ಅವಿಶ್ವಾಸ ನಿರ್ಣಯದ ಕುರಿತಾದಂತೆ ಸಂಸತ್ ನಲ್ಲಿ ಬಿಸಿಯೇರಿದ ಚರ್ಚೆಗಳು ನಡೆಯುತ್ತಿವೆ. ಜನಪ್ರತಿನಿಧಿಗಳ ನಡುವೆ ತೀವ್ರವಾದ ವಾಕ್ಸಮರಗಳು ಕೂಡಾ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಪ್ರಧಾನಿ ನರೇಂದ್ರ ಮೊದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸುತ್ತಿದ್ದ ಮಧ್ಯದಲ್ಲೇ ರಾಹುಲ್ ಗಾಂಧಿ ತಾವು ಕುಳಿತಿದ್ದ ಸ್ಥಳದಿಂದ ಸೀದಾ ಪ್ರಧಾನಿ ನರೇಂದ್ರ ಮೊದಿಯವರ ಬಳಿ ಬಂದು ಅವರನ್ನು ಆಲಂಗಿಸಿದರು.
ನಾನು ನಿಮಗೆ ಪಪ್ಪು ಆಗಿರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ ಎಂದರು. ನನ್ನಲ್ಲಿರುವ ಆಕ್ರೋಶ ಭಾವನೆಗಳು ಬಿಜೆಪಿ ಸದಸ್ಯರಲ್ಲೂ ಇದೆ. ನಾನು ಎಲ್ಲರನ್ನೂ ಕಾಂಗ್ರೆಸಿಗರನ್ನಾಗಿಯೂ ಬದಲಾಯಿಸುತ್ತೇನೆ ಎಂದರು. ತಮ್ಮ ದೀರ್ಘ ವಾಗ್ಧಾಳಿಯ ಬಳಿಕ ಪ್ರಧಾನಿ ಕುಳಿತಲ್ಲಿಗೆ ತೆರಳಿ ಅವರಿಗೆ ಹಸ್ತಲಾಘವ ನೀಡಿ ಆಲಿಂಗಿಸಿ ಬಂದರು. ಈ ವೇಳೆ ಸದನ ನಗೆ ಗಡಲಲ್ಲಿ ತೇಲಾಡಿತು. ಮತ್ತೆ ತಮ್ಮ ಸ್ಥಳಕ್ಕೆ ಬಂದು ನಾನು ಹಿಂದು, ನೀವು ಎಷ್ಟೇ ದೂರ ತಳ್ಳಿದರೂ ಹತ್ತಿರಮಾಡಿಕೊಳ್ಳುತ್ತೇನೆ ಎಂದರು.
ಕನ್ನಡ ನ್ಯೂಸ್ ಮಾಹಿತಿ.