ಹೊನ್ನಾವರ: ಅತ್ತ ಶಿರಸಿಗೂ ಅಲ್ಲ ಇತ್ತ ಭಟ್ಕಳಕ್ಕು ಅಲ್ಲದೇ ಅತಂತ್ರವಾಗಿರುವ ರೀತಿಯಲ್ಲಿ ಕಡೆಗಣನೆಯಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಹಿರೆಬೈಲ್ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಮನವಿ ಕೇಳಿಬಂದಿದೆ. ಈ ಊರಿನಲ್ಲಿ ಆಗಬೆಕಾದ ಮೂಲಭೂತ ಸೌಕರ್ಯಗಳ ಬೇಡಿಕೆ ಮುಂದಿಟ್ಟು ಊರಿನ ಜನತೆ ಶಾಸಕರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಹಿರೆಬೈಲ್-ಹೊಸ್ಗೋಡು ಗ್ರಾಮಸ್ಥರಿಂದ ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರಿಗೆ ಅಭಿನಂದನಾ ಕಾರ್ಯಕ್ರಮ ಎರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಶಾಸಕ ಸುನಿಲ್ “ನಿಸ್ವಾರ್ಥದಿಂದ ತನ್ನ ಮೇಲೆ ವಿಶ್ವಾಸವಿಟ್ಟು ಅತಿ ಹೆಚ್ಚು ಮತನೀಡಿ ಗೆಲುವಿಗೆ ಶ್ರಮಿಸಿದ್ದಿರಿ ನಿಮಗೆ ನಾನು ಚಿರಋಣಿ ಮುಂದಿನ ದಿನದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿ ಕಾಮಗಾರಿಗಳನ್ನು ನಡೆಸುವೆ ಎಂದರು. ಶಾಸಕರಾದ ಮೇಲೆ ಕೆಲವರಿಗೆ ಮನಸ್ಸು ಕಲ್ಲಾಗುತ್ತದೆ, ಬುದ್ದಿ ಅಜಿರ್ಣವಾಗುತ್ತದೆ ಆದರೆ ನಾನು ಅದಕ್ಕೆ ಆಸ್ಪದ ಕೊಡುವುದಿಲ್ಲ. ಮಾಜಿ ಶಾಸಕ ಮಂಕಾಳ ವೈದ್ಯ ಅವಧಿಯಲ್ಲಿ ಚಾಲನೆ ಸಿಕ್ಕ ಕಾಮಗಾರಿಗಳು ಅಂದಾಜು 80% ರಷ್ಟು ಬಾಕಿ ಇದೆ, ಅವೆಲ್ಲವನ್ನು ಪೂರ್ಣಗೊಳಿಸುವುದು ನನ್ನ ಮುಂದಿನ ಪ್ರಯತ್ನವಾಗಿದೆ. ತನ್ನ ಅವಧಿಯಲ್ಲಾಗುವ ಯಾವುದೇ ಕಾಮಗಾರಿಗಳಲ್ಲಿ ಕಮಿಷನ್‍ಗೆ ಆಸೆ ಪಡದೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಹಿರೆಬೈಲ್-ಆರ್ಮುಡಿ ಸಂಪರ್ಕ ಸೇತುವೆ, ರಸ್ತೆ, ವಿದ್ಯುತ್ ಮೂಲಸೌಕರ್ಯಗಳ ಜೊತೆಗೆ ಊರಿನಲ್ಲಿ ಮೋಬೈಲ್ ಟವರ್ ನಿರ್ಮಾಣವಾಗಬೇಕಿದೆ ಎಂದು ಜನರು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಆರ್.ಪಿ ನಾಯ್ಕ, ಹಡಿನಬಾಳ ಗ್ರಾ.ಪಂ ಅಧ್ಯಕ್ಷ ಚಂದ್ರಹಾಸ ನಾಯ್ಕ, ಬಿಜೆಪಿ ಭೂತ್ ಕಮಿಟಿ ಸದಸ್ಯ ಗೋಪಾಲ ನಾಯ್ಕ, ಕೆಶವ ನಾಯ್ಕ ಬಳ್ಕೂರು, ನಾಗೇಶ ಗೌಡ, ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು. ಶಾಸಕರಿಂದ ಭರವಸೆ ಸಿಕ್ಕಿದ್ದು ಜನತೆ ನಿರಾಳರಾಗಬಹುದೆಂದು ವರದಿಯಾಗಿದೆ.

RELATED ARTICLES  ಗೋಕರ್ಣ ಕ್ಕೆ ಶೀಘ್ರವೇ ಪಶುವೈದ್ಯರ ನೇಮಕ : ಚೌಹಾಣ್