2020ರ ವೇಳೆಗೆ ಪೆಟ್ರೋಲ್ ಕಾರು, ಬೈಕುಗಳು ರಸ್ತೆಯಲ್ಲಿ ಓಡಾಟ ನಡೆಸೋದು ತೀರ ಕಡಿಮೆ ಎನ್ನಲಾಗುತ್ತಿದೆ. ಏಕೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮ್ಯಾನುಫ್ಯಕ್ಚರಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ತೈಲ ಆಧಾರಿತ ವಾಹನಗಳ ಮಾರಾಟ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.

RELATED ARTICLES  ಗಮನ ಸೆಳೆದ ಕರ್ಣಾರ್ಜುನ ತಾಳಮದ್ದಲೆ.

2020ರ ವೇಳೆಗೆ ದೇಶದಲ್ಲಿ 6-7 ಮಿಲಿಯನ್ ಹೈಬ್ರೀಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ಇದಕ್ಕೆ ದೇಶದ ಪ್ರಮುಖ ಕಾರು ಕಂಪನಿಗಳು ಮಾತ್ರವಲ್ಲದೆ ಬೈಕ್ ಉತ್ಪಾದನ ಕಂಪನಿಗಳು ಕೂಡ ಕೈಜೋಡಿಸಿವೆ.

ಬಜಾಜ್ ಆಟೋ, ಹೀರೋ ಮೋಟರ್ಸ್, ಟಿವಿಎಸ್ ಸೇರಿದಂತೆ ಪ್ರಮುಖ ಬೈಕ್ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ಬೈಕ್ ಗಳ ಉತ್ಪಾದನೆಗೆ ಹೆಚ್ಚು ಹೆಚ್ಚು ಬಂಡವಾಳ ಹೂಡಲಾರಂಭಿಸಿವೆ. ಈಗಾಗಲೇ ಎಲೆಕ್ಟ್ರಿಕ್ ಆಟೋಗಳು ರೋಡಿಗಳಿದಿದ್ದು ಇನ್ನೆರಡು ವರ್ಷದಲ್ಲಿ ಎಲೆಕ್ಟ್ರಿಕ್ ಬೈಕ್ ಗಳು ಕೂಡ ಓಡಾಟ ನಡೆಸೋ ಎಲ್ಲಾ ಸಾಧ್ಯತೆಗಳಿವೆ.

RELATED ARTICLES  ಶಿರಸಿ ನಗರಸಭೆಯ ಮತ ಏಣಿಕೆ ವಿವರ ಹಾಗೂ ಗೆದ್ದವರ ಯಾದಿ ಇಲ್ಲಿದೆ.