ಭಟ್ಕಳ: ಶ್ರೀ ಗುರು ಸುಧೀಂದ್ರ ಬಿಸಿಎ ಬಿಬಿಎ ಕಾಲೇಜಿನಲ್ಲಿ 2018-19 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮವು ನಡೆಯಿತು. ಅತ್ಯಂತ ವಿಜೃಂಭಣೆಯಿಂದ ಅವರನ್ನು ಬರಮಾಡಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಿರಾಲಿಯ ಜನತಾ ವಿದ್ಯಾಲಯ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಎ.ಬಿ.ರಾಮರಥರವರು ಪ್ರಯತ್ನ ಮತ್ತು ಏಕಾಗ್ರತೆ ವಿದ್ಯಾರ್ಥಿ ಜೀವನದ ಪ್ರಮುಖ ಅಂಗ, ಇದನ್ನು ಗಳಿಸಿ ಇಂದಿನ ಈ ಸ್ಪರ್ಧಾತ್ಮಕಯುಗದಲ್ಲಿ ಯಶಸ್ಸು ಪಡೆಯಿರಿ ಎಂದು ಕರೆ ನೀಡಿದರು. ಮತ್ತೋರ್ವ ಮುಖ್ಯ ಅತಿಥಿ ಹಾಗೂ ಹಳೆಯ ವಿದ್ಯಾರ್ಥಿ, ಎಕ್ಸೆಂಚರ್ ಕಂಪೆನಿಯ ಮಾರುಕಟ್ಟೆ ತಜ್ಞರಾದ ನರೇಶ್ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ್ಯವನ್ನು ಬೆಳೆಸಿಕೊಡು ಉದ್ಯೋಗವಂತರಾಗಬೇಕು ಎಂದು ಸೂಚಿಸಿದರು. 2017-18ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಅಧ್ಯಕ್ಷರು ಬಿಇಟಿ ಡಾ. ಸುರೇಶ ನಾಯಕ್, ಆಡಳಿತಾಧಿಕಾರಿ ನಾಗೇಶ ಭಟ್ಟ್, ಬಿಸಿಎ ಪ್ರಾಂಶುಪಾಲರಾದ ಶ್ರೀನಾಥ ಪೈ, ಬಿ.ಕಾಂ ಶೈಕ್ಷಣಿಕ ಮುಖ್ಯಸ್ಥ ಪಿ.ಎಸ್. ಹೆಬ್ಬಾರ್, ಬಿ.ಬಿ.ಎ ಶೈಕ್ಷಣಿಕ ಸಂಯೋಜಕರಾದ ವಿಶ್ವನಾಥ ಭಟ್ಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಕ್ಷಯ್ ಪ್ರಭು ಹಾಗೂ ರಾಜೇಶ್ವರಿ ನಿರೂಪಿಸಿದರು. ಉಪನ್ಯಾಸಕ ಓಂಕಾರ ಮರ್ಬಳ್ಳಿ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.