ಅದು 1999 ಮೇ 17 ನೇ ತಾರಿಕು ಅಂದು ಕಾಶ್ಮೀರದ ದನ ಕಾಯುವ ಯುವಕ, ಕಳೆದು ಹೋದ ತನ್ನ ದನ (ಹಿಮಾಲಯಾದ ಸಾಕು ಪ್ರಾಣಿ ಯಾಕ್ ) ಹುಡುಕಲು ತೋಲೊಲಿಂಗ್ ಶಿಖರದ ಹತ್ತಿರ ಹೋದಾಗ ಅಲ್ಲಿ ಆ ಶಿಖರದ ಮೇಲೆ ಸೈನಿಕರು ಓಡಡುತ್ತಿರುವುದನ್ನು ಕಂಡು ಗಾಬರಿಯಾದ. ಆತನ ಗಾಬರಿಯಾಗೆ ಕಾರಣ ಚಳಿಗಾಲದಲ್ಲಿ ಭಾರತೀಯ ಸೇನೆ ಅಲ್ಲಿರುವುದಿಲ್ಲ. ಈಗ ಅಲ್ಲಿರುವರು ಯಾರು ಅಂತ ಗಾಬರಿಗೊಂಡು ತನ್ನ ಸಾಕು ಪ್ರಾಣಿಯನ್ನು ಹುಡುಕುವುದು ಬಿಟ್ಟು ಸೀದಾ ಭಾರತೀಯ ಸೇನಾಪಡೆಯ ಚೆಕ್ ಪೋಸ್ಟ್ ಬಳಿ ಬಂದು ತಾನು ಕಂಡ ದೃಶ್ಯವನ್ನು ಅಲ್ಲಿ ಅಧಿಕಾರಿಗಳಿಗೆ ತಿಳಿಸಿದ!! ಅಂದು ಆ ದನ ಕಾಯುವ ಹುಡುಗ ತೋರಿದ ಸಮಯ ಪ್ರಜ್ನೆ ನಿಜಕ್ಕು ಮೆಚ್ಚುವಂತದ್ದು.

ಶಿಖರದ ಮೇಲಿರುವವರು ಯಾರೆಂದು ನೋಡಿ ಬರಲು ಸೌರಭ ಕಾಲಿಯಾ ನೇತೃತ್ವದ 5 ಜನ ಭಾರತೀಯ ಸೈನಿಕರು ಮೇಲೆ ಹೋದರು. ಅಲ್ಲಿರುವರು ಬೇರಾರು ಅಲ್ಲ ಪಾಪಿ ಪಾಕಿಸ್ತಾನಿ ಸೈನಿಕರು. ಸೌರಭ ಕಾಲಿಯ ಮತ್ತು ಅವರ ಸಂಗಡಿಗರನ್ನು ಮೋಸದಿಂದ ಬಂಧಿಸಿದ ಪಾಕಿಸ್ತಾನಿ ಸೇನೆ ಅವರಿಗೆ ಚಿತ್ರಹಿಂಸೆ ನೀಡಿತು. ಅದರಲ್ಲಿ ಸೌರಭ ಕಾಲಿಯ ಸಾವು ಮಾತ್ರ ಜಗತ್ತಿನ ಯಾವ ಯೋಧನಿಗೂ ಬಂದಿರಲಿಲ್ಲ.

ಪಾಪಿ ಪಾಕಿಸ್ತಾನಿಯರು ಸೌರಭ ಕಾಲಿಯರ “ಕೈ ಬೆರಳುಗಳನ್ನ ಕಾಲು ಬೆರಳುಗಳನ್ನು ಕತ್ತರಿಸಿದರು. ಇಡೀ ಮೈಯನ್ನು ಸೀಗರೆಟಿನಿಂದ ಸುಟ್ಟರು. ಕಾದ ಕಬ್ಬಣದ ಸಲಾಕೆಯನ್ನು ಕಿವಿಯೊಳಗೆ ಹಾಕಿದರು. ಕಣ್ಣು ಕಿತ್ತರು ಜೀವಂತ ಇರುವಾಗಲೇ ಮರ್ಮಾಂಗವನ್ನು ಕತ್ತರಿಸಿದರು” ಬರೋಬ್ಬರಿ 22 ದಿನಗಳ ಕಾಲ ಪಾಪಿ ಪಾಕಿಸ್ತಾನಿಯರ ಚಿತ್ರಹಿಂಸೆಗೆ ತುತ್ತಾಗಿ ವೀರ ಮರಣ ಹೊಂದಿದರು. 4 ಜಾಟ್ ರಜಪೋತ ರಜನಿಮೆಂಟ್ ಹೀರೊ ಸೌರಭ ಕಾಲಿಯ. ಸ್ನೇಹಿತರೆ ನಮಗೆ ಒಂದು ಸೂಜಿ ಚುಚ್ಚಿದರು ಒದ್ದಾಡುತ್ತೆವೆ ಆದರೆ ಮಹಾನ್ ಯೋದ ಈ ದೇಶಕ್ಕಾಗಿ ಅನುಭವಿಸಿದ ಆ ನೋವು ನಮಗ್ಯಾರಿಗೂ ನೆನಪಾಗುವುದೇ ಇಲ್ಲವಲ್ಲ!!

1999 ರ ಮೇ 19 ರಿಂದ 1999 ಜುಲೈ 26 ರ ವರೆಗೆ ನೆಡದ ಆ ಕಾರ್ಗಿಲ್ ಕದನದಲ್ಲಿ 600 ಕ್ಕು ಹೆಚ್ಚು ಭಾರತೀಯ ಸೈನಿಕರು ತಾಯಿ ಭಾರತಾಂಭೆಯ ರಕ್ಷಣೆಗಾಗಿ ಬಲಿಧಾನಗೈದರು. ಆ ಘೋರ ಕದನದಲ್ಲಿ ಭಾರತ ಮಾತೆಯ ರಕ್ಷಣೆಗಾಗಿ ಮಡಿದ ಪ್ರತಿರೊಬ್ಬ ಸೈನಿಕರು ಹೀರೊಗಳೆ.

ಮನೋಜ್ ಕುಮಾರ ಪಾಂಡೆ ಕಾರ್ಗಿಲ್ ಕದನದಲ್ಲಿ ಪ್ರಾಣರ್ಪಣೆ ಮಾಡಿದ 23 ರ ಯೋಧ. ತನ್ನ ಜೀವನದ ಪರಮ ಉದ್ದೇಶವೆ ಪರಮವೀರ ಚಕ್ರ ಪ್ರಶಸ್ತಿ ಪಡೆಯುವದು “ನನ್ನ ರಕ್ತದ ತಾಕತನ್ನು ತೋರಿಸುವ ಮುಂಚೆ ಸಾವು ನನ್ನ ಹತ್ತಿರ ಬಂದರೆ ದೇವರಾಣೆಗು ಆ ಸಾವನ್ನು ನಾನು ಕೊಂದು ಹಾಕುತ್ತೆನೆ” ಅಂತ ಅಬ್ಬರಿಸಿದ ಆ ಸೈನಿಕನ ತ್ಯಾಗ ಬಲಿಧಾನವನ್ನು ನಾವು ಯಾವಾಗಲಾದರು ನೆನದಿದ್ದೇವಾ??

ಕಾರ್ಗಿಲ್ ಕದನದಲ್ಲಿ ಮೊಟ್ಟ ಭಾರತದ ಮೊದಲ ಶಿಖರ ತೋಲೊಲಿಂಗ್ ಗೆದ್ದು ಕೊಟ್ಟು ಎ ದಿಲ್ ಮಾಂಗ್ ಮೋರ್ ಎಂದು ಘೋಷಣೆ ಮಾಡಿ ಟೈಗರ್ ಹಿಲ್ ಶಿಖರಕ್ಕೆ ತನ್ನ ಪ್ರಾಣರ್ಪಣೆ ಮಾಡಿದ ವಿಕ್ರಮ್ ಭಾತ್ರಾರ ಆ ತ್ಯಾಗವನ್ನು ನಾವೆಷ್ಟು ಬಾರಿ ನೆನೆದಿದ್ದೆವೆ??

ತನ್ನ 11 ಜನ ಸಂಗಡಿಗರೊಡನೆ ಯುದ್ಧಕ್ಕೆ ಹೊರಟ ಯಶವಂತ ಸಿಂಗ್ ತೊಮರ್ ತನ್ನ ಸೈನಿಕರಿಗೆ ಹೇಳಿದ್ದರು. ಹಮ್ ಗ್ಯಾರಾ ತೋಮರ್ ಜಾಹೆಂಗೆ ಅವರ್ ಜಿತ್ ಕರ್ ಗ್ಯಾರಾ ವಾಪಸ್ ಆಯೆಂಗೆ ” ಅಂತ ಹೇಳಿ ಹೋದ ಆ ಸೈನಿಕ ಮರಳಿ ಬರಲೇ ಇಲ್ಲ. ಆ ಸೈನಿಕನ ಶವ ಮನೆಗೆ ಬಂದಾಗ ಯಶವಂತ ಸಿಂಗ್ ತೋಮರ್ ತಂದೆ ನನ್ನ ಮಗ ಯಶವಂತ ನನ್ನ ಮನೆತನದ ಗೌವರ ಹೆಚ್ಚಿಸಿ ಬಿಟ್ಟ “ನನ್ನ ಮನೆತನದಲ್ಲಿ ಗೆಲ್ಲಬೇಕು ಇಲ್ಲ ಸಾಯಬೇಕು ನನ್ನ ಮಗ ಗೆದ್ದು ಸತ್ತಿದ್ದಾನೆ” ಅಂತ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಾರಲ್ಲ ಯಾವಾಗಲಾದರು ನೆನಪಾಗಿದ್ದಾರಾ ನಮಗೆ ಆ ಸೈನಿಕನಾಗಲಿ ಅವರ ತಂದೆಯಾಗಲಿ??

RELATED ARTICLES  ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಅಮರನಾಥ ಹೆಗಡೆ:

ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ ಅಂತ ತನ್ನ ಪತ್ನಿಗೆ ಪತ್ರ ಬರೆದಿದ್ದರು ” ಮೇಜರ್ ರಾಜೇಶ್ ಸಿಂಗ್ ಅಧಿಕಾರಿ” ಯುದ್ಧ ಘೋಷಣೆಯಾಯ್ತು. ಆ ಯುದ್ಧದಲ್ಲಿ ಮೇಜರ್ ರಾಜೇಶ್ ಅಧಿಕಾರಿಗೆ ಹೆಲಿಕಾಪ್ಟರಗಳನ್ನು ತೊಲೊಲಿಂಗ್ ನ ಬಳಿಗೊಯ್ದು ಶತ್ರುಗಳ ಮೇಲೆ ನೇರ ದಾಳಿ ಮಾಡುವ ಜವಾಬ್ದಾರಿ ವಹಿಸಲಾಯ್ತು. ಅದರಂತೆ ಮೇಜರ್ ರಾಜೇಶ್ ಅಧಿಕಾರಿ ಯೋಜನೆ ರೂಪಿಸಿದರು.
ಇನ್ನೇನು ಆ ಯೋಜನೆಯ ಪ್ರಕಾರ ಹೊರಡುವಷ್ಟರಲ್ಲಿ ರಾಜೇಶ್ ಅಧಿಕಾರಿಗೆ ಹೆಂಡತಿ ಕಿರಣ್ ಅವರಿಂದ ಪತ್ರ ಬಂತು. ಮದುವೆಯಾಗಿ ಹತ್ತು ತಿಂಗಳಾಗಿತ್ತಷ್ಟೇ. ಹೆಂಡತಿಯ ಪತ್ರವನ್ನು ಓದಿದರೆ ಮನಸು ವಿಚಲಿತವಾಗಬಹುದು ಎಂದು ಅಂದುಕೊಂಡ ಮೇಜರ್ ರಾಜೇಶ್ ಅಧಿಕಾರಿ ಆ ಪತ್ರವನ್ನು ಬಿಡುವಿನ ಸಮಯದಲ್ಲಿ ಓದಿದರಾಯ್ತೆಂದು ಜೇಬಿನಲ್ಲಿ ಇಟ್ಟೊಕೊಂಡು ಯುದ್ಧಕ್ಕೆ ಹೊರಟರು‌.

ಅವರ ಹೋರಾಟ ಎಂತದ್ದು ಗೊತ್ತಾ??

ಮೇಜರ್ ರಾಜೇಶ್ ಅಧಿಕಾರಿ ಮತ್ತು ತಂಡ ತೋಲೋಲಿಂಗ್ ನತ್ತ ಹೋಗಿ ಪಾಕಿಗಳ ಬಂಕರ್ ಗಳನ್ನು ಉಡೀಸ್ ಮಾಡಲು ಮುಂದಾದರು. ಒಂದೊಂದೆ ಪಾಕಿಸ್ತಾನ ಬಂಕರ್ ರಾಜೇಶ್ ಅಧಿಕಾರಿ ಮತ್ತು ತಂಡದಿಂದ ಉಡೀಸ್ ಆದವು. ಅಷ್ಟರಲ್ಲೇ ಅಚಾತುರ್ಯ ನಡೆದು ಹೋಯಿತು. ಪಾಕಿಗಳ ದಾಳಿ ಜಾಸ್ತಿಯಾಗಿ ಒಂದು ಗುಂಡು ಮೇಜರ್ ರಾಜೇಶ್ ಅಧಿಕಾರಿಯ ಎದೆಯನ್ನು ಸೀಳಿತು. ಎದೆಯಲ್ಲಿ ಗುಂಡು ಹೊಕ್ಕರೂ ರಾಜೇಶ್ ಅಧಿಕಾರಿ ಧೃತಿಗೆಡಲಿಲ್ಲ. ಉಳಿದ ಬಂಕರ್ ಒಂದನ್ನು ಉಡಾಯಿಸಿ ಆ ಬೆಟ್ಟವನ್ನು ಗೆದ್ದು ಪ್ರಾಣಾರ್ಪಣೆ ಮಾಡಿದರು.

ರಾಜೇಶ್ ಅಧಿಕಾರಿ ಅಂದುಕೊಂಡಂತೆ ತುಂಬು ಗರ್ಭಿಣಿ ಬರೆದ ಪತ್ರ ಓದಲು ಬಿಡುವೇನೋ ಸಿಕ್ಕಿತು ಆದರೆ ಆ ಪತ್ರ ಓದಲು ಮೇಜರ್ ರಾಜೇಶ್ ಅಧಿಕಾರಿಯೇ ಇರಲಿಲ್ಲ. ತಾಯಿ  ಭಾರತಾಂಬೆಗೆ ತನ್ನ ಪ್ರಾಣವನ್ನು ಕೊಟ್ಟು ಬಿಟ್ಟಿದ್ದರು. ಮೇಜರ್ ರಾಜೇಶ್ ಅಧಿಕಾರಿ ಯುದ್ಧಕ್ಕೆ ಹೊರಡುವ ಮುನ್ನ ಹೆಂಡತಿಗೆ ಒಂದು ಪತ್ರ ಬರೆದಿದ್ದರು. ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ ಅಂತ ತನ್ನ ಹೆಂಡತಿಗೆ ಪತ್ರವನ್ನು ಬರೆದಿದ್ದರು.

ಅದಕ್ಕೆ ಮೇಜರ್ ರಾಜೇಶರ ಹೆಂಡತಿ ಮರುಉತ್ತರ ಬರೆದು ಪತ್ರ ಕಳಿಸಿದ್ದರು. ನೀವು ವೀರಮರಣ ಹೊಂದಿದ ಜಾಗವನ್ನಷ್ಟೇ ಅಲ್ಲ, ನಿಮ್ಮಂತೆಯೆ ನಿಮ್ಮ ಮಗನನ್ನು ಸಹ ಸೈನಿಕನನ್ನಾಗಿ ಮಾಡುತ್ತೇನೆ ಅಂತ ಬರೆದಿದದ್ದರು. ಆದರೆ ಆ ಪತ್ರವನ್ನು ಓದಲು ರಾಜೇಶ್ ಅಧಿಕಾರಿಯೇ ಇರಲಿಲ್ಲ. ಮೇಜರ್ ರಾಜೇಶ್ ಅಧಿಕಾರಿಯವರ ಸಾಹಸಕ್ಕೆ ಭಾರತ ಸರ್ಕಾರ ಮಹಾವೀರ ಚಕ್ರ ಪ್ರಶಸ್ತಿ ಕೊಟ್ಟು ಗೌರವಿಸಿತು. ಈ ಮಹಾನ್ ಸೈನಿಕನನ್ನು ನಾವು ಯಾವತ್ತಾದರು ನೆನಪಿಸಿಕೊಂಡಿದ್ದಿವ ನಾವುಗಳು??

ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ ಒಂದೇ ಕುಟುಂಬದ ಇಬ್ಬರು ಸಹೋದರರು ಕ್ಯಾಪ್ಟನ್ ಅಮನ್ ಕಾಲಿಯಿ — ಅಮೋಲ್ ಕಾಲಿಯಾ ಆ ಯುದ್ಧದಲ್ಲಿ ಅಮೋಲ್ ತಮ್ಮ ಪ್ರಾಣರ್ಪಣೆ ಮಾಡಿದರು ಅವರ ಶವ ಮನೆಗೆ ಬಂದಾಗ ಅವರ ತಂದೆ ಅಮೋಲ್ ಕಾಲಿಯಾರ ಹ್ಯಾಟ್ ನ ತೆಲೆಗೆ ಹಾಕಿಕೊಂಡು ಅವನ ಶವಕ್ಕೆ ಶೆಲೂಟ್ ಹೊಡೆದು “ನಿನ್ನ ನನ್ನ ಕಿರಿ ಮಗ ಅಂತ ಎಲ್ಲರ ಹತ್ತಿರ ಹೇಳುತ್ತಿದ್ದೆ ಆದರೆ ಇಂದು ದೇಶಕ್ಕೆ ನೀನು ಹಿರಿಮಗ ಆಗಿ ಬಿಟ್ಟೆ” ನನ್ನ ಮಗನಾಗಿ ಹುಟ್ಟಿ ನನ್ನ ಧನ್ಯ ಮಾಡಿಬಿಟ್ಟೆ ಅಂತ ಹೆಮ್ಮೆಯಿಂದ ಹೇಳಿದರು ಆ ತಂದೆಯ ಮಾತುಗಳನ್ನು ನಾವು ಯಾವತ್ತದರು ನೆನಪಿಸಿಕೊಂಡಿದ್ದೇವಾ??

RELATED ARTICLES  ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ದೇಶಪಾಂಡೆ ನೇರ ಹೊಣೆ: ಅನಂತಮೂರ್ತಿ ಹೆಗಡೆ‌ ಆರೋಪಆಸ್ಪತ್ರೆ ಆಗುವವರೆಗೂ ನಿರಂತರ ಹೋರಾಟ : ಸರ್ಕಾರದ ವಿರುದ್ಧ ಗುಡುಗಿದ ಅನಂತಮೂರ್ತಿ

ಕರ್ನಾಲ್ ವಿಶ್ವನಾಥನ್ ಕಾರ್ಗಿಲ್ ಕದನದಲ್ಲಿ ಹುತಾತ್ಮರದರು. ಅವರ ಪಾರ್ಥಿವ ಶರೀರ ಮನೆಗೆ ಬಂದಾಗ ಪತ್ರಕರ್ತರಿಗೆ ತನ್ನ ಮಗ ಎಂತ ಹೋರಾಟ ಮಾಡಿದ ಅಂತ ತೋರಿಸಲಿಕ್ಕೆ ಆ ಯೋಧ ವಿಶ್ವನಾಥನ ಕೊನೆ ಗಳಿಗೆಯಲ್ಲಿ ಹಾಕಿಕೊಂಡ ಶರ್ಟ್ ನ ತೋರಿಸಿ “ನೋಡಿ ಇದರಲ್ಲಿ ಎಷ್ಟು ಬುಲೆಟ್ ಗಳ ತುತುಗಳು ಬಿದ್ದಿವಿ ಇದರಲ್ಲೆ ಊಹಿಸಿಕೊಳ್ಳಿ ನನ್ನ ಮಗನ ಹೋರಾಟ ಎಂತದ್ದು ” ಅಂತ ಪತ್ರಕರ್ತರ ಎದುರಿಗೆ ಇದ್ದೊಬ ಮಗನನ್ನ ಕಳೆದುಕೊಂಡು ಆ ಮಗನ ಬಗ್ಗೆ ಹೆಮ್ಮೆ ಪಡುತ್ತಾರಲ್ಲ ಆ ತಂದೆ ಒಳಗಿನ ನೋವು ನಮಗೆ ಯಾವತ್ತಾದರು ನೆನಪಾಗಿದೆಯ?

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಮತ್ತೊಬ್ಬ ಸೈನಿಕ ಕ್ಯಾಪ್ಟನ್ “ಮುಯಿಲನ್” ರಜಾ ಮೇಲೆ ಮನೆಗೆ ಬಂದವನು ತನ್ನಿಷ್ಟದ ಕೇಸರಿಬಾತ್ ಸವಿಯಬೇಕು ಎನ್ನುವಷ್ಟರಲ್ಲಿ ಕಾರ್ಗಿಲ್ ನಲ್ಲಿ ಯುದ್ಧ ಶುರುವಾಗಿದ ಮರಳಿ ಬನ್ನಿ ಅಂತ ಮುಯಿಲನ್ ಗೆ ಪತ್ರ ಬಂತು ಅಂದು ಮುಯಿಲನ್ ತನ್ನಿಷ್ಟದ ಕೇಸರಿಬಾತ್ ಸೇವಿಸದೆ ಹಾಗೆ ಎದ್ದು ತಾಯಿಗೆ ಆದಷ್ಟು ಬೇಗ ಬರುವುದಾಗಿ ಹೇಳಿ ಹೋದ ಆದರೆ ಮರಳಿ ಬಂದಿದ್ದು ಆವನ ಶವ ಮಾತ್ರ. ಆ ತಾಯಿಗೆ ಪ್ರತಿಸಲ ಕೇಸರಿಬಾತ್ ಮಾಡಿದಾಗಲು ಎದುರಿಗೆ ತನ್ನ ಮಗ ನೆನಪಾಗುತ್ತಾನೆ. ಆ ತಾಯಿಯ ನೋವು ಎಂದದರು ನಮಗೆ ನೆನಪು ಆಗಿದೆಯಾ??

*ಅಂದು ಒಂದು ಕಡೇ ಈ ಮಹಾನ್ ಯೋಧರ ಬಲಿಧಾನವಾಗುತ್ತಿದ್ದರೆ ಅಂದಿನ ನಮ್ಮ ಯುವಕರೆನು ಮಾಡುತ್ತಿದ್ದರು ಗೊತ್ತಾ ?*

ಅದು 1999 ಕ್ರಿಕೆಟ್ ವರ್ಡ್ ಕಪ್ ನೋಡಲು ಮಗ್ನರಾಗಿದ್ದರು. ಆ ಕ್ರಿಕೆಟ್ ಎದುರು ನಮ್ಮ ಸೈನಿಕರ ಹೋರಾಟ ತ್ಯಾಗ ಬಲಿಧಾನಗಳು ಇವರಿಗೆ ಕಾಣಲೆಯಿಲ್ಲ. ಆದರೆ ಅಂದು ಕಾರ್ಗಿಲ್ ನಲ್ಲಿ ನಮ್ಮ ಸೈನಿಕರ ಯುದ್ಧ ಮಾಡುತ್ತಿದ್ದರೆ ಅಂತ ಪತ್ರಿಕೆಯಲ್ಲಿ ಓದಿದ ಮುಂಬೈನ ಒಂದು ಪುಟ್ಟ ಹುಡುಗಿ 10/12 ವಯಸ್ಸಿನ ಮಗು ಆ ಯೋಧರಿಗೆ ಏನಾದರು ಸಹಾಯ ಮಾಡಬೇಕು ಅಂತ ಅಂದುಕೊಂಡು ಅಪ್ಪನ ಹತ್ತಿರ ಹಣ ಕೇಳಿದರೆ ತಪ್ಪಾಗುತ್ತಾದೆ ಅಂತ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿ ಸಲ್ಪ ಹಣ ಕೂಡಿಸಿ ಸೈನಿಕರ ನಿಧಿಗೆ ಕಳಿಕೊಟ್ಟಳು. ಆವಳ ದೇಶಭಕ್ತಿಯ ಎದುರು ನಾವು ನಿಜಕ್ಕು ತೆಲೆ ತಗ್ಗಿಸ ಬೇಕು.

ಕಾರ್ಗಿಲ್ ಯುದ್ಧ ಶುರುವಾದ ಮೇಲೆ ಆ ಯುದ್ಧ ಬಗ್ಗೆ ದಿನವು ಪತ್ರಿಕೆಯಲ್ಲಿ ಓದಿದ “ದೆಹಲಿ ರೆಡ್ ಲೈಟ್ ಏರಿಯಾದ ವೇಶ್ಯೆಯರು ಈ ಯೋಧರು ನಮಗಾಗಿ ಹೋರಾಟ ಮಾಡುತ್ತಿದ್ದರೆ ಇವರಿಗೆ ನಾವು ಏನದರು ಸಹಾಯ ಮಾಡಬೇಕು ಅಂತ ನಿರ್ಧರಿಸಿ ಎಲ್ಲರು ತಮ್ಮ ಒಂದು ದಿನದ ಆದಾಯವನ್ನು ಕೂಡಿಸಿ ಸುಮಾರು 40 ಸಾವಿರ ಹಣವನ್ನ ಸೈನಿಕರ ನಿಧಿಗೆ ಕಳಿಸಿ ಕೊಟ್ಟರು. ಆ ವೇಶ್ಯೆಯರ ದೇಶಭಕ್ತಿಯ ಮುಂದೆ ನಾವೇನು ಅಲ್ಲ ಬಿಡಿ ಯುವಕರೆ!!

ನಿಮಗೆ ನೆನಪಿದೆಯ ಒಂದು ಸರ್ಕಾರದ ಮಂತ್ರಿಯೊಬ್ಬ ಕಾರ್ಗಿಲ್ ಯುದ್ಧದ ವಿಜಯೋತ್ಸವ ಆಚರಿಸುವುದು ಬೇಡ ಅದು ಬೇರೆ ಸರ್ಕಾರ ಇದ್ದ ಸಮಯದಲ್ಲಿ ಆದ ಯುದ್ಧ ಅದನ್ನು ನಾವು ಆಚರಿಸಿದರೆ ಆವರಿಗೆ ಕ್ರೇಡಿಟ್ ಕೊಟ್ಟಂತೆ ಆಗುತ್ತದೆ ಅಂತ ಪ್ರತಿ ವರ್ಷ ಜುಲೈ 26ಕ್ಕೆ ಆಚರಿಸುತ್ತಿದ್ದ ಆ ವಿಜಯೋತ್ಸವ ನಿಲ್ಲಿಸಿ ಬಿಟ್ಟರಲ್ಲ. ಆವಾಗಲು ನಿಮಗೆ ಆ ಕಾರ್ಗಿಲ್ ಯೋಧರು ನೆನಪಾಗಲೆ ಇಲ್ಲವಲ್ಲ. ಆ ಮುದಿ ರಾಜಕಾರಣಿಗಳನ್ನು ನೀವು ವಿರೋಧಿಸಲೆ ಇಲ್ಲವಲ್ಲ. ಯುವಕರೆ ನೀವೆಂತಹ ದೇಶ ಭಕ್ತರು??

ಇನ್ನಾದರು ಈ ದೇಶಕ್ಕಾಗಿ ಪ್ರಾಣಕೊಡುವ ಸೈನಿಕನನ್ನು ನೆನಪಿಸಿಕೊಳ್ಳಿ . ಅವರು “ನಮ್ಮ ನಾಳೆಗಳಿಗಾಗಿ ತಮ್ಮ ನಾಳೆಗಳನ್ನು ಮರೆತು ಗಡಿ ಕಾಯುತ್ತಿದ್ದಾರೆ!! ಇಂದು ನಾವು ನೀವೆಲ್ಲರೂ ಪ್ರತಿಜ್ಞೆ ಮಾಡಿ ಕಾರ್ಗಿಲ್ ವಿಜಯ ದಿವಸವನ್ನು ವಿಜೃಂಭಣೆಯಿಂದ ಆಚರಿಸಿ ಸೈನಿಕರ ಬಲಿದಾನಕ್ಕೆ ಗೌರವ ಕೊಡೋಣ!!