ಭಟ್ಕಳ : ನಗರದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ರಾಜ್ಯದ 2018 -19ನೇ ಸಾಲಿನ ಬಜೆಟ್ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿ ಹಾಗೂ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ದೇವೇಂದ್ರ ಕಿಣಿಯವರು, ಪ್ರಸ್ತುತ ಬಜೆಟ್ ಕುರಿತು ಉಪನ್ಯಾಸ ನೀಡಿದರು. ಸರ್ಕಾರವು ಪ್ರತಿ ವರ್ಷವು ಮಂಡಿಸುವ ಬಜೆಟನ ಮಹತ್ವ ಹಾಗೂ ಅದರ ಸಾಧಕ ಬಾಧಕಗಳ ಕುರಿತು ಅವರು ವಿಮರ್ಶಾತ್ಮಕ ವಿಶ್ಲೇಷಣೆ ನೀಡಿದರು. ನಂತರ ವಿದ್ಯಾರ್ಥಿಗಳು ಬಜೆಟ್ ಕುರಿತ ವಿಷಯವಾಗಿ ಉಪನ್ಯಾಸಕರೊಂದಿಗೆ ಸಂವಾದ ನಡೆಸಿದರು.

RELATED ARTICLES  ಪ ಪೂ ಶ್ರೀ ಶ್ರೀ ಶಿವಯ್ಯ ಸ್ವಾಮಿಗಳಿಗೆ ಗೋಕರ್ಣ ಗೌರವ

ವೇದಿಕೆಯಲ್ಲಿ ಬಿ.ಕಾಮ್ ಮತ್ತು ಬಿಎ ಪದವಿ ವಿಭಾಗದ ಸಂಯೋಜಕರಾದ ಫಣಿಯಪ್ಪ ಹೆಬ್ಬಾರ್, ಬಿಸಿಎ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ ಪೈ, ಬಿಬಿಎ ಕಾಲೇಜಿನ ಮುಖ್ಯಸ್ಥರಾದ ವಿಶ್ವನಾಥ ಭಟ್, ಉಪನ್ಯಾಸಕರಾದ ರೋಹಿದಾಸ ನಾಯ್ಕ, ಆನಂದ ದೇವಾಡಿಗ, ಸುಶಿಲಾ ಖಾರ್ವಿ ಹಾಗೂ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಶಾಂತ ಸ್ವಾಗತಿಸಿದರು. ಗೊಪಾಲ ಕೃಷ್ಣ ವಂದಿಸಿದರು. ಕುಮಾರಿ ಪ್ರತಿಭಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES  ಸಹಕಾರ ಪ್ರಶಸ್ತಿಗೆ ಹೊನ್ನಾವರದ ರಾಘವ ಬಾಳೇರಿ ಆಯ್ಕೆ