ಈಗ ಎಲ್ಲ ಆಧುನಿಕತೆಯ ಜೊತೆಗೆ ಓಟ.. ಒಂದು ಕ್ಷಣ ತಡವಾದ್ರೂ ನಿಲ್ಲುವ ಮಾತಿಲ್ಲ.. ಫಾಸ್ಟ್ ಆಗಿ ಓಡೋ ಸಮಯದ ಜೊತೆಗೆ ಜನರ ಓಟ.. ಅದೆಷ್ಟೋ ಹಳೆಯ ಆಚರಣೆಗಳು ಹಿರಿಯರು ಹೇಳಿಕೊಟ್ಟ ಬಿಟ್ಟು ಹೊರದಂತಹ ಅನೇಕ ವಿಚಾರಗಳು ಈಗ ಮರೆಯಾಗಿ ಬಿಟ್ಟಿದೆ..
ಅದರಲ್ಲಿ ಮನೆಯಿಂದ ಹೊರ ಹೋಗಬೇಕಾದರೆ ಯಾವುದು ಶಕುನ ಯಾವುದು ಅಪಶಕುನ ಅನ್ನೋ ಬಗ್ಗೆ ಹಿರಿಯರು ಹೇಳಿರುವುದನ್ನ ನೀವೂ ಕೇಳಿರ್ತೀರಿ.. ಈ ಬಗ್ಗೆ ನಮ್ಮಜ್ಯೋತಿಷ್ಯದಲ್ಲಿ ಉಲ್ಲೇಖಗಳಿವೆಂತೆ..
ಇಂದೇ ಈ ವಸ್ತುಗಳು ಮನೆಯಲ್ಲಿದ್ದರೆ ಹೊರ ಹಾಕಿ.. ಇಲ್ಲ ನೆಮ್ಮದಿ ಹಾಳಾದೀತು.!!
ಹೌದು, ಸಾಮಾನ್ಯವಾಗಿ ನಿಮಗೆ ಗೊತ್ತಿರುವ ಯಾವುದಾದರು ಕೆಲಸದ ಮೇಲೆ ರಸ್ತೆಯಲ್ಲಿ ಹೋಗಬೇಕಾದರೆ ಬೆಕ್ಕು ಬಲದಿಂದ ಎಡಕ್ಕೆ ಬಂದರೆ ಏನೋ ಎಡವಟ್ಟು ನಡೆಯುತ್ತದೆ ಅನ್ನೋ ನಂಬಿಕೆ ಇದೆ.. ಇದನ್ನ ನಂಬುವವರು ಕೆಲ ಕ್ಷಣ ಗಾಡಿಯನ್ನ ನಿಲ್ಲಿಸಿ ನಂತರ ಮುಂದೆ ಹೋಗುವುದುಂಟು..
* ಮನೆಯಿಂದ ಹೊರಗೆ ಹೊರಟ ವ್ಯಕ್ತಿಯನ್ನ ಏನಾದ್ರು ಕೇಳಿದ್ರೆ, ಉದಾಹರಣೆಗೆ ಹಣ ಅಥವಾ ಟೀ ಹೀಗೆ ಯಾವುದಕ್ಕಾದರು ಅವರನ್ನ ತಡೆದರೆ ಹೋಗುವ ಕೆಲಸ ಆಗೋದಿಲ್ವಂತೆ.
ನೂತನ ವರ್ಷಾರಂಭಕ್ಕೆ ಸೆವೆನ್ ಕಪ್ ಸ್ವೀಟ್ ಮಾಡಿ ಸವಿಯಿರಿ..
* ಯಾವುದಾದರು ಕೆಲಸಕ್ಕೆ ಹೊರಟಿರುವ ವ್ಯಕ್ತಿಯನ್ನ ಕರೆದು ತಡೆದು ನಿಲ್ಲಿಸಿದರೆ ಅದು ಅಪಶಕುನದ ಸಂಕೇತವಾಗಿರುತ್ತೆ ಅಂತ ಹೇಳಲಾಗುತ್ತೆ..
* ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ನಾಯಿಯೊಂದು ನಿಮ್ಮನ್ನ ನೋಡಿ ಸುಖಾಸುಮ್ಮನೆ ಬೊಗಳೋಕೆ ಶುರು ಮಾಡಿದ್ರೆ ಹೋಗುವ ಕೆಲಸದಲ್ಲಿ ತಡೆಯಾಗುವ ಸಾಧ್ಯತೆಗಳಿವೆಯಂತೆ..
* ಮನೆಯಿಂದ ಹೊರ ಬರಬೇಕಾದರೆ ಬೆಕ್ಕು ನಿದ್ದೆ ಮಾಡುತ್ತಿದ್ದರೆ ಆಥವಾ ಎರಡು ಬೆಕ್ಕುಗಳು ಕಿತ್ತಾಟಕ್ಕೆ ಬಿದ್ದರೆ ಅಪಶಕುನವಂತೆ..
ಈ ದೇವಸ್ಥಾನದಲ್ಲಿ ಭಕ್ತರಿಗೆ ಚಿನ್ನ-ಬೆಳ್ಳಿಯನ್ನೇ ಪ್ರಸಾದವಾಗಿ ನೀಡುತ್ತಾರೆ..!!
*ಪೊರಕೆ ಹಿಡಿದಿರುವುದು, ಒಳ್ಳೆ ಕೆಲಸಕ್ಕೆ ಹೊರ ನಡೆದಾಗ ಖಾಲಿ ಬಿಂದಿಗೆ ಹಿಡಿದು ಮುಂದೆ ಬರುವುದು, ಕೆಲಸದಲ್ಲಿ ಆಗುವ ಅಡಚಣೆಯ ಮುನ್ಸೂಚನೆಯಾಗಿರುತ್ತಂತೆ..
* ಯಾವುದಾದರು ವಿಷ್ಯದ ಬಗ್ಗೆ ಚರ್ಚೆ ನಡೆಸುವಾಗ ವ್ಯಕ್ತಿ ಸೀನಿದ್ರೆ ಅದು ಕೂಡ ಅಪಶಕುನದ ಮುನ್ಸೂಚನೆ ಅಂತ ನಂಬಲಾಗುತ್ತೆ..
ಹಾಗಾದ್ರೆ ಮನೆಯಿಂದ ಹೊರ ಬರುವಾಗ ಒಳ್ಳೆಯಾದಾಗುತ್ತೆ, ಶುಭಶಕುನ ಅಂತ ತಿಳಿಯಲು ಯಾವ ಘಟನೆಗಳು ಸಿಗುತ್ತವೆ ಅನ್ನೋ ಪ್ರಶ್ನೆ ನಿಮ್ಮಲ್ಲಿದ್ರೆ ಉತ್ತರ ಇಲ್ಲಿದೆ ನೋಡಿ..
* ಮನೆಯಿಂದ ಹೊರ ಬಂದಾಗ ಹಸು ಕಣ್ಣಿಗೆ ಕಂಡರೆ, ಅದರಲ್ಲು ಕರುವಿಗೆ ಹಾಲುಣಿಸುತ್ತಿದ್ದರೆ ಶುಭ ಶಕುನವೆಂದೆ ತಿಳಿಯಿರಿ..
* ಸಂಜೆಯ ಸಮಯದಲ್ಲಿ ನೀವು ಪ್ರಯಾಣ ಬೆಳೆಸಿದಾಗ ನಿಮ್ಮ ಕಣ್ಣಿಗೆ ಅಂಜನೇಯನ ಪ್ರತಿರೂಪ ಕೋತಿ ಕಾಣಿಸಿಕೊಂಡರೆ ಶುಭವಂತೆ..
* ಬೆಂಗಳೂರಿನ ಕಾಂಕ್ರೀಟ್ ನಗರಿಯಲ್ಲಿ ಮುಂಗುಸಿ ಕಾಣಿಸಿಕೊಳ್ಳುದೆ ಅಪರೂಪ ಅಕಸ್ಮಾತ್ ನಿಮಗೆ ಮುಂಗುಸಿ ಕಂಡರೆ ಹೋಗುವ ಕೆಲಸ ಹಣ್ಣಾದಂತೆಯೆ..
ಇದರ ಜೊತೆಗೆ ನಿಮಗೆ ನಿಮ್ಮ ಹಿರಿಯರು ಮತ್ತಷ್ಟು ವಿಚಾರಗಳನ್ನ ಹೇಳಿರ್ತಾರೆ. ಇದನ್ನ ಅನುಸರಿಸುವರು ಎಷ್ಟು ಜನರಿದ್ದಾರೋ ನಂಬದೆ ಇರುವ ಬಳಗವೂ ಇದೆ.. ಆಚಾರ ವಿಚಾರವನ್ನ ಪಾಲಿಸುವ ಪಾಲಿಸದೆ ಇರುವ ಅಧಿಕಾರ ಅವರವರಿಗೆ ಬಿಟ್ಟದ್ದು ಏನಂತೀರಾ..
Info: vAhini