ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜಾರೋಹಣ ಮಾಡಿದ ಆರೋಪದಲ್ಲಿ ಗೌರಿ ಲಂಕೇಶ್ ಪ್ರಕರಣದ ಪರಶುರಾಮ ವಾಗ್ಮೋರೆ ಸೇರಿದಂತೆ 6 ಜನರನ್ನು ಖಲಾಸೆ ಮಾಡಿ ವಿಜಯಪುರ 1ನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.
2012ರ ಜನವರಿ 1ರಂದು ಸಿಂದಗಿಯ ತಹಶೀಲ್ದಾರ್ ಕಚೇರಿ ಮೇಲೆ ಪರಶುರಾಮ್ ವಾಗ್ಮೋರೆ ಸೇರಿದಂತೆ ಅನಿಲ ಸೋಲಂಕರ, ಮಲ್ಲನಗೌಡ ಪಾಟೀಲ, ರೋಹಿತ ನಾವಿ, ಸುನಿಲ ಅಗಸರ, ಅರುಣ ಪಾಕ್ ಧ್ವಜ ಹಾರಿಸಿದ್ದರು.
ಈ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ 5ನೇ ಆರೋಪಿಯಾಗಿದ್ದ. ಈ ಆರು ಜನ ಆರೋಪಿಗಳ ಮೇಲೆ ಕಲಂ 124A ಸಂಚು, 153A ದೇಶದ ವಿರುದ್ಧ ಮಾತು, ಕಲಂ120B ಪ್ರಚೋದನಕಾರಿ ಭಾಷಣ ಐಪಿಸಿ ಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ ಒಂದನೇ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಗೀತಾ ಕೆ. ಬಿ, ಪ್ರಕರಣದ ತನಿಖೆಯಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಆರೋಪಿಗಳ ಖಲಾಸೆಗೊಳಿಸಿ ಆದೇಶ ನೀಡಿದ್ದಾರೆ.
ಈ ಪ್ರಕರಣದ 5ನೇ ಆರೋಪಿಯಾಗಿರುವ ಹಿಂದೂಪರ ಸಂಘಟನೆ ಕಾರ್ಯಕರ್ತನಾಗಿರುವ ಪರಶುರಾಮ್ ವಾಗ್ಮೋರೆ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾನೆ. ಈತನನ್ನು ಈಗಾಗಲೇ ಎಸ್.ಐಟಿ ವಶಕ್ಕೆ ಪಡೆದಿದ್ದು, ತನಿಖೆ ನಡೆಸಿದೆ.