ಕುಮಟಾ: ತಾಲೂಕಿನ ಬಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡೇಅಂಗಡಿ ಗ್ರಾಮದ ಮಾದರಿರಸ್ತೆಯು ಶ್ರೀ ಸಾಮಾನ್ಯರಿಗೆ ಮೂಲ ಸೌಕರ್ಯದ ಕೊರತೆಯಿಂದ ಆಭಿವೃದ್ಧಿಯನ್ನೇ ಕಾಣದಂತಾಗಿದೆ ಎಂದರೆ ನಂಬಲು ಕೂಡ ಅಸಾಧ್ಯ. ಇಲ್ಲಿನ ನೈಜ ಸ್ಥಿತಿಯ ಅನಾವರಣವೇ ಈ ವರದಿ.
ಮಾದರಿ ರಸ್ತೆಯ ಲಕ್ಷ್ಮೀ ಜಟ್ಟಪ್ಪ ನಾಯ್ಕ ಮತ್ತು ವೆಂಕಮ್ಮ ಜಟ್ಟಪ್ಪ ನಾಯ್ಕ ಇವರ ಮನೆಯ ಸಾಮಾನ್ಯ ಮೂಲಭೂತ ಸೌಕರ್ಯದ ಬಗ್ಗೆ ಪರಿಶೀಲನೆ ನಡೆಸಿದರೆ, ಸಾವಿರ ಸಮೀಪದ ಜನಸಂಖ್ಯೆ ಹೊಂದಿರುವರುವ ಈ ಗ್ರಾಮದಲ್ಲಿ ಈ ಹಿಂದೆ ಪಂಚಾಯತದಿಂದ ಸಾಕಷ್ಟು ಅಭಿವೃದ್ಧಿ ಕೂಡ ಆಗಿರುವು ಹೆಮ್ಮೆಯ ವಿಷಯ. ಸಾಕಷ್ಟು ವಿದ್ಯಾವಂತರ, ಸಾಮಾಜಮುಖಿ ಉತ್ಸಾಹಿ ರಾಜಕಾರಣಿಗಳ, ನೌಕರರ, ಸಾಮಾಜಿಕ ಕಳಕಳಿ ಹೊಂದಿರುವ ಈ ಭಾಗದಲ್ಲಿ ಲಕ್ಷ್ಮೀ ಮತ್ತು ವೆಂಕಮ್ಮ ಇವರ ಮನೆಗೆ ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲ ಮತ್ತು ಮನೆಯ ಮಂದಿಗೆ ಅಡ್ಡಾಡಲು ಸರಿಯಾದ ದಾರಿಕೂಡ ಇಲ್ಲ. ಬಾಡ ಗ್ರಾಮ ಪಂಚಾಯಿತಿಯ ಸಾಮಾಜಿಕ ನ್ಯಾಯು ಸಮಿತಿಯು ಲಕ್ಷ್ಮೀ ನಾಯ್ಕ ಇವರ ಮನವಿಗೆ ಸ್ಪಂದಿಸಿ 4/8/2016 ರಂದು ನೀಡಿದ ಠರಾವಿನ ಪ್ರಕಾರ ಇವರಲ್ಲಿ ಸರಿಯಾದ ದಾಖಲಾತಿ ಇಲ್ಲದೇ ಇರುವುದರಿಂದ ನಮ್ಮಿಂದ ಅಸಾಧ್ಯೆಂಬಂತೆ ಸಂಬಂಧಿದ ಇಲಾಖೆಗೆ ಕಳುಹಿಸುವಂತೆ ಸಭೆ ನಿರ್ಣಯಿಸಿ ತಿಳಿಸಿರುತ್ತಾರೆ. ಸರಿಯಾದ ಮಾಹಿತಿನ್ನೇ ಅರಿಯದ ಈ ಕುಟುಂಬ ಹೋಗುವುದಾದರು ಯಾವ ಇಲಾಖೆಯ ಬಳಿ?
ಇನ್ಯಾರು ನಮಗೆ ಹಿತರು ಎಂಬಂತೆ ಕಂಡ ಕಂಡವರಲ್ಲಿ ನೋವು ಹೇಳಿಕೊಳ್ಳುವ ಸ್ಥಿತಿ ಬಂದೊದಗಿದೆ. ಪ್ರತೀ ಬಾರಿಯೂ ಪಂಚಾಯತದಲ್ಲಿ ವಿಷಯ ತೋಡಿ ಕೊಂಡರೂ ಭಾಗದ ಜನಪ್ರತಿನಿಧಿಗಳು ಇವರಿಗೆ ಯಾವುದೇ ಸಹಾಯ ಹಸ್ತ ಚಾಚದೇ ಕೈ ಕಟ್ಟಿ ಕುಳಿತಿರುವುದು ಯಾಕೆ ? ಮುಂದೆ ತಮ್ಮದೇ ಪಕ್ಷದ, ತಮ್ಮದೇ ಸರಕಾರ ಇದ್ದಾಗ ಯಾಕೆ ಈ ವಿಷಯನ್ನು ಎಂ.ಎಲ್.ಎ ಅವರಲ್ಲಿ ಪ್ರಸ್ತಾಪಿಸಿ ಪರಿಹಾರಕ್ಕೆ ಮನಮಾಡಿಲ್ಲ ಎಂಬುದು ಯಕ್ಷಪ್ರಶ್ನೆಯಾಗೆ ಉಳಿದಿದೆ. ಮನಸ್ಸಿದ್ದರೆ ಮಾರ್ಗ ಆದರೆ ಮನಸ್ಸೆ ಇಲ್ಲವಾದಲ್ಲಿ ಮಾರ್ಗ ಹೇಗೆ ದೊರಕಿತು ಎಂಬುವುದು ಜನರ ಅಭಿಪ್ರಾಯವಾಗಿದೆ.
ಇಂತಹ ವಿಷಯವನ್ನು ಸ್ಥಳಿಯ ಜನಪ್ರತಿನಿಧಿಗಳಿಗೆ ಎಲ್ಲಾ ಗೊತ್ತಿರುವಾಗ ಪರಿಹಾರದ ಬರವಸೆ ಬಾರದೆ ಇರುವಾಗ ಎಮ್.ಎಲ್.ಎ ಅಂತವರಲ್ಲಿ ನೇರವಾಗಿ ಮಾತನಾಡಿ ಪರಿಹಾರದ ಬರವಸೆ ಪಡೆದರೆ ಕೊನೆಗೆ ನಾವು ಇದ್ದು ಕೂಡ ನಮ್ಮನ್ನ ಕಡೆಗಾಣಿಸುವುದು ಸರಿಯಲ್ಲ ಎನ್ನುವ ಮಾತು ಸ್ವ-ಪ್ರತಿಷ್ಠಿಯ ಮಾತು ಎಂತಹ ಬುದ್ಧಿ ಜೀವಿಗಳಿಗೂ ಕೂಡ ಒಮ್ಮೆಲೇ ತಲೆನೋವು ಬಾರದೆ ಇರದು. ಸಾಮಾನ್ಯ ವ್ಯಕ್ತಿ ಈ ವಿಷಯ ಕ್ಕೆ ಪ್ರಸ್ತಾಪ ಮಾಡಲು ಹೋದರೆ ಅವರ ಮೇಲೆ ಕೆಂಗಣ್ಣು. ಅಂತ ಕೆಂಗಣ್ಣಿಗೆ ಹೆದರಿ ಅಭಿವೃದ್ಧಿಗೆ ಕಾರಣ ಆಗಬೇಕಾದ ಊರು ಇಚ್ಛಾಶಕ್ತಿಯ ಕೋರತೆಯಿಂದ, ಸ್ವಾರ್ಥ ಮನೆಮಾಡಿರುವುದಂತು ಸುಳ್ಳಲ್ಲ ಎಂಬ ನುಡಿ ಸಾಕಷ್ಟು ಜನರ ಮಾತಲ್ಲಿ ತುಂಬಿ ತುಳುಕುತ್ತಿರುತ್ತವೆ. “ಹುಟ್ಟು ಒಂದು ದಿನ ಸಾವು ಒಂದು ದಿನ” ಅಂತರದಲ್ಲಿಯೂ ಕೂಡ ಸ್ವಾರ್ಥ ಮನೆ ಮಾಡಿ ವರ್ತಿಸುತ್ತಿರುವುದು ವಿಪರ್ಯಾಸ. ಸಮಾಜಮುಖಿ ಕೆಲಸ ಮಾಡುವ ಪ್ರತಿನಿಧಿಗಳು ಅಭಿವೃದ್ಧಿಯ ನೆಪದಲ್ಲಾದರು ಕುಗ್ರಾಮ ಅನ್ನೋ ಹಣೆಪಟ್ಟಿ ಅಭಿವೃದ್ಧಿಗೆ ಸುರಿಸುತ್ತಾರೆ. ಆದರೆ ಗುಡೇಅಂಗಡಿಯು ಅಭಿವೃದ್ಧಿ ಹೊಂದುತ್ತಿರವ ಹೆಮ್ಮೆಯ ಗ್ರಾಮವಾಗಿ ಈಗಿನ ಕಾಲದಲ್ಲೂ ಮಾದರಿರಸ್ತೆಯಲ್ಲಿ ವಿದ್ಯುತ್ ಇಲ್ಲದೇ ಜೀವನ ನಡೆಸುತ್ತಿದ್ದಾರೆ ಎಂದರೆ ಕುಗ್ರಾಮ ಎಂದೇ ಜನಮನದಲ್ಲಿ ಸಾಭಿತಾದಿತು. ಓಡಾಡಲು ಜಾಗವಿಲ್ಲ ವಿದ್ಯುತ್ ಎಂಬುದು ಕಾಣಲೇ ಇಲ್ಲ ಅಂತಾದರೆ ಈ ಹಿಂದಿನವರು ಈವರೆಗೆ ಸಂಸಾರ ನಡೆಸಿಲ್ಲ ಎಂದರೆ ಸರಿಯಾದಿತೇ ಹೇಳಿ. ಇವರ ಜೀವನವೆಂದರೆ ಹಗ್ಗದ ಮೇಲೆ ಅಡ್ಡಾಡಿದಂತೆ ಆಗಿದೆ. ಹೊಂದಾಣಿಕೆಯೇ ಮಹತ್ವವಾದ ಕೊಂಡಿ. ಸ್ವಲ್ಪ ಜಾರಿದರು ರಸ್ತೆಯಲ್ಲಿ ಇದ್ದವರು ಮನೆಗೆ ತೆರಳಲ್ಲ. ಮುನೆಯಲ್ಲಿ ಇದ್ದಾವರು ರಸ್ತೆದಾಟಲು ಸಾಧ್ಯವಿಲ್ಲ. ಸಧ್ಯದ ಸ್ಥತಿಗತಿ ಗಮನಿಸಿ ಅವರನ್ನು ಪ್ರಶ್ನಿಸಿದರೆ ಕೊನೇಪಕ್ಷ ತೂಗುಸೇತುವೆಯಾದರೂ ಎಂಬಂತೆ ಅವರು ಮಾತಿನ ಮೂಲಕ ನೋವನ್ನು ಹೊರಹಾಕಿರುತ್ತಾರೆ.
ನಿನ್ನೆ ಮೊನ್ನೆಯ ಮಳೆಗೆ ಲಕ್ಷ್ಮೀ ನಾಯ್ಕ ಇವರ ಮನೆಯ ಒಂದುಬದಿಯ ಗೊಡೆ ಕುಸಿದು ಬಿದ್ದಿರುತ್ತದೆ. ಇಂತಹ ಪ್ರದೇಶದಲ್ಲಿ ಗ್ರಾಮವಾತ್ಸವ್ಯದಂತಹ ಕಾರ್ಯಕ್ರಮ ಹಾಕಿಕೊಂಡಾಗ ಮಾತ್ರ ವಾಸ್ತವಿಕ ಸ್ಥಿತಿ ಅರ್ಥ ಆಗುವುದರ ಜೋತೆ ಮುಖ್ಯಮಂತ್ರಿಗಳ ಅಭಿವೃದ್ಧಿಯ ಕನಸು ಕೂಡ ನೆರವೇರಿದಂತೆ. ಈ ಎರಡು ಕುಟುಂಬದವರಿಗೆ ಜನಪ್ರತಿಗಳು ಸನ್ಮಾನ್ಯ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರು ತಮ್ಮದಾದ ಘನ ಪ್ರಯತ್ನದಿಂದ ಸಮಸ್ಯೆ ಬಗೆಸರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ಈ ಕುಟುಂಬದ ಸದಸ್ಯರು ಆದಷ್ಟೂ ಬೇಗನೆ ಸ್ಪಂದನೆಗೆ ಮಾನ್ಯ ಶಾಸಕರಲ್ಲಿ ಬಾಡ ನ್ಯೂಸ್ ಹಾಗೂ ಸತ್ವಾಧಾರ ನ್ಯೂಸ್ ಬಳಗದ ಪರವಾಗಿ ಜಂಟಿಯಾಗಿ ನಮ್ರತೆಯಿಂದ ಮಾನ್ಯ ಶಾಸಕರಲ್ಲಿ ವಿನಂತಿಸುವ ಜೊತೆಗೆ ಸಂಭಂದಿಸಿದ ಸಹ ಹೃದಯಿ ಜನಪ್ರತಿನಿಧಿಗಳು ಸಹಕರಿಸಿ ಈ ಬಡ ಕುಟುಂಬಕ್ಕೆ ಬೆಳಕಾಗಬೇಕಾಗಿ ಈ ಮೂಲಕ ಮನವಿ ಮಾಡಿದೆ.