ನಮ್ಮ ಜೀವನದಲ್ಲಿ ಮುಂದೆ ಆಗಬಹುದಾದಂತಹ ವಿಷಯಗಳು ಮತ್ತು ನಮ್ಮ ಗುರಿ ಸಾಧನೆ, ಆರೋಗ್ಯ, ಸಂಪತ್ತಿನ ಬಗ್ಗೆ ತಿಳಿಯಲು ಹೆಚ್ಚಿನ ಜನರು ಮೊರೆ ಹೋಗುವುದು ರಾಶಿ, ಜೋತಿಷ್ಯ, ಅಂಕಿಶಾಸ್ತ್ರ ಮತ್ತು ಹಸ್ತ ಸಾಮುದ್ರಿಕಶಾಸ್ತ್ರ. ಇದು ಎಷ್ಟು ನಿಜವಾಗುತ್ತದೆಯಾ ಎಂದು ನಮಗೆ ತಿಳಿದಿಲ್ಲ. ಆದರೆ ನಾವು ಇದನ್ನು ನಂಬುತ್ತೇವೆ.
ಹಸ್ತಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯ ಮೇಲಿರುವಂತಹ ಕೆಲವೊಂದು ರೇಖೆಗಳು ನೀವು ಕೋಟ್ಯಾಧಿಪತಿಯಾಗಲಿದ್ದೀರಾ ಅಥವಾ ಇಲ್ಲವಾ ಎನ್ನುವುದನ್ನು ತಿಳಿಸಿಕೊಡಲಿದೆ. ಈ ಲೇಖನದಲ್ಲಿ ಅಂಗೈಯ ಮೇಲಿರುವಂತಹ ಒಂದು ಅಕ್ಷರದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅಂಗೈಯ ಮೇಲಿರುವ ವಿ ಅಕ್ಷರದ ಬಗ್ಗೆ ನೀವು ಸಂಪೂರ್ಣ ಮಾಹಿತಿ ಪಡೆಯಿರಿ. ಹೃದಯ ರೇಖೆಯ ಅಂತ್ಯದಲ್ಲಿ ವಿ ಇದ್ದರೆ ಇದು ತುಂಬಾ ಅದೃಷ್ಟ ಮತ್ತು ಅಂಗೈಯ ಮೇಲೆ ಈ ಅಕ್ಷರವು ಇಲ್ಲದೆ ಇದ್ದರೆ ನೀವು ಹೃದಯಹೀನರೆಂದು ಹೇಳಲಾಗುತ್ತದೆ. ಹೃದಯ ರೇಖೆಯಲ್ಲಿ ಈ ಅಕ್ಷರವು ಇದ್ದರೆ ನೀವು ತುಂಬಾ ಅದೃಷ್ಟವಂತರು ಮತ್ತು ನಿಮ್ಮ ವ್ಯಕ್ತಿತ್ವವನ್ನು ಇದರಿಂದ ಹೇಗೆ ತಿಳಿಯಬಹುದು ಎಂದು ನೋಡಿ….
ಅದರ ಸ್ಥಾನ
ಹೃದಯ ರೇಖೆಯ ಅಂತ್ಯದಲ್ಲಿ ವಿ ಅಕ್ಷರವು ಸಾಮಾನ್ಯವಾಗಿ ಕಂಡುಬರುವುದು. ಅಂಗೈಯ ಮೇಲೆ ಈ ಅಕ್ಷರವು ಇಲ್ಲದೆ ಇದ್ದರೆ ಆಗ ಆ ಜನರು ಹೃದಯಹೀನರು ಮಾತ್ರವಲ್ಲದೆ, ಪಶ್ಚಾತ್ತಾಪ ಪಡುವುದಿಲ್ಲ. ಪ್ರೀತಿ ಮತ್ತು ಪ್ರಶಂಸೆ ಮಾಡುವುದೇ ಇಲ್ಲ.
ಹೃದಯ ಗೆರೆಯ ಪ್ರಾಮುಖ್ಯತೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಹೃದಯ ರೇಖೆಯು ನಿಮ್ಮ ಸಂಬಂಧ ಮತ್ತು ಭಾವನೆಗಳನ್ನು ತಿಳಿಯಲು ನೆರವಾಗುವುದು. ಇದು ವ್ಯಕ್ತಿಯ ಪರಿಚಯವೇ ಇಲ್ಲದಿದ್ದರೂ ಆತನ ಬಗ್ಗೆ ತುಂಬಾ ತಿಳಿಯಲು ಇದು ನೆರವಾಗುವುದು. ಹೃದಯ ಗೆರೆಯ ಪ್ರಮುಖ ಕಾರಣವೆಂದರೆ ಇದು ನಿಮ್ಮ ಹಿಂದಿನ ಸಂಬಂಧದ ಬಗ್ಗೆಯೂ ಹೇಳುತ್ತದೆ. ವ್ಯಕ್ತಿಯ ಬಗ್ಗೆ ಹೇಳುವ ಪ್ರಮುಖ ನಾಲ್ಕು ರೇಖೆಗಳಲ್ಲಿ ಹೃದಯ ರೇಖೆಯು ಒಂದಾಗಿದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರಜ್ಞರು ಹೇಳುತ್ತಾರೆ. ಹೃದಯ ರೇಖೆಯಲ್ಲಿ ವಿ ಗೆರೆಯು ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ.
ಇದು ತುಂಡಾಗಿದ್ದರೆ
ಹೃದಯ ರೇಖೆಯು ತುಂಡಾಗಿದ್ದರೆ ಆ ವ್ಯಕ್ತಿಯು ಯಾವುದೇ ಕ್ಷಣದಲ್ಲೂ ತನ್ನ ಭಾವನೆಗಳನ್ನು ಬದಲಾಯಿಸಬಲ್ಲ ಎನ್ನುವ ಸೂಚನೆಯಾಗಿದೆ.
ಅಂತ್ಯದಲ್ಲಿ ವಿ ಅಕ್ಷರವು ಇದ್ದರೆ….
ಹಸ್ತಸಾಮುದ್ರಿಕ ಶಾಸ್ತ್ರಜ್ಞರ ಪ್ರಕಾರ ಅಂತ್ಯದಲ್ಲಿ ವಿ ಅಕ್ಷರವು ಕಾಣಿಸಿಕೊಂಡರೆ ಅಗ ಗುರಿಸೇರದ ಉದ್ಯಮ ಅಥವಾ ವೈಯಕ್ತಿಕ ಅಭಿವೃದ್ಧಿಯನ್ನು ತೋರಿಸುವುದು.
ನೀವು ಅದೃಷ್ಟವಂತರು!
ಅಂಗೈಯ ಮೇಲೆ ವಿ ಅಕ್ಷರವಿದ್ದರೆ ಆಗ ನೀವು ತುಂಬಾ ಅದೃಷ್ಟ ಯಶಸ್ವಿ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ಹಣವು ನಿಮಗೆ ಸಿಗಲಿದೆ. ಇನ್ನೊಂದು ಬದಿಯಲ್ಲಿ ನಿಮಗೆ ಒಳ್ಳೆಯ ಅದೃಷ್ಟ ಮತ್ತು ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿಗಳು ಸಿಗುವರು.
ನೀವು ತುಂಬಾ ನಂಬಿಕಸ್ಥರು
ನೀವು ತುಂಬಾ ನಂಬಿಕಸ್ಥ ಸ್ನೇಹಿತರನ್ನು ಪಡೆಯುವುದು ಮಾತ್ರವಲ್ಲದೆ, ನೀವು ಕೂಡ ಅವರಿಗೆ ತುಂಬಾ ಪ್ರೋತ್ಸಾಹ ನೀಡಲಿರುವಿರಿ. ಇನ್ನೊಂದೆಡೆಯಲ್ಲಿ ಸಮಾಜದಲ್ಲಿ ನಿಮಗೆ ಒಳ್ಳೆಯ ಹೆಸರು ಬರಲಿದೆ. 35ರ ಹರೆಯ ದಾಟಿದ ಬಳಿಕ ನಿಮ್ಮ ಜೀವನವು ಸಂಪೂರ್ಣವಾಗಿ ಯೂ ಟರ್ನ್ ತೆಗೆದುಕೊಳ್ಳಲಿದೆ. ನಿಮ್ಮ ಅಂಗೈಯಲ್ಲಿ ವಿ ಅಕ್ಷರವು ಹೃದಯ ರೇಖೆಯಲ್ಲಿದೆಯಾ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಬಾಡಿಸ್ಕೈ ಮಾಹಿತಿ.