ಕಾಸರಗೋಡು: ಭಾರತೀಯ ಸನಾತನ  ಪರಂಪರೆ ಗುರುಕುಲ ವಿದ್ಯಾಭ್ಯಾಸಕ್ಕೆ ಹೊಂದಿಕೊಂಡಿದೆ. ಆದರೆ ಇವತ್ತಿನ ಪ್ರಸ್ತುತತೆಯಲ್ಲಿ ಕೂಡಾ ಅದೇ ರೀತಿ ಸ್ಥಾನ ಮಾನ ಗುರುವಿಗೆ ನೀಡಬೇಕು ಎಂದು ಶಾಲಾ ಸಂಚಾಲಕಿ ಶಾರದಮ್ಮ ಹೇಳಿದರು. ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಸಂಸ್ಕೃತ  ಸಂಘದ ಆಶ್ರಯಲ್ಲಿ  ಎಲ್ಲ  ಸಂಘಗಳ ಸಹಕಾರದೊಂದಿಗೆ ನಡೆದ ರಾಮಾಯಣ ಮಾಸಾಚರಣೆ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಗುರು ಎಂದರೆ ಅಂಧಕಾರ ಹೋಗಲಾಡಿಸುವವ. ಬದುಕಿನಲ್ಲಿ ಗುರುನಿಷ್ಠೆ ಅಗತ್ಯ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನೋ ಮಾತೇ ಇದೆ. ಒಂದಕ್ಷರ ಕಲಿಸಿದಾತನೂ ಗುರು ಎನ್ನಲಾಗುತ್ತದೆ. ಗುರುಗಳಿಗೆ ವಂದನೆ ಸಲ್ಲಿಸುವುದು ಪ್ರಾಚೀನ ಸಂಸ್ಕೃತಿಯಲ್ಲೇ ರೂಢಿಯಲ್ಲಿತ್ತು. ಇಂದಿಗೂ ಗುರುವಿನ ಮಹತ್ವನ್ನರಿತು ಗುರುವಂದನೆ ನಡೆುಯುತ್ತಿದೆ. ಇಂತಹ ಕಾರ್ಯಕ್ರಮ ಅಗತ್ಯವಾಗಿ ನಮ್ಮ ದೇಶದ ಗುರುಸ್ಥಾನಕ್ಕೆ ಇರುವ ಮಹತ್ವ ಸಾಬೀತುಪಡಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ  ರಾಮಾಯಣ ಮಾಸಾಚರನಣೆ ಹಾಗೂ ಗುರುವಂದನೆ ನಡೆಯಿತು. 

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 09-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?.

ಅಧ್ಯಕ್ಷತೆ ವಹಿಸಿದ್ದ  ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ಮಾತನಾಡಿ,  ಶಾಲಾ ಜೀವನ ಅನ್ನೋ ಈ ಸುಂದರ ಸಮುದಲ್ಲಿ ಅನೇಕ ಗುರುಗಳ ಮೂಲಕ ವಿದ್ಯಾರ್ಜನೆಯಾಗುತ್ತದೆ. ಶಿಲ್ಪಿ ಕಲ್ಲು  ಕೆತ್ತುವಂತೆ ಗುರು ಒಬ್ಬ ಉತ್ತಮ ಶಿಷ್ಯನ ಜೀವನ ಕೆತ್ತುತ್ತಾನೆ ಎಂದರು.
ಸತ್ಯವತಿ, ಯುಪಿ ಸಂಸ್ಕೃತ ಅಧ್ಯಾಪಕ ಕೃಷ್ಣಪ್ರಸಾದ್ ಕಡೆಗೆದ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಭಾರ  ಪ್ರಿನ್ಸಿಪಾಲ್ ನರಸಿಂಹರಾಜ ಭಟ್, ಶಿವನಾರಾಯಣ ಭಟ್ ಮಾತನಾಡಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ಆದಿತ್ಯರಾಮ ಸ್ವಾಗತಿಸಿ, ಜತೆಕಾರ್ಯದರ್ಶಿ ಮೇಘ ವಂದಿಸಿದರು, ಸಾತ್ವಿಕ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. 

RELATED ARTICLES  ಸತತ ಎರಡನೇ ದಿನವೂ ಏರಿಕೆ ಕಂಡ ಕೊರೋನಾ ಕೇಸ್..!

ಎಲ್ಲ ಅಧ್ಯಾಪಕರು ಪುಷ್ಪಾರ್ಚನೆ ಮೂಲಕ ಗುರುವಂದನೆ ನಡೆಸಿದರು. ಭಜನೆ, ರಾಮಾಯಣ ಚಿತ್ರ ಪ್ರದರ್ಶನ ಮತ್ತು ಶಂಕರಾಚಾರ್ಯರ ಕಿರುಚಿತ್ರ ಪ್ರದರ್ಶನ ನಡೆಯಿತು. ಅಳಿದುಹೋಗುತ್ತಿರುವ ಭಾರತೀಯ  ಸಂಸ್ಕೃತಿಯ ಬಗ್ಗೆ ಜಾಗರೂಕರಾಗಲು ಕಾರ್ಯಕ್ರಮ ಸಹಕಾರಿಯಾಯಿತು.