ಕುಮಟಾ: ಜಿಲ್ಲಾ ಹಿಂದು ಮುಕ್ರಿ ಸಮಾಜ ಸೇವಾ ಸಂಘದ ಅದ್ಯಕ್ಷರಾದ ಎನ್.ಆರ್ ಮುಕ್ರಿಯವರು, ಹಿಂದೆ ನಮ್ಮ ಜನತೆಗೆ ಅವಕಾಶ,ಮಾಹಿತಿಗಳ ಕೊರತೆಯ ಕಾರಣದಿಂದ ಅದೆಷ್ಟೋ ಮಂದಿ ಹಿಂದೆಯೆ ಉಳಿದಿದ್ದಾರೆ.ಆದರೆ ಇಂದು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರ, ನಮ್ಮ ಸಮಾಜದ ಯುವಕ ಯುವತಿಯರಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉಚಿತವಾಗಿ ತರಬೇತಿ ಮತ್ತು ಮಾಹಿತಿಯನ್ನು ನೀಡಿ ಸ್ವ ಉದ್ಯೋಗ ಮಾಡುವ ಯುವಕ,ಯುವತಿ,ಮಹಿಳೆಯರು ಸೇರಿದಂತೆ ಅನೇಕರಿಗೆ ಸಹಕಾರ ನೀಡುತ್ತಿದೆ.ಇದರ ಪ್ರಯೋಜನವನ್ನ ಪಡೆದು ಜನ ಸ್ವ ಉದ್ಯೋಗದಲ್ಲಿ ಯಶಸ್ಸನ್ನ ಕಾಣಬೇಕೆಂದು ಹೇಳಿದರು. ಅವರು ಉತ್ತರ ಕನ್ನಡ ಜಿಲ್ಲಾ ಹಿಂದು ಮುಕ್ರಿ ಸಮಾಜ ಸೇವಾ ಸಂಘ ಕುಮಟಾ ಇವರ ಆಶ್ರಯದಲ್ಲಿ ಸಮಾಜದ ಯುವಜನತೆಗೆ,ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವ ಉದ್ಯೋಗದ ಕುರಿತು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ನವೀನ್ ಕುಮಾರ ಮಾಹಿತಿ ನೀಡುತ್ತಾ ಸಂಸ್ಥೆಯಲ್ಲಿ ನೀಡುವ ಉಚಿತ ತರಬೇತಿ, ಮಾಹಿತಿಯನ್ನು ಪಡೆದುಕೊಂಡು ನಿರುದ್ಯೋಗ ಯುವಕ ಯುವತಿಯರು ಸ್ವಾವಲಂಬನೆ ಜೀವನ ನಡೆಸುವಂತಾಗಬೇಕು ಎಂದರು.
ಉಪನ್ಯಾಸಕರಾದ ಗೌರೀಶ ನಾಯ್ಕ ಸಂಸ್ಥೆಯಲ್ಲಿ ನೀಡುವ ತರಬೇತಿಗಳ ಬಗ್ಗೆ ವಿವರವಾಗಿ ತಿಳಿಸಿದರು.ನಂತರ
ಈ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಅನೇಕರು ತಮಗಿರುವ ಸಂದೇಹಗಳ ಕುರಿತು ಸಂಸ್ಥೆಯವರಲ್ಲಿ ಮಾಹಿತಿ ಪಡೆದು,ತರಬೇತಿಗೆ ಅರ್ಜಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ನವೀನ್ ಕೋಡಿಬಾಗಿಲ್,ಮಾರುತಿ ಮುಕ್ರಿ,ಗಣಪತಿ ಮುಕ್ರಿ,ಜಟ್ಟಿ ಮುಕ್ರಿ, ಅನೇಕ ಯುವಕ ಯುವತಿಯರು,ಮಹಿಳೆಯರು ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.