ಬಾಯಿಯ ದುರ್ಗಂಧವನ್ನು ಸಾಮಾನ್ಯವಾಗಿ “ಹ್ಯಾಲಿಟೋಸಿಸ್” ಎಂದು ಕರೆಯಲಾಗುತ್ತದೆ. ಇದು ರೋಗವಲ್ಲದೇ ಇದ್ದರೂ, ಸಮಾಜದಲ್ಲಿ ಮುಜುಗರಕ್ಕೆ ಕಾರಣವಾಗುತ್ತದೆ. ಬಾಯಿಯ ದುರ್ಗಂಧ ಎನ್ನುವುದು ತಾತ್ಕಾಲಿಕ ರೋಗಲಕ್ಷಣವಾಗಿದ್ದು, ಇದು ಸ್ವಲ್ಪಮಟ್ಟಿನ ನಿಯಮಿತ ಬಾಯಿಯ ಆರೈಕೆಯಿಂದ ಉಪಶಮನಗೊಳ್ಳಬಹುದು ಅಥವಾ ಇದು ಪರಿಹರಿಸಬೇಕಾದ ದೇಹದೊಳಗಿನ ದೈಹಿಕ ಅಸ್ವಸ್ಥತೆಯ ಕಾರಣದಿಂದ ಆಗಿರಬಹುದು. ಬಾಯಿಯ ದುರ್ಗಂಧವನ್ನು ತಡೆಗಟ್ಟಲು ಕೆಲವು ನೈಸರ್ಗಿಕ ವಿಧಾನಗಳಿಗೆ ನೀವು ಹುಡುಕುತ್ತಿದ್ದರೆ, ಬಾಯಿಯ ದುರ್ಗಂಧವನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಆಯುರ್ವೇದವು ಹಲವು ಪರಿಣಾಮಕಾರಿ ಪರಿಹಾರಗಳನ್ನು ಹೊಂದಿದೆ. ಆದರೆ ಮೊದಲು ಬಾಯಿಯ ದುರ್ಗಂಧದ ಸಂಭಾವ್ಯ ಕಾರಣಗಳತ್ತ ನೋಟ ಬೀರೋಣ.

ಬಾಯಿಯ ದುರ್ಗಂಧಕ್ಕೆ ಕಾರಣಗಳು

ಇವುಗಳು ಬಾಯಿಯ ದುರ್ಗಂಧದ ಕೆಲವು ಸಾಮಾನ್ಯ ಕಾರಣಗಳಾಗಿವೆ

ಬಾಯಿಯ ನೈರ್ಮಲ್ಯತೆಯನ್ನು ಸರಿಯಾಗಿ ಕಾಪಾಡಿಕೊಳ್ಳದೇ ಇರುವುದು ಮತ್ತು ಅಜೀರ್ಣತೆ
ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಸಾಲೆಯ ಪದಾರ್ಥಗಳ ಸೇವನೆ
ದೀರ್ಘಕಾಲ ಬಾಯಿ ಒಣಗುವಿಕೆ
ನಿಮ್ಮ ಬಾಯಿಯಲ್ಲಿ ಸೋಂಕು
ವಸಡಿನ ರೋಗ
ಮೂಗು, ಸೈನಸ್ಗಳು ಅಥವಾ ಗಂಟಲಿನ ಉರಿಯೂತ
ಕೆಲವು ಔಷಧಗಳು
ತಂಬಾಕು ಪದಾರ್ಥಗಳ ಬಳಕೆ
ಇತರೆ ಚಯಾಪಚಯದ ಸ್ಥಿತಿಗಳು, ಜಿಇಆರ್ಡಿ, ಅಪರೂಪದ ಖಚಿತ ಕ್ಯಾನ್ಸರ್ಗಳು
ಬಾಯಿಯ ದುರ್ಗಂಧದ ಪರಿಹಾರಕ್ಕೆ ಆಯುರ್ವೇದೀಯ ಪರಿಹಾರಗಳು

