ಕುಮಟಾ:ಶ್ರೀ ಸ್ವರ್ಣವಲ್ಲೀ ಇನ್ಸ್ಟಿಟ್ಯೂಟ್ ಆಫ್ ಅಡ್ಮಿನಿಸ್ಟ್ರೇಶನ್ & ಮ್ಯಾನೇಜ್ಮೆಂಟ್ (ಸ್ವಯಂ) ಬೆಂಗಳೂರು ಹಾಗೂ ಮೋಡರ್ನ್ ಎಜ್ಯುಕೇಶನ್ ಸೊಸೈಟಿ ಶಿರಸಿ ಇದರ ಸಂಯುಕ್ತ ಆಶ್ರಯದಲ್ಲಿ ಕುಮಟಾದ ಹವ್ಯಕ ಸಭಾಭವನದಲ್ಲಿ ನಾಗರಿಕಸೇವೆಗಳ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.
IAS/IPS/IFS/IRS/KAS ಪರೀಕ್ಷಾ ಸಿದ್ಧತೆ ಹಾಗೂ ಪರೀಕ್ಷಾ ಕ್ರಮಗಳ ಬಗ್ಗೆ ಸುದರ್ಶನ್ ಹೆಗಡೆ ಹಾಗೂ ಸಹನಾ ಬಾಳಕಲ್ ಮಾರ್ಗದರ್ಶನ ನೀಡಿದರು. ಪರೀಕ್ಷೆ ಎದುರಿಸುವ ತಯಾರಿ ಹಾಗೂ ಪರೀಕ್ಷಾ ಹಂತಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಮಕ್ಕಳೊಂದಿಗೆ ಸಂವಹನ ನಡೆಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶ್ರೀರ್ವಚನ ನೀಡುತ್ತಾ ಆಡಳಿತಾತ್ಮಕ ಸುಧಾರಣೆಗೆ ಹಾಗೂ ಭಾರತೀಯತೆಯ ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಸ್ವಯಂ ಸಂಸ್ಥೆ ಹುಟ್ಟು ಹಾಕಿದ್ದು ಅದು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮುರಳೀಧರ ಪ್ರಭು, ಡಾ.ಟಿ.ಟಿ ಹೆಗಡೆ, ಹಾಗೂ ಸ್ವಯಂ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಮುನ್ನೂರಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.