ಬೆಂಗಳೂರು: ಜನ್ಮದಿನವು ಆತ್ಮಾವಲೋಕನೆಯ ದಿನ, ಪ್ರಪಂಚಕ್ಕೆ ನಾವು ಬಂದ ಉದ್ದೇಶವನ್ನು ನೆನಪಿಸಿಕೊಂಡು, ಆ ಗುರಿಯತ್ತ ನಾವು ಸಾಗುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ದಿನ ಜನ್ಮದಿನ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ನಡೆದ ವರ್ಧಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು, ದೊರೆತಿರುವ ಆಯಸ್ಸು ಲೋಕದ ಶ್ರೇಯಸ್ಸಿಗೆ ಬಳಕೆಯಾಗಬೇಕು. ರಾಮಕಾರ್ಯಕ್ಕಾಗಿ ಈ ಶರೀರ ಬಳಕೆಯಾಗಲಿ. ಸಂಕುಚಿತ ಮನಸ್ಸುಗಳ ವಿಕಸಿತಗೊಂಡು, ಯಾವ ಕೆಲಸದಿಂದ ಲೋಕಕ್ಕೆ ಶ್ರೇಯಸ್ಸು ಸುಲಭವಾಗುತ್ತದೋ, ಅಂತ ಕಾರ್ಯದಲ್ಲಿ ನಿರತರಾಗೋಣ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಧರ್ಮ ಕರ್ಮ ವಿಭಾಗದ ನೇತೃತ್ವದಲ್ಲಿ ಅರುಣಹವನ ಹಾಗೂ ತೃಚಕಲ್ಪ ಅರುಣ ನಮಸ್ಕಾರದ ಮೂಲಕ ಶ್ರೀಗಳ ವರ್ಧಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಋತ್ವಿಜರು ಅರುಣ ಪ್ರಶ್ನದ ಪಾರಾಯಣ ಮಾಡಿ ಆನಂತರ ಅರುಣಹವನವನ್ನು ನಡೆಸಿಕೊಟ್ಟರು. ಅರುಣಹವನದಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು ನಂದಿನಿ ಗೋಶಾಲೆಯ ಗೋವುಗಳಿಗೆ ಆಹಾರವನ್ನು ನೀಡಿ ಸಂತಸಿಸಿದರು. ಪೀಠಾರೂಢರಾದ ಶ್ರೀಗಳಿಗೆ ಎಲ್ಲಾ ಶಿಷ್ಯಭಕ್ತರು 46 ಅರುಣಮಂತ್ರಗಳಿಂದ 46 ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದ್ದು ವಿಶೇಷವಾಗಿತ್ತು. ಹೊರನಾಡಿನ ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಷಿ ದಂಪತಿಗಳು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿ, ಫಲಸಮರ್ಪಣೆ ಮಾಡಿದರು. ವರ್ಧಂತ್ಯೋತ್ಸವದ ನಿಮಿತ್ತ ಕಾಶಾಯವಸ್ತ್ರ, ಪಾದುಕೆ ಮುಂತಾದ ಸುವಸ್ತುಗಳನ್ನು ಶಿಷ್ಯಭಕ್ತರು ಶ್ರೀಗಳಿಗೆ ಸಮರ್ಪಿಸಿ ಧನ್ಯರಾದರು.

RELATED ARTICLES  ಅನುಪಮಾ ಶೆಣೈ ಕಾಂಗ್ರೆಸ್‌ನಿಂದ ಕಣಕ್ಕೆ.!

ಶ್ರೀಮಾತೆ ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮಠದ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಜಿ ಭಟ್, ಶ್ರೀನಿರ್ದೇಶ ಕಾರ್ಯದರ್ಶಿಗಳಾದ ಜಯರಾಮ ಕೊರಿಕ್ಕಾರ್, ಗಣೇಶ್ ಜಿ ಎಲ್, ಮಹಾಮಂಡಲದ ಅಧ್ಯಕ್ಷರಾದ ಈಶ್ವರೀ ಬೇರ್ಕಡವು ಸೇರಿದಂತೆ ಚಾತುರ್ಮಾಸ್ಯ ಸಮಿತಿಯ ಪದಾಧಿಕಾರಿಗಳು, ಮಹಾಮಂಡಲ, ಶಾಸನತಂತ್ರದ ಕಾರ್ಯದರ್ಶಿಗಳು ಹಾಗೂ ವಿವಿಧ ಭಾಗಗಳೀಂದ ಆಗಮಿಸಿದ್ದ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಗಳಾದರು.

RELATED ARTICLES  ಭಾರತತ್ವ ಉಳಿಸಲು ವಿಶ್ವವಿದ್ಯಾಪೀಠ ಸ್ಥಾಪನೆ: ರಾಘವೇಶ್ವರ ಶ್ರೀ

DSC01983 2
ತೃಚಕಲ್ಪ ಅರುಣ ನಮಸ್ಕಾರ:
ಶಿಷ್ಯಭಕ್ತರ ಅಜ್ಞಾನವೆಂಬ ಕತ್ತಲೆಯನ್ನು ಕಳೆದು, ಸುಜ್ಞಾನವೆಂಬ ಬೆಳಕನ್ನು ನೀಡುವ ಸೂರ್ಯಸ್ವರೂಪಿಯಾದ ಗುರುವಿಗೆ ವೇದೋಕ್ತ ಅರುಣ ನಮಸ್ಕಾರ ಮಂತ್ರಗಳಿಂದ ಸಾಷ್ಟಾಂಗಪೂರ್ವಕವಾಗಿ ನಮಿಸುವುದಾಗಿದೆ. ಸೂರ್ಯ ಹಾಗೂ ಗುರುವನ್ನು ಅದ್ವೈತ ಭಾವದಿಂದ 46 ಅರುಣ ಮಂತ್ರ ಪೂರ್ವಕವಾಗಿ ನಮಸ್ಕರಿಸುವುದು ತೃಚಕಲ್ಪ ಅರುಣ ನಮಸ್ಕಾರವಾಗಿದೆ.