ಹೊನ್ನಾವರ: ಸ್ಥಳೀಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್‍ಮೆಂಟ್ ಸೆಲ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಮೂಲದ ‘ಸೆಕ್ಯುರಿಟಿಸ್ ಆ್ಯಂಡ್ ಇಂಟಲಿಜೆನ್ಸ್ ಸರ್ವಿಸಸ್ ಕಂಪನಿಯವರು ಸೆಕ್ಯುರಿಟಿ ಗಾಡ್ರ್ಸ್ ಮತ್ತು ಸೂಪರ್‍ವೈಸರ್ ಹುದ್ದೆಗಳ ಆಯ್ಕೆಗಾಗಿ ಕ್ಯಾಂಪಸ್ ಸಂದರ್ಶನ ನಡೆಸಿದರು. ಕುಮಟ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಯುವಕರಿಗೆ ಸೀಮಿತವಾಗಿದ್ದು, ಈ ಆಯ್ಕೆಯಲ್ಲಿ ಸುಮಾರು 50 ಅಭ್ಯರ್ಥಿಗಳು ಆಗಮಿಸಿದ್ದರು.
ಅವರಲ್ಲಿ ವಿವಿಧ ಪ್ರಕಾರದ ಆಯ್ಕೆ ಪ್ರಕ್ರಿಯೆ ನಡೆಸಿ 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಆದೇಶವನ್ನು ವಿತರಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ SIS ಕಂಪನಿಯ ನೇಮಕಾತಿ ಅಧಿಕಾರಿ ಸಂತೋಷ ನಾಯ್ಕ ಉದ್ಯೋಗದ ಮಾಹಿತಿ ಮತ್ತು ನಿಯಮಾವಳಿಗಳನ್ನು ತಿಳಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ನೇಮಕಾತಿ ಮೇಲ್ವಿಚಾರಕರಾದ ಸಾಯಿಪ್ರಸಾದ ಮಾತನಾಡಿ ಉದ್ಯೋಗ ವಿನಿಮಯ ಕೇಂದ್ರವು ಇಂತಹ ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಿ ಯುವಕರಿಗೆ ಉದ್ಯೋಗ ನೀಡಲು ಸಹಕರಿಸುತ್ತಿದೆ ಎಂದು ಹೇಳಿದರು.
ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಗಡೆಯವರು ದೇಶದ ಭದ್ರತೆಯಲ್ಲ್ಲಿ ಸುರಕ್ಷಿತಾ ಸಿಬ್ಬಂದಿಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಕಾಲೇಜಿನ ಪ್ಲೇಸ್‍ಮೆಂಟ್ ಅಧಿಕಾರಿ ಡಾ. ಡಿ. ಎಲ್. ಹೆಬ್ಬಾರ ಕಾರ್ಯಕ್ರಮ ಸಂಘಟಿಸಿ, ಸರ್ವರನ್ನೂ ಸ್ವಾಗತಿಸಿದರು. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದರು.