ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ, ದಿನೇ ದಿನೇ ಹೊಸ ಹೊಸ ತಿರುವನ್ನು ಪಡೆಯುತ್ತಿದ್ದು, ಈ ನಡುವೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಇಲ್ಲಿ ತನಕ ಒಟ್ಟು 11 ಮಂದಿಯನ್ನು ಬಂಧಿಸಲಾಗಿದ್ದು, ನೂರಾರು ಜನರನ್ನು ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.

ಇದೇ ವೇಳೆ “ಅಧರ್ಮೀಯರ ವಿನಾಶ” ಹೆಸರಿನಲ್ಲಿ ರಾಜ್ಯ ಹಾಗೂ ಹೊರರಾಜ್ಯದ 37 ಚಿಂತಕರನ್ನು ಕೊಲ್ಲಲು ಮಹಾರಾಷ್ಟ್ರದ ಮಾಸ್ಟರ್ ಮೈಂಡ್‌ ಅಮೋಲ್‌ ಕಾಳೆ ನೇತೃತ್ವದಲ್ಲಿ ಪಡೆಯೊಂದು ಸಿದ್ದವಾಗಿತ್ತು ಎನ್ನಲಾಗುತ್ತಿದೆ.

ಹಂತಕರ ಹಿಟ್‌ಲೀಸ್ಟ್‌ನಲ್ಲಿ ಗಿರೀಶ್ ಕಾರ್ನಾಡ್‌, ಚಂದ್ರಶೇಕರ ಪಾಟೀಲ್‌, ನಿಡುಮಾಮಿಡಿ ಸ್ವಾಮೀಜಿ, ಬಂಜಗೆರೆ ಜಯಪ್ರಕಾಶ್, ಬಿ ಟಿ ಲಲಿತಾ ನಾಯಕ್‌, ಕೆ.ಎಸ್‌.ಭಗವಾನ್‌, ಸಿ ಎಸ್‌ ದ್ವಾರಕನಾಥ್‌ ಸೇರಿಂದತೆ ಒಟ್ಟು 37 ಮಂದಿ ಎಡಪಂಥೀಯ ಚಿಂತಕರನ್ನು ಹತ್ಯೆ ಮಾಡಲು ಸ್ಕೈಚ್‌ ರೂಪಿಸಿದ್ದರಂತೆ ಎನ್