ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಅವರು ಇಂದು ಕೆಲಕಡೆಗಳಲ್ಲಿ ಉಚಿತ ಎಲ್.ಪಿ.ಜಿ ಅಡುಗೆ ಅನಿಲ ಸಂಪರ್ಕ ವಿತರಿಸಿದರು.
ನಂತರ ಮಾತನಾಡಿದ ಅವರು ಎಲ್ಲಾ ಮನೆಗಳನ್ನೂ ಹೊಗೆಮುಕ್ತ ಮನೆಯನ್ನಾಗಿ ಮಾಡುವುದು ಮೋದಿಯವರ ಕನಸಾಗಿದೆ, ಅವರ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅರಣ್ಯ ಸಂಪತ್ತು ರಕ್ಷಣೆ ಮಾಡುವ ಮೂಲಕ ಪರಿಸರ ರಕ್ಷಣೆ ಸಾದ್ಯ ಹಾಗಾಗಿ ಎಲ್ಲಾ ಮನೆಗಳಲ್ಲೂ ಊರುವಲು ಮುಕ್ತ ಮನೆಯಾಗಿ ಎಲ್.ಪಿ.ಜಿ ಬಳಕೆ ಮಾಡಿ ಮೋದಿ ಜೀ ಕನಸು ನನಸು ಮಾಡಲು ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಗರೂ ಹಾಗೂ ಫಲಾನುಬವಿಗಳು ಹಾಜರಿದ್ದರು.