ಶಿರಸಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಇದೇ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಶಿರಸಿ- ಹುಬ್ಬಳ್ಳಿ ರಸ್ತೆಯ ಚಿಪ್ಗಿಯಲ್ಲಿ ನಡೆದಿದೆ.

RELATED ARTICLES  ಮನೆಯಂಗಳಕ್ಕೆ ಬಿತ್ತು ಬೃಹತ್ ಬಂಡೆ : ಹೊನ್ನಾವರದ ಕಾವೂರಿನಲ್ಲಿ ಘಟನೆ

ಚಿಪ್ಗಿಯ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದ್ದು, ಕುಮಟಾ- ಹುಬ್ಬಳ್ಳಿ ಬಸ್ ಗೆ ಬೈಕ್ ಡಿಕ್ಕಿಯಾಗಿದೆ ಎನ್ನಲಾಗಿದೆ. ಬಾಲಕಿಯ ದೇಹ ಸಂಪೂರ್ಣ ಛಿದ್ರಗೊಂಡಿದ್ದು ನೋಡಲೂ ಅಸಾಧ್ಯ ಎಂಬಂತಾಗಿದೆ.

RELATED ARTICLES  ಮರಳು ತೆಗೆಯಲು ಸಿಕ್ಕಿದೆ ತಾತ್ಕಾಲಿಕ ಅನುಮತಿ: ಕೆಲ‌ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಲೇ ಬೇಕು ಎಂದ ಜಿಲ್ಲಾಧಿಕಾರಿ!

ಒಂದೇ ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನೇನು ತಿಳಿಯಬೇಕಾಗಿದೆ. ಈ ಅಪಘಾತದಲ್ಲಿ ಬಾಲಕಿಯ ದೇಹ ಛಿದ್ರವಾಗಿರುವುದು ಎಲ್ಲರೂ ಆಘಾತಪಡುವಂತೆ ಆಗಿದೆ.