ಆಯುರ್ವೇದದ ದೃಷ್ಟಿಕೋನದಿಂದ, ಸೂಕ್ತವಲ್ಲದ ಬಾಯಿಯ ನೈರ್ಮಲ್ಯತೆ ಮತ್ತು ಅಜೀರ್ಣತೆಯು ಬಾಯಿಯ ಕೆಟ್ಟ ದುರ್ಗಂಧಕ್ಕೆ ಮೂಲ ಕಾರಣಗಳಾಗಿವೆ. ಎರಡೂ ಪರಸ್ಪರ ಸಂಬಂಧ ಹೊಂದಿವೆ. ಇದು ಏಕೆಂದರೆ ಅಜೀರ್ಣತೆಯು ದೇಹದಲ್ಲಿ ಮತ್ತು ಬಾಯಿಯ ಕುಹರದಲ್ಲಿ ಬ್ಯಾಕ್ಟೀರಿಯಾ ವರ್ಧಿಸುವುದಕ್ಕೆ ಕಾರಣವಾಗುತ್ತದೆ ಮತ್ತು ಈ ಮೂಲಕ ಕೆಟ್ಟ ದುರ್ಗಂಧಕ್ಕೆ ಕಾರಣವಾಗುತ್ತದೆ. ಬಾಯಿಯ ಕೆಟ್ಟ ದುರ್ಗಂಧಕ್ಕೆ ಕೇವಲ ಸಮಸ್ಯೆಯನ್ನು ಮರೆಮಾಚದೆಯೇ ಅದರ ಮೂಲದಲ್ಲಿ ಚಿಕಿತ್ಸೆ ನೀಡುವ ಕೆಲವು ಗಿಡಮೂಲಿಕೆಗಳು ಮತ್ತು ಸುಲಭ ಮನೆಯೌಷಧಗಳನ್ನು ಆಯುರ್ವೇದ ಶಿಫಾರಸು ಮಾಡುತ್ತದೆ.

RELATED ARTICLES  ಕೂದಲು ಉದುರುವ ಸಮಸ್ಯೆಯೆ ಹಾಗಾದರೆ ಇನ್ನೂ ಹೇದರಬೇಕಿಲ್ಲ !

1. ಪುದೀನ ಎಲೆಗಳು

ಪುದೀನವು ಬಾಯಿಯ ದುರ್ಗಂಧಕ್ಕೆ ಅತ್ಯುತ್ತಮ ಗಿಡಮೂಲಿಕೆಯಾಗಿದೆ. ದಿನದ ಸಮಯದಲ್ಲಿ ಕೆಲವು ತಾಜಾ ಪುದೀನ ಎಲೆಗಳನ್ನು ಅಗಿಯಲು ಪ್ರಯತ್ನಿಸಿ. ಪುದೀನವು ನಿಮ್ಮ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ ಮತ್ತು ಅದೇ ಸಮಯದಲ್ಲಿ ಎಲೆಗಳಲ್ಲಿರುವ ಕ್ಲೋರೋಫಿಲ್ ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಎಲೆಗಳನ್ನು ಅಗಿಯುವುದರಿಂದ ನಿಮ್ಮ ಬಾಯಿಯಿಂದ ದುರ್ಗಂಧದನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯವಾಗುವ ಜೊತೆಗೆ ನಿಮ್ಮ ಬಾಯಿಯಲ್ಲಿ ತಾಜಾ ರುಚಿಯೂ ಕಂಡುಬರುತ್ತದೆ.

2. ಲವಂಗ

ಲವಂಗವು ಬ್ಯಾಕ್ಟೀರಿಯಾ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಬಾಯಿಯಲ್ಲಿ ದುರ್ಗಂಧವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ನಿಮಗೆ ತಾಜಾ ಉಸಿರಾಟಕ್ಕೂ ಸಹಾಯ ಮಾಡುತ್ತದೆ. ಅತ್ಯುತ್ತಮ ವಿಧಾನವೆಂದರೆ ಕೆಲವು ಲವಂಗದ ತುಣುಕುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಜಗಿಯುವುದಾಗಿದೆ. ಅದರ ಬಲವಾದ ರುಚಿಯನ್ನು ಸಹಿಸಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ, ಲವಂಗದ ಚಹಾ ತಯಾರಿಸಿ ಅಥವಾ ಲವಂಗವನ್ನು ಹೊಂದಿರುವ ಟೂತ್ಪೇಸ್ಟ್ ಬಳಸಿ.

3. ಚಹಾ ಮರದ ಎಣ್ಣೆ

ಚಹಾ ಮರದ ಎಣ್ಣೆಯು ಕೆಟ್ಟ ದುರ್ಗಂಧವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ತೊಡೆದುಹಾಕಲು ಸಾಬೀತಾದ ಪರಿಹಾರವಾಗಿದೆ. ಬಾಯಿಯ ದುರ್ಗಂಧದನ್ನು ಉಂಟು ಮಾಡುತ್ತಿರುವ ಬ್ಯಾಕ್ಟೀರಿಯಾವು ಚಹಾ ಮರದ ಎಣ್ಣೆಯ ಪರಿಣಾಮಗಳಿಂದ ಪ್ರಭಾವಿತರಾಗುತ್ತವೆ ಎಂಬುದಾಗಿ ಅಧ್ಯಯನವು ದೃಢಪಡಿಸಿವೆ. ಬಾಯಿಯ ಕೆಟ್ಟ ದುರ್ಗಂಧದ ವಿರುದ್ಧ ಹೋರಾಡಲು, ಈ ಎಣ್ಣೆಯಿಂದ ಬಾಯಿ ಮುಕ್ಕಳಿಸ ಬಳಸಬಹುದು ಮತ್ತು ಸಂಪೂರ್ಣ ಸ್ವಚ್ಛತೆಯ ಪರಿಣಾಮಕ್ಕೂ ಬಳಸಬಹುದು.

4. ಬಡೇಸೋಂಪು ಬೀಜಗಳು

ಬಡೇಸೋಂಪಿನ ಬ್ಯಾಕ್ಟೀರಿಯಾ ನಿರೋಧಕ ಗುಣಲಕ್ಷಣಗಳು ಬಾಯಿಯ ದುರ್ಗಂಧದ ವಿರುದ್ಧ ಹೋರಾಡಲು ಸಹಾಯ ಮಾಡಬಹುದು. ಸ್ವಲ್ಪ ಪ್ರಮಾಣದಲ್ಲಿ ಬಡೇಸೋಂಪನ್ನು ಅಗಿಯಿರಿ ಅಥವಾ ಅವುಗಳನ್ನು ಚಹಾಗೆ ಸೇರಿಸಿ. ಅದನ್ನು ಜಗಿಯುವಾಗ, ಅವು ಜೊಲ್ಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಬಾಯಿಯ ದುರ್ಗಂಧವನ್ನು ಉಂಟುಮಾಡುವ ಕೀಟಾಣುಗಳನ್ನು ಸಾಯಿಸುತ್ತವೆ.

RELATED ARTICLES  ಸುಮಧುರ ಧ್ವನಿ ನಿಮ್ಮದಾಗಬೇಕೆ? ಇಲ್ಲಿವೆ ಟಿಪ್ಸ್ !

5. ತ್ರಿಫಲಾ

“ತ್ರಿಫಲಾ ಎನ್ನುವುದು ಆಯುರ್ವೇದದ ಮೂಲಕ ನಿಸರ್ಗವು ನೀಡಿರುವ ಅದ್ಭುತ ಕೊಡುಗೆಯಾಗಿದೆ. ಇದು ಕೇವಲ ಬಾಯಿಯ ದುರ್ಗಂಧವನ್ನು ನಿಭಾಯಿಸುವುದಲ್ಲದೇ ಜೀರ್ಣಾಂಗ ವ್ಯವಸ್ಥೆಯನ್ನೇ ಸರಿಪಡಿಸುತ್ತದೆ” ಎಂದು ಸಲಹೆ ನೀಡುತ್ತಾರೆ *ಲೀವರ್ ಆಯುಷ್ನ ಆಯುರ್ವೇದ ತಜ್ಞರಾಗಿರುವ ಡಾ.ಮಹೇಶ್.

ಡಾ. ಮಹೇಶ್ ಅವರಂತೆಯೇ, ಆಯುರ್ವೇದ ತಜ್ಞರು ತ್ರಿಫಲಾವನ್ನು ಶಿಫಾರಸು ಮಾಡುತ್ತಾರೆ. ಇದು ಸಾಂಪ್ರದಾಯಿಕವಾದ ಜೀರ್ಣಕ್ರಿಯೆಗೆ ಸಹಾಯ ನೀಡುವ ಮೂಲಿಕೆಯಾಗಿದ್ದು, ಇದು ಪರಿಣಾಮಕಾರಿ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ, ನಿಯಮಿತ ವಿಸರ್ಜನೆ ಮತ್ತು ಡೀಟಾಕ್ಸಿಫಿಕೇಶನ್ ಪ್ರಕ್ರಿಯೆಗೆ ಇಂಬು ನೀಡುತ್ತದೆ. ಇದು ಏಕೆಂದರೆ ಸಮತೋಲಿತ ಜೀರ್ಣಕ್ರಿಯೆ ಮತ್ತು ಬಾಯಿಯ ನೈರ್ಮಲ್ಯತೆಯು ಪರಸ್ಪರ ಸಂಬಂಧ ಹೊಂದಿವೆ. ಆಯುರ್ವೇದ ಅಂಗಡಿಗಳಲ್ಲಿ ಮಾತ್ರೆ ಅಥವಾ ಟಾನಿಕ್ ಆಗಿ ತ್ರಿಫಲಾ ಲಭ್ಯವಿದೆ.

ಬಾಯಿಯ ದುರ್ಗಂಧದ ವಿರುದ್ಧ ಹೋರಾಡಲು ನಿಯಮಿತ ಬಾಯಿಯ ಆರೈಕೆ

ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳುವುದು ಆಯುರ್ವೇದ ಸಂಪ್ರದಾಯದಲ್ಲಿ ಬಾಯಿಯ ನೈರ್ಮಲ್ಯತೆಯ ಭಾಗವಾಗಿದೆ, ಏಕೆಂದರೆ ಇದು ನಾಲಿಗೆಯಿಂದ ಮೃದುವಾದ ಬಿಲ್ಲೆಗಳನ್ನು ತೆಗೆದುಹಾಕುತ್ತದೆ ಮತ್ತು ಈ ಮೂಲಕ ನಾಲಿಗೆಯಲ್ಲಿ ಶೇಖರಣೆಯಾಗಿರುವ ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.
ದಿನಕ್ಕೆ ಮೂರು ಬಾರಿ -ಒಮ್ಮೆ ಬೆಳಿಗ್ಗೆ ಎದ್ದ ನಂತರ, ರಾತ್ರಿ ಮಲಗುವ ಮೊದಲು ಮತ್ತು ದಿನ ಸಮಯದಲ್ಲಿ ಭೋಜನಗಳ ನಂತರ ಒಮ್ಮೆ ಹಲ್ಲನ್ನು ಉಜ್ಜಲು (ಆದ್ಯತೆಯಾಗಿ ಪುದೀನ ಪದಾರ್ಥ ಇರುವ ಟೂತ್ಪೇಸ್ಟ್ ಬಳಸಿಕೊಂಡು) ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
ಫ್ಲಾಸಿಂಗ್ ಎನ್ನುವುದು ದುರ್ಗಂಧಕ್ಕೆ ಪ್ರಮುಖ ಕಾರಣವಾದ ಕುಳಿಗಳು ಮತ್ತು ಹಲ್ಲಿನ ಸವೆಯುವಿಕೆಯನ್ನು ತಡೆಗಟ್ಟಲು ಅತ್ಯಗತ್ಯವಾಗಿದೆ.