ನವದೆಹಲಿ: ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಇನ್ನು ಮುಂದೆ ಐದು ಮೆಸೇಜ್ ಗಳವರೆಗೆ ಮಾತ್ರ forward ಮಾಡುವ ಅವಕಾಶವನ್ನು ನೀಡಲಾಗಿದೆ.

ಈ ಕುರಿತಾಗಿ ವಾಟ್ಸ್ ಅಪ್ ತನ್ನ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸುತ್ತಾ” ಕೆಲವು ವರ್ಷಗಳ ಹಿಂದೆ ಏಕಕಾಲಕ್ಕೆ ವಾಟ್ಸ್ ಅಪ್ ಗೆ ಹಲವು ಸಂದೇಶಗಳನ್ನು ಫಾರ್ವರ್ಡ್ ಮಾಡುವ ಅವಕಾಶವನ್ನು ನೀಡಿತ್ತು, ಆದರೆ ಇಂದು ನಾವು ಇದನ್ನು ಸಿಮಿತ್ ಗೊಳಿಸುವ ಪರೀಕ್ಷೆಗೆ ಒಳಪಡಿಸುತ್ತಿದೇವೆ, ಇದು ಎಲ್ಲರಿಗೂ ಒಳಪಡಲಿದೆ. ಭಾರತದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಅತಿಹೆಚ್ಚು ಮೆಸೇಜ್ ಗಳನ್ನೂ ಫಾರ್ವರ್ಡ್ ಮಾಡಲಾಗುತ್ತದೆ” ಎಂದು ತಿಳಿಸಿದೆ.ಇತ್ತೀಚಿಗೆ ಕೇಂದ್ರ ಸರ್ಕಾರ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸ್ ಅಪ್ ಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಲು ಸೂಚಿಸಿತ್ತು.

RELATED ARTICLES  ಆತ್ಮ ಮತ್ತು ಮನಸ್ಸಿಗೆ ಆನಂದ ತರುವುದೆ ಆಧ್ಯಾತ್ಮ-ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್

ಇತ್ತೀಚಿಗೆ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಲಿಂದಾಗಿ ಹಲವಾರು ಹತ್ಯೆಗಳು ಕೂಡ ಆಗಿದ್ದವು. ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂದು ಐವರನ್ನು ಹತ್ಯೆಮಾಡಲಾಗಿತ್ತು. ಇನ್ನು ಕರ್ನಾಟಕದ ಬೀದರ್ ನಲ್ಲಿಯೂ ಸಹಿತ ಮಕ್ಕಳ ಕಳ್ಳರೆಂದು ಸುಮಾರು ಮೂವರನ್ನು ಗಾಯಗೊಳಿಸಿ ಒಬ್ಬನನ್ನು ಹತ್ಯೆ ಮಾಡಲಾಗಿತ್ತು.ಇನ್ನೊಂದೆಡೆಗೆ ಸುಪ್ರಿಂಕೋರ್ಟ್ ಈ ವಿಚಾರವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

RELATED ARTICLES  ಉಪನ್ಯಾಸಕರ ವೇತನ ತಡೆಹಿಡಿಯದಂತೆ ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವರ ನಿರ್ದೇಶನ ವಿ. ಪ. ಸದಸ್ಯ ಎಸ್.ವ್ಹಿ. ಸಂಕನೂರ.

ಜೀ ನ್ಯೂಸ್ ಮಾಹಿತಿ.