ಶಿರಸಿ ಬಿಜೆಪಿ ಸದಸ್ಯರ ವಿರೋಧದ ನಡುವೆಯೂ ಅಧ್ಯಕ್ಷ ಪ್ರದೀಪ ಶೆಟ್ಟಿ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿ ಮೂರು ತಿಂಗಳ ಕಾಲಾವಕಾಶ ನೀಡಿ ಆದೇಶಿಸಿದ್ದಾರೆ.
ತಾಲೂಕಿನ ಅಟಲಜೀ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾದ ನಳಕ್ಕೆ ಮೀಟರ್‌ ಜೋಡಣೆ ವಿಷಯ ಆಡಳಿತ ಹಾಗೂ ವಿರೋಧಿ ಪಕ್ಷದ ಸದಸ್ಯರ ನಡುವೆ ಗದ್ದಲಕ್ಕೆ ಕಾರಣವಾಯಿತು.

ಮಾಜಿ ಅಧ್ಯಕ್ಷ ರವಿ ಚಂದಾವರ ವಿಷಯ ಪ್ರಸ್ತಾಪಿಸಿ, ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ 6 ಸಾವಿರ, ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ 5 ಸಾವಿರ ನಳಗಳಿದೆ. ಆದರೆ ಅಲ್ಲಿ ಮೀಟರ್‌ ಅಳವಡಿಸಿಲ್ಲ. ಆದರೆ ಶಿರಸಿಯಲ್ಲಿ ಏಕಾಏಕಿ ನಳಕ್ಕೆ ಮೀಟರ್‌ ಅಳವಡಿಸುವ ಕ್ರಮ ಕೈಗೊಂಡಿದ್ದು ಸರಿಯಲ್ಲ. ವಾರಕ್ಕೊಮ್ಮೆ ನಗರಸಭೆ ನೀರು ನೀಡಲಾಗುತ್ತಿದೆ. ಇಂತಹ ಸಮಸ್ಯೆ ಇಟ್ಟುಕೊಂಡು ಮೀಟರ್‌ ಅಳವಡಿಕೆಗೆ ಹೇಗೆ ಕ್ರಮ ಕೈಗೊಳ್ಳುತ್ತೀರಿ? ಕೂಡಲೇ ಮೀಟರ್‌ ಅಳವಡಿಕೆ ಕ್ರಮ ಕೈಬಿಡಬೇಕು ಎಂದು ಆಗ್ರಹಿಸಿದರು.

RELATED ARTICLES  ಕುಮಟಾ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಯುವ ಸೇವಾವಾಹಿನಿಯವರು ನಡೆಸಿದ ಜ್ಞಾನ ಸತ್ರ ಕಾರ್ಯಾಗಾರ ಸುಸಂಪನ್ನ

ಈ ಸಂದರ್ಭದಲ್ಲಿ ನಗರಸಭೆಯ ಯಾವುದಾದರೊಂದು ನಿಧಿಯಡಿ ಮೀಟರ್‌ ಅಳವಡಿಸಲು ಕ್ರಮ ಕೈಗೊಳ್ಳಿ ಎಂದು ಸದಸ್ಯ ಶ್ರೀಧರ ಮೊಗೇರ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಶ್ರೀಕಾಂತ ತಾರಿಬಾಗಿಲು ಮಾತನಾಡಿ, ಮೀಟರ್‌ ಅಳವಡಿಸುವುದು ಕಡ್ಡಾಯವಾಗಿದೆ. ಐಎಸ್‌ಐ ಮಾರ್ಕಿನ ಯಾವುದೇ ಕಂಪನಿಯ ಮೀಟರ್‌ ಅಳವಡಿಸಲು ಅವಕಾಶ ನೀಡಬೇಕು. ಕಾಲಮಿತಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

RELATED ARTICLES  ಕಾರವಾರ-ಮಡಗಾಂವ ಡೆಮು ರೈಲು ಪುನರಾರಂಭ

ಈ ವೇಳೆ ಮಾತನಾಡಿದ ಅವರು, ಮೀಟರ್‌ ಅಳವಡಿಕೆಯಿಂದ ನೀರಿನ ಸದ್ಬಳಕೆ ಆಗುತ್ತದೆ. ಈ ಕಾರಣ ಮೀಟರ್‌ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಸೂಚಿಸಿ ಸರ್ಕಾರದಿಂದ ಮಾನ್ಯತೆ ಪಡೆದ ಐಎಸ್‌ಐ ಮಾರ್ಕ್‌ ಹೊಂದಿರುವ ಯಾವುದೇ ಕಂಪನಿಯ ಮೀಟರ್‌ಗಳನ್ನು ಸಾರ್ವಜನಿಕರು ತಮ್ಮ ನಳಕ್ಕೆ ಅಳವಡಿಸಿಕೊಳ್ಳಬಹುದು ಎಂದು ಪ್ರದೀಪ ಶೆಟ್ಟಿ ಆದೇಶ ನೀಡಿದರು.