ಕುಮಟಾ:- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ. ಗಿಬ್ ಬಾಲಕಿಯರ ಪ್ರೌಢಶಾಲೆ ಕುಮಟಾ. ಹಾಗೂ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾ ತಾಲುಕಾ ಪ್ರೌಢಶಾಲೆಗಳ ಕನ್ನಡ ಭಾಷಾ ಶಿಕ್ಷಕರ ಪ್ರಥಮ ಕಾರ್ಯಾಗಾರವನ್ನು ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಮುಖ್ಯೋಧ್ಯಾಪಕಿಯರಾದ ಶ್ರೀಮತಿ ನೀರಜಾ.ಎಸ್.ನಾಯಕರವರು “ಶೈಕ್ಷಣಿಕ ಬದುಕು ಮನುಷ್ಯನ ಜೀವನದಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ. ಎನ್ನುವುದನ್ನು ತಿಳಿಸುತ್ತಾ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸಬಲೀಕರಿಸುವ ನಿಟ್ಟಿನಲ್ಲಿ ಅಭಿವ್ಯಕ್ತಿ ಕೌಶಲ್ಯವನ್ನು ಬೆಳೆಸುವ ಭಾಷೆಯು ವಿದ್ಯಾರ್ಥಿಗಳಲ್ಲಿ ಉತ್ಸಾಹ ಪ್ರೇರಣೆ ಹಾಗೂ ಅಭಿರುಚಿಗಳನ್ನು ಮೂಡಿಸುವಂತಿರಬೇಕು” ಎಂದರು.

RELATED ARTICLES  ರಸ್ತೆ ಅಪಘಾತ ಪ್ರಯಾಣಿಕರ ಸ್ಥಿತಿ ಗಂಭೀರ

ಪ್ರಾಸ್ತಾವಿಕ ನುಡಿಗಳನ್ನಾಡಿದ ಕುಮಟಾ ಪ್ರೌಢಶಾಲಾ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪಾಂಡುರಂಗ ವಾಗ್ರೇಕರ್‍ವರು “ಕನ್ನಡ ಭಾಷೆಯ ಶಿಕ್ಷಕರು ಹೆಚ್ಚು ಸೃಜನಶೀಲರಾಗಿದ್ದಾರೆ. ಹೆಚ್ಚೆಚ್ಚು ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ ಉತ್ತಮ ಫಲಿತಾಂಶ ಬರಲು ಕಾರಣೀಭೂತರಾಗಿದ್ದಾರೆ” ಎಂದರು.
ಕನ್ನಡ ಸಂಘದ ಇಬ್ಬರು ಸೇವಾ ನಿವೃತ್ತ ಹೊಂದಿದ ಶಿಕ್ಷಕರಾದ ಶ್ರೀ.ಎಂ.ಎಚ್.ನಾಯ್ಕ.ದಿವಗಿ,ಶ್ರೀ ಜಿ.ಟಿ.ನಾಯಕ ಸಂತೆಗುಳಿರವರನ್ನು ಶ್ರೀಮತಿ ನೀರಜಾ ನಾಯಕ ಕನ್ನಡ ಸಂಘದ ಅಧ್ಯಕ್ಷರು & ಸದಸ್ಯರು ಗೌರವ ಪೂರಕವಾಗಿ ಸನ್ಮಾನಿಸಿದರು. ಶ್ರೀಮತಿ ರಮಾ.ನಾಯ್ಕ.ಮುಖ್ಯೋಧ್ಯಾಪಕಿ ಸನ್ಮಾನಿತ ಶಿಕ್ಷಕರ ಕುರಿತು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತಾಡಿದ ಎಂ.ಎಚ್.ನಾಯ್ಕ ರವರು “ಗುಣಾತ್ಮಕ ಶಿಕ್ಷಣ ನೀಡಬೇಕಾದರೆ ಇಂತಹ ವಿಷಯ ಕಾರ್ಯಾಗಾರ ಶಿಕ್ಷಕರಿಗೆ ಅತ್ಯಗತ್ಯ”ಎಂದರು.
ಜಿ.ಟಿ.ನಾಯಕರವರು “ಕನ್ನಡ ಭಾಷೆಯ ಉಳಿವಿಗಾಗಿ ಭಾಷಾ ಶಿಕ್ಷಕರು ಪ್ರಯತ್ನಸಬೇಕು” ಎಂಬ ನುಡಿಗಳನ್ನಾಡಿದರು.

RELATED ARTICLES  ಮುರೂರು-ಕಲ್ಲಬ್ಬೆ ಮತ್ತು ವಾಲಗಳ್ಳಿ-ಕೂಜಳ್ಳಿಯಲ್ಲಿ ದಿನಸಿ ವಸ್ತುಗಳ ಕಿಟ್ ವಿತರಿಸಿದ ಮಾಜಿ ಶಾಸಕಿ ಶಾರದಾ ಶೆಟ್ಟಿ.

ಹೈಸ್ಕೂಲ್ ವಿದ್ಯಾರ್ಥಿನಿಯಾದ ಚೇತನಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಕನ್ನಡ ಸಂಘದ ಉಪಾಧ್ಯಕ್ಷರಾದ ಮುಖ್ಯೋಧ್ಯಾಪಕ ಎಸ್.ಜಿ.ಭಟ್ ರವರು ಸರ್ವರನ್ನು ಸ್ವಾಗತಿಸಿದರು.. ಶಿಕ್ಷಕರಾದ ಶ್ರೀ ಈಶ್ವರ.ಎ.ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಶಿವಾನಂದ ಭಟ್ಟರವರು ವಂದಿಸಿದರು. ನಂತರ ಪಾಂಡುರಂಗ ವಾಗ್ರೇಕರ್ ಮತ್ತು ಎಸ್.ಜಿ.ಭಟ್‍ರವರು ಕನ್ನಡ ವಿಷಯದಲ್ಲಿರುವ ಕ್ಲೀಷ್ಟಾಂಶಗಳನ್ನು ಶಿಕ್ಷಕರ ಜೊತೆ ಚರ್ಚಿಸಿ ವಿಷಯ ಮಂಡಿಸಿದರು. ಕುಮಟಾ ತಾಲೂಕಾ ಎಲ್ಲಾ ಪ್ರೌಢಶಾಲಾ ಕನ್ನಡ ಶಿಕ್ಷಕರು ಕಾರ್ಯಾಗಾರ ಪ್ರಯೋಜನ ಪಡೆದುಕೊಂಡರು.

ವರದಿ:-ಎನ್.ರಾಮು.ಹಿರೇಗುತ್ತಿ