ಕುಮಟಾ:- “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಪಠ್ಯಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿವಿಧ ವಿಷಯ ಸಂಘಗಳ ರಚನೆ ಅತೀ ಅವಶ್ಯಕ” ಎಂದು. ಸೆಕೆಂಡರಿ ಹೈಸ್ಕೂಲ್ ಮುಖ್ಯೋಧ್ಯಾಪಕರಾದ ರೋಹಿದಾಸ್.ಎಸ್.ಗಾಂವಕರ್ ನುಡಿದರು.

ಅವರು ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲ್ಲಿ ವಿವಿಧ ವಿಷಯ ಸಂಘಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.”ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಶಾಲಾ ವಿಷಯ ಸಂಘಗಳು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ” ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು.ಹಿರೇಗುತ್ತಿ “ನಮ್ಮ ಶಾಲೆಯಲ್ಲಿ ಸಾಹಿತ್ಯ ಸಂಘ, ವಿಜ್ಞಾನ ಸಂಘ,ಪ್ರಕೃತಿ ಇಕೋ ಕ್ಲಬ್,ಆರೋಗ್ಯ ಕೂಟ,ಗಣಿತ ಸಂಘ,ಕಾನೂನು ಮತ್ತು ಸಾಕ್ಷರತಾ ಸಂಘ,ಕ್ರೀಡಾ ಸಂಘ.ಇತಿಹಾಸ ಸಂಘ,ಇಂಗ್ಲೀಷ ಸಂಘ,ಹಿಂದಿ ಮತ್ತು ಸಂಸೃತ ವಿಷóಯ ಸಂಘಗಳು ಉದ್ಘಾಟನೆಗೊಂಡು ಮುಂದಿನ ಕಾರ್ಯಕ್ರಮಗಳಿಗೆ ಸಿದ್ಧವಾಗಿದೆ.ವಿದ್ಯಾರ್ಥಿಗಳು ಎಲ್ಲ ಸಂಘಗಳಲ್ಲೂ ಭಾಗವಹಿಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು”.

RELATED ARTICLES  ಎಸ್.ಡಿ.ಎಂ. ಕಾಲೇಜಿನಲ್ಲಿ 'ಸೂಪರ್ ಮೆಗಾ ಕರಿಯರ್ ಕನ್ಸಲ್ಟಿಂಗ್' ಕಾರ್ಯಕ್ರಮ

ಸಾಹಿತ್ಯ ಸಂಘ ಹಾಗೂ ಸಾಂಸೃತಿಕ ಸಂಘದ ಧೇಯ್ಯೋಧ್ಧೇಶಗಳ ಕುರಿತು ಮಾರ್ಗದರ್ಶಕರಾದ ಶಿಲ್ಪಾ.ಅರವಿಂದ್.ನಾಯಕ, ಕ್ರೀಡಾ ಸಂಘದ ಕುರಿತು ಮಾರ್ಗದರ್ಶಕರಾದ ದೈಹಿಕ ಶಿಕ್ಷಕ ನಾಗರಾಜ.ಜಿ ನಾಯಕ, ಆರೋಗ್ಯ ಕೂಟದ ಉದ್ದೇಶ ಕೈಗೊಳ್ಳುವ ಕಾರ್ಯಕ್ರಮ ಮತ್ತು ಪ್ರಕೃತಿ ಇಕೋ ಕ್ಲಬ್‍ನ ಕುರಿತು ವಿಜ್ಞಾನ ಸಂಘದ ಮಾರ್ಗದರ್ಶಕರಾದ ಮಹಾದೇವ ಗೌಡ, ಗಣಿತ ಸಂಘದ ಕುರಿತು ವಿದ್ಯಾರ್ಥಿ ಶಶಿ ಪಟಗಾರ, ಇಂಗ್ಲೀಷ್ ಸಂಘದ ಕುರಿತು ವಿದ್ಯಾಥಿರ್üನಿ ವಿನಯಾ ಗೌಡ, ಹಿಂದಿ ಸಂಘದ ಕುರಿತು ಶಿಕ್ಷಕಿ ಇಂದಿರಾ ನಾಯಕ, ಸಂಸ್ಕøತ ಸಂಘದ ಕುರಿತು ಪ್ರೀತಿ ಗಾಂವಕರ್. ಇತಿಹಾಸ ಸಂಘ ಮತ್ತು ಕಾನೂನು ಸಾಕ್ಷರತಾ ಸಂಘದ ಕುರಿತು ಮಾರ್ಗದರ್ಶಕ ಶಿಕ್ಷಕಿಯರಾದ ಜಾನಕಿ ಗೊಂಡ ತಿಳಿಸಿದರು.

RELATED ARTICLES  ಭಟ್ಕಳದಲ್ಲಿ ಮಳೆಯಿಂದಾಗಿ ಅವಾಂತರ

ಕಾರ್ಯಕ್ರಮದಲ್ಲಿ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ್, ಸೌಜನ್ಯ ಬಂಟ್, ಕವಿತಾ ಅಂಬಿಗ ಉಪಸ್ಥಿತರಿದರು ಎಲ್ಲ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಶಶಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿನಿ ಸಹನಾ ಗೌಡ ಸರ್ವರನ್ನು ಸ್ವಾಗತಿಸಿದಳು. ವಿದ್ಯಾರ್ಥಿ ಪ್ರತಿನಿಧಿ ವೆಂಕಟೇಶ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ವಿನಯಾ ಗೌಡ ವಂದಿಸಿದಳು.

ವರದಿ:ಎನ್.ರಾಮು.ಹಿರೇಗುತ್ತಿ