ಕುಮಟಾ: ತಾಲೂಕಿನ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ನಿಯಮಿತ ಇದರ ನೂತನ ಅಧ್ಯಕ್ಷರಾಗಿ ನೀಲಕಂಠ ನಾರಾಯಣ ನಾಯಕ ಉಪಾಧ್ಯಕ್ಷರಾಗಿ ಹರೀಶ ಬಾಲಚಂದ್ರ ನಾಯಕ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಹಿರೇಗುತ್ತಿಯಲ್ಲಿರುವ ಸಂಘದ ಮುಖ್ಯ ಕಛೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಅಬ್ದುಲ್ ಖಾದರ್ ಮಾಂಡ್ಲೀಕ್ ಕಾರವಾರ ಕಾರ್ಯ ನಿರ್ವಹಿಸಿದರು. ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮಾತನಾಡಿದ ನೀಲಕಂಠ ನಾಯಕರವರು “ಕಳೆದ 37 ವರ್ಷಗಳಿಂದಲೂ ನಾನು ಹಿರೇಗುತ್ತಿ ವ್ಯವಸಾಯ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ನನಗಿದೆ. ನನ್ನ ಸೇವಾ ಹಿರಿತನವನ್ನು ಪರಿಗಣಿಸಿದ ಸಂಘದ ಎಲ್ಲ ಸದಸ್ಯರು ನನ್ನನು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಅಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ. ಸಂಘದ ಎಲ್ಲ ಸದಸ್ಯರಿಗೂ ಮತ್ತು ಚುನಾವಣಾಧಿಕಾರಿಯವರಿಗೆ ಸೊಸೈಟಿ ಸಿಬ್ಬಂದಿ ವರ್ಗದವರಿಗೂ ಊರಿನ ಎಲ್ಲ ರೈತ ಬಾಂಧವರಿಗೂ ತುಂಬುಹೃದಯದ ಧನ್ಯವಾದ ಸಮರ್ಪಿಸುತ್ತೇನೆ” ಎಂದರು.
IMG 20180726 WA0011
ಉಪಾಧ್ಯಕ್ಷಸ್ಥಾನ ಅಲಂಕರಿಸಿದ ಹರೀಶ ನಾಯಕ ಸಂಘದ ಎಲ್ಲಾ ಸದಸ್ಯರಿಗೂ ಧನ್ಯವಾದ ಸಮರ್ಪಿಸಿದರು. ನಿರ್ದೇಶಕರಾದ ವಿನಾಯಕ (ಪಾಪು) ನಾಯಕ, ಉದಯ ನಾಯ್ಕ, ಕೃಷ್ಣಮೂರ್ತಿ ನಾಯಕ, ಮುರಳೀಧರ ನಾಯಕ, ರಾಮಕೃಷ್ಣ ನಾಯಕ, ಉಮೇಶ ಗಾಂವಕರ, ಆನಂದು ನಾಯಕ, ಪಾರ್ವತಿ ನಾಯಕ, ಯೋಗಿನಿ ನಾಯಕ, ಸುಬ್ರಹ್ಮಣ್ಯ ನಾಯಕ, ಬೊಮ್ಮಯ್ಯ ಹಳ್ಳೇರ, ಹಾಗೂ ಸಿಬ್ಬಂದಿಗಳಾದ ಸೆಕ್ರೆಟರಿ ರಾಘವೇಂದ್ರ ನಾಯಕ, ಗಣೇಶ ನಾಯಕ, ಕಮಲಾಕರ ನಾಯಕ, ಗೋವಿಂದ ಗೌಡ, ಬ್ರಹ್ಮಾನಂದ ನಾಯಕ ಹಾಜರಿದ್ದರು.

RELATED ARTICLES  ಕುಮಟಾ ತಾಲೂಕಾ ಕೆ.ಡಿ.ಪಿ ಪರಿಶೀಲನಾ ಸಭೆ :ಗೈರಾಗಿ ಕೆಂಗಣ್ಣಿಗೆ ಗುರಿಯಾದ ಅಧಿಕಾರಿಗಳು.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಹಿರೇಗುತ್ತಿ ಗ್ರಾಮ ಪಂಚಯತ್ ಅಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ ಮಹಾಬಲೇಶ್ವರ ಬ್ಯಾಂಕ್ ಗೋಕರ್ಣ ನಿರ್ದೇಶಕರಾದ ರಾಮು. ಕೆಂಚನ್ ಕಾಂಟ್ರಾಕ್ಟರ್ ರಾಜು ಕೃಷ್ಣ ಗಾಂವಕರ್, ಪಪ್ಪು ನಾಯಕ ಊರಿನ ನಾಗರಿಕರು ಉಪಸ್ಥಿತರಿದ್ದರು.

RELATED ARTICLES  ಮಂಕಿ ಸ.ಪ.ಪೂ ಕಾಲೇಜಿನಲ್ಲಿ ಎನ್ ಎಸ್ ಎಸ್ ಶಿಬಿರ ಉದ್ಘಾಟನೆ.