ಅಂಕೋಲಾ : ನಮ್ಮ ತಂದೆ ದಿನಕರ ದೇಸಾಯಿವರ ಕವನಗಳು ಅಂದಿನ ಪತ್ರಿಕಾ ಓದುಗರನ್ನು ಬೆರಗುಗೊಳಿಸುತ್ತಿದ್ದವು. ‘ಸಂಯುಕ್ತ ಕರ್ನಾಟಕ’ ತನ್ನ ಸಂಚಿಕೆಯಲ್ಲಿ ಪ್ರಕಟಿಸುವ ಮೂಲಕ ನಾಡಿನ ಮನೆ ಮಾತಾಗಿಸಿತು. ಬಾಲ್ಯದಲ್ಲೇ ಸಾಹಿತ್ಯಾಸಕ್ತಿಯನ್ನು ಹೊಂದಿದ ಇವರು ಮುಂದೆ ತಮ್ಮ ದೈನಂದಿನ ಕೆಲಸವನ್ನೇಲ್ಲ ಮುಗಿಸಿ ರಾತ್ರಿ ಬಿಡುವಿನ ವೇಳೆಯಲ್ಲಿ ನಿತ್ಯ ಬರವಣಿಗೆಯಲ್ಲಿ ತೊಡಗುತ್ತಿದ್ದನ್ನು ನಾನು ನೋಡಿದ್ದೇನೆ.ನಮ್ಮ ಉಪಸ್ಥಿತಿಯಲ್ಲಿ ನಮ್ಮ ತಂದೆಯ ಭಾವಗೀತೆ ಸ್ಪರ್ದೆ ಏರ್ಪಡಿಸಿರುವ ಕಾರ್ಯ ಶ್ಲಾಘನೀಯ.ಎಂದು ದಿನಕರ ದೇಸಾಯಿವರ ಹಿರಿಯ ಪುತ್ರಿ ಕೆನರಾ ವೆಲ್‍ಫೇರ್ ಟ್ರಸ್ಟಿನ ಧರ್ಮದರ್ಶಿ ಶ್ರೀಮತಿ ಉಷಾ ಪ್ರಧಾನ ತಮ್ಮ ಅನಿಸಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಹಾಗೂ ದಿನಕರ ದೇಸಾಯಿಯವರ ಕೊಂಕಣಿ ಸಂಕಲನ ‘ದಿನಕರಾಲಿ ಕವನಾ’ ದ ಕೊಂಕಣಿ ಕವನ ವಾಚಿಸಿದರು.

ಅವರು ಜಿ.ಸಿ.ಪಿ.ಯ ಕಾಲೇಜಿನ ಯನಿಯನ್ ವಿಭಾಗ ಸಂಘಟಿಸಿದ ದಿನಕರ ದೇಸಾಯಿ ಭಾವಗೀತೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಅವರ ಪತಿ ಬಾಂಬ್ಯೈ ಹೈಕೋರ್ಟಿನ ನಿವೃತ್ತ ವಕೀಲರಾದ ಶ್ರೀ ವಿಜಯ ಪ್ರಧಾನ ಮಾತನಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಹಾಗೂ ಟ್ರಸ್ಟಿ ಶ್ರೀ ವಿಷ್ಣು ನಾಯ್ಕ ಮಾತನಾಡಿ ವಿದ್ಯಾರ್ಥಿ ಇದ್ದಾಗಲೇ ದಿನಕರರ ಕವನ ಪಠ್ಯ ವಿಷಯವಾದದ್ದು ಅವರ ಸಾಹಿತ್ಯಾಸಕ್ತಿಗೆ ಸಾಕ್ಷಿ ದೀನದಲಿತರಲ್ಲಿ ದೇಸಾಯಿಯವರು ದೇವರನ್ನು ಕಂಡವರು ಎನ್ನುತ್ತ ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್‍ಫೇರ್ ಟ್ರಸ್ಟಿನ ಕಾರ್ಯದರ್ಶಿ ನೂತನ ಟ್ರಸ್ಟಿ ಕೆ.ವಿ ಶೆಟ್ಟಿ ಮಾತನಾಡುತ್ತಾ ದಿನಕರ ಭಾವಗೀತೆಗಳು ಇಂದಿನ ವಿದ್ಯಾರ್ಥಿಯುವ ಸಮುದಾಯಕ್ಕೆ ತಲುಪಬೇಕಾದ ಅಗತ್ಯವಿದೆ. ಅವರ ಜೊತೆ ಕೆಲಸ ಮಾಡಿದ ದಿನಗಳನ್ನು ಮೆಲಕು ಹಾಕಿದರು.

RELATED ARTICLES  ಬಾವಿಯಿಂದ ನೀರು ತರಲು ಹೋದವನು ಬಾವಿಗೆ ಬಿದ್ದು ಸಾವು

ಆರಂಭದಲ್ಲಿ ಕಾಲೇಜು ಪ್ರಾಚಾರ್ಯ ಡಾ||ಇಮ್ತಿಯಾಜ್ ಖಾನ ಶ್ರೀಮತಿ ಉಷಾ ಪ್ರಧಾನರನ್ನು ಮತ್ತು ವಿಜಯ ಪ್ರಧಾನರನ್ನು ಪರಿಚಯಿಸಿ ಸರ್ವರನ್ನು ಸ್ವಾಗತಿಸಿದರು.ಹಿರಿಯ ಉಪನ್ಯಾಸಕ ಉಲ್ಲಾಸ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿದರು. ಕನ್ನಡ ಉಪನ್ಯಾಸಕರಾದ ನಾಗರಾಜ ದೀವಗಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಉಪನ್ಯಾಸಕಿ ಶ್ರೀಮತಿ ಸುಜಾತಾ ಲಾಡ್ ಸರ್ವರನ್ನು ಉಪಕಾರ ಸ್ವರಿಸಿದರು.ಆರಂಭದಲ್ಲಿ ಪ್ರಿಯಾಂಜಲಿ ವೈದ್ಯ ಮತ್ತು ಸಂಗಡಿಗರು ಗಣೇಶ ಸ್ತುತಿ ಹಾಗೂ ದಿನಕರರ ಭಾವಗೀತೆಯನ್ನು ಹಾಡಿದರು. ಉಪನ್ಯಾಸಕರಾದ ಪದ್ಮನಾಭ ಪ್ರಭು ಭಾವಗೀತೆ ಸ್ಪರ್ಧೆ ನಡೆಸಿಕೊಟ್ಟರು.

RELATED ARTICLES  ಕುಮಟಾದ ಹೆಗಡೆಯಲ್ಲಿ ಮನೆ ನಿರ್ಮಾಣದ ಸಂದರ್ಭದಲ್ಲಿ ಅವಘಡ: ಸೆಂಟ್ರಿಂಗ್ ಕೆಲಸಗಾರ ಸಾವು!!

ನಿರ್ಣಾಯಕರಾಗಿ ಹಿರಿಯ ಕವಿ ನಾಗೇಂದ್ರ ನಾಯಕ ತೊರ್ಕೆ ಜೆ.ಪ್ರೇಮಾನಂದ ಶಿಕ್ಷಕ ಕೃಷ್ಣಾನಂದ ಗುನಗಾ ಭಾಗವಹಿಸಿದರು.

ವಿವೇಕ ನಾಯ್ಕ, ಸುಬೃಹ್ಮಣ್ಯ ಭಟ್, ದರ್ಶನ ನಾಯಕ, ಸೌಮ್ಯ ಶಾನಭಾಗ, ಮೋಹನ ದೊನದಿಕರ,ಸೂರ್ಯಕಾಂತ ಶೆಟ್ಟಿ ಕಛೇರಿಯ ಸಹಾಯಕರಾದ ಭವಾನಿ ಪಾಲೇಕರ ನಾಗರಾಜ ಶೆಟ್ಟಿ ಛಾಯಾ ನಾಯಕ, ಮಂಜುನಾಥ ಆಗೇರ ಮೊದಲಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದರು. ಐ್ರಸ್ಟಿನ ಸಿಬ್ಬಂದಿಗಳಾದ ಪ್ರಶಾಂತರಾವ್, ರಾಜು ನಾಯ್ಕ, ಮೀನಾಕ್ಷಿ ನಾಯ್ಕ ಉಪಸ್ಥಿತರಿದ್ದರು.