್ದಾರೆ.

RELATED ARTICLES  ಹೆಣ್ಣು ಮಗುವನ್ನು ಎದೆಗವಚಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಂದೆ.

ಶಿರೂರು ಶ್ರೀಗಳ ಪಾರ್ಥಿವ ಶರೀರ ನೋಡಲು ಕೆಲವು ಮಠದ ಸ್ವಾಮಿಗಳು ಬರದ ಹಿನ್ನಲೆಯಲ್ಲಿ ಹಲವು ಗೊಂದಲಗಳು ಹರಿದಾಡಿದ್ದವು. ಈ ಸಂದರ್ಭದಲ್ಲಿ ಈ ಹೇಳಿಕೆ ಸ್ಪೋಟಕ ಮಾಹಿತಿಯಾಗಿ ಗೋಚರಿಸುತ್ತಿದೆ. ಇದರ ಜೊತೆಗೆ ಪೇಜಾವರ ಶ್ರೀಗಳು ಮಾತನಾಡಿ ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಅವರ ಪಾರ್ಥಿವ ಶರೀರ ನೋಡಲು ಹೋಗದಿರಲು ಸ್ವಾಮಿಗಳು ತಾತ್ವಿಕ ,ನೈತಿಕ ಕಾರಣ ಅದರಲ್ಲಿ ಯಾವ ವಿರೋಧವಿಲ್ಲ ಎಂದರು.

RELATED ARTICLES  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಡಾ.ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