ಸಾಂದರ್ಭಿಕ‌ ಚಿತ್ರ

ಭಟ್ಕಳ: ಕಾರವಾರದ ನಂದನಗದ್ದಾದ ನಿವಾಸಿ ರಾಮದಾಸ ನಾರಾಯಣ ಕಾಣಕೋಣಕರ್ ಎಂಬುವವರು ಕುಟುಂಬದೊಂದಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ನೇತ್ರಾವತಿ ಎಕ್ಸಪ್ರೆಸ್ ನಲ್ಲಿ‌ ತೆರಳುತ್ತಿವ ಸಂದರ್ಭದಲ್ಲಿ ಚಿನ್ನಾಭರಣ, ನಗದು ಬ್ಯಾಗ್ ಅನ್ನು ಕಳವು ಮಾಡಿರುವ ಘಟನೆ ನಿನ್ನೆ ಮುರುಡೇಶ್ವರ ರೈಲು ನಿಲ್ದಾಣದಲ್ಲಿ ನಡೆದಿದೆ.

RELATED ARTICLES  ಫೆಬ್ರವರಿ 17ರಂದು ಶ್ರೀ ವೆಂಕ್ರಟಮಣ ದೇವ ಬಾಳೆಗದ್ದೆ ವಾರ್ಷಿಕ ವರ್ಧಂತಿ ಉತ್ಸವ :

ರೈಲು ಮುರ್ಡೇಶ್ವರ ನಿಲ್ದಾಣದ ಸಮೀಪ ನಿಧಾನವಾಗಿ ಚಲಿಸುತ್ತಿರುವಾಗ ರಾಮದಾಸ ನಾರಾಯಣ ಕಾಣಕೋಣಕರ್ ಅವರ ಪತ್ನಿ ರೇಷ್ಮಾರ ವ್ಯಾನಿಟಿ ಬ್ಯಾಗ್ ಅನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

RELATED ARTICLES  ದನದ ಚರ್ಮ ಸಾಗಾಣ ಮಾಡುತಿದ್ದ ವಾಹನ ವಶಕ್ಕೆ!

ಬ್ಯಾಗಿನಲ್ಲಿ 8 ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಆಭರಣ ಹಾಗೂ 35 ಸಾವಿರ ನಗದು ಇತ್ತು ಎಂದು ಕಳ್ಳತನವಾದ ಕುಟುಂಬದವರು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.