ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳ ಬೇಕೆಂದು, ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಯೋಚಿಸಿದ್ದರು.
ಇಂದು ಸಮಾಜದ ಹಾಗೂ ಶಿಷ್ಯ ಸಮುದಾಯದ ಪದಾಧಿಕಾರಿಗಳೊ0ದಿಗೆ ಸಮ್ಮುಖ ಸರ್ವಾಧಿಕಾರಿಗಳಾದ ಶ್ರೀ ತಿಮ್ಮಪ್ಪಯ್ಯ ಮಡಿಯಾಲ ರವರು ಹಾಗೂ ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಕೆ. ಜಿ. ಭಟ್ಟ ರವರು ಶ್ರೀಸಂಸ್ಥಾನದವರನ್ನು ಭೇಟಿ ಮಾಡಿದ್ದರು.
ಕಿಡ್ನಿ ಸ್ಟೋನ್ ಗೆ ಸಂಬಂಧಿಸಿದ ಸಣ್ಣ ಪುಟ್ಟ ಚಿಕಿತ್ಸೆಯ ಅವಶ್ಯಕತೆ ಇರುವದರಿಂದಲೂ, ವಿಶ್ರಾಂತಿಯ ಅಗತ್ಯ ಇರುವದರಿಂದಲೂ ಚಾತುರ್ಮಾಸ್ಯವನ್ನು ಬೆಂಗಳೂರಿನಲ್ಲಿಯೇ ಕೈಗೊಂಡು, ವಿಶ್ರಾಂತಿಯನ್ನೂ ಪಡೆಯುತ್ತಾ ಗೋಸ್ವರ್ಗದ ಕುರಿತು ಹೆಚ್ಚಿನ ಮಾರ್ಗದರ್ಶನ ನೀಡಬೇಕೆಂದು ವಿನಂತಿಸಿದರು.
ಇವರೆಲ್ಲರ ಒಕ್ಕೊರಲ ವಿನಂತಿಯನ್ನು ಮನ್ನಿಸಿದ ಶ್ರೀಸಂಸ್ಥಾನ ದವರು ಈ ವರ್ಷ ಸಂಕಲ್ಪಿಸಿದ ಗೋ ಸ್ವರ್ಗ ಚಾತುರ್ಮಾಸ್ಯವನ್ನು ಇದೇ ಬರುವ ಆಷಾಢ ಕೃಷ್ಣ ಚತುರ್ಥಿಯಿಂದ (01-08-2018) ಬೆಂಗಳೂರಿನ ಗಿರಿನಗರ ಮಠದಲ್ಲಿ ಕೈಗೊಳ್ಳುವದಾಗಿ ಸಮ್ಮತಿ ಸೂಚಿಸಿದ್ದಾರೆ.
ಎಲ್ಲಾ ಶಿಷ್ಯ ಭಕ್ತ ಸಮಾಜ ಬಾಂಧವರು ಈ ಬದಲಾವಣೆಯನ್ನು ಗಮನಿಸಿ, ಚಾತುರ್ಮಾಸ್ಯದ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ಶ್ರೀ ರಾಮಾಶ್ರಮಕ್ಕೆ ಆಗಮಿಸಿ, ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಈ ಮೂಲಕ ಶ್ರೀಗಳವರ ಮಾಧ್ಯಮ ಸಹಕಾರ್ಯದರ್ಶಿ ಸಂದೇಶ ತಲಕಾಲಕೊಪ್ಪ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.