ಗೋಕರ್ಣ: ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಇಲ್ಲಿನ ಮಹಾಬಲೇಶ್ವರ ದೇಗುಲಕ್ಕೆ ಜನಸಾಗರವೇ ಹರಿದು ಬಂದಿದೆ.

ಗ್ರಹಣ ಕಾಲವಾದ ಮಧ್ಯರಾತ್ರಿ ೧೧.೩೦ ರಿಂದ ಬೆಳಗಿನ ಜಾವ ೪ ಗಂಟೆಯವರೆಗೆ ಪೂಜೆ ಮತ್ತು ಆತ್ಮಲಿಂಗ ಸ್ಪರ್ಶದರ್ಶನಕ್ಕೆ ದೇಗುಲ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸಮುದ್ರ ಸ್ನಾನಮಾಡಿ ಆತ್ಮ ಲಿಂಗಕ್ಕೆ ಪೂಜೆ ಸಲ್ಲಿಸಿದರು.

RELATED ARTICLES  ಗೋಖಲೆ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ : ಸಂಗೀತ ಕಲೋತ್ಸವದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅರಣ್ಯ ಸಚಿವ ಆರ್.ಶಂಕರ ಅವರು ಮಧ್ಯರಾತ್ರಿ ಎರಡು ಗಂಟೆಗೆ ಕುಟುಂಬ ಸಮೇತ ಗೋಕರ್ಣಕ್ಕೆ ಆಗಮಿಸಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು .

ಗ್ರಹಣ ಕಾಲದಲ್ಲಿ ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕ, ನವಧಾನ್ಯಭಿಷೇಕ , ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು .

RELATED ARTICLES  ಗೋಕರ್ಣ ಗೌರವ ಪಡೆದ ಶ್ರೀ ಶ್ರೀ ಶೇಖರಯ್ಯ ಸ್ವಾಮಿಗಳು.

ವೇ ಸಾಂಬಾ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು . ಪ್ರಧಾನ ಅರ್ಚಕರಾದ ವೇ ಶಿತಿಕಂಠ ಹಿರೇಭಟ್ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ , ಸ್ಮರಣಿಕೆ ನೀಡಿ ಗೌರವಿಸಿದರು .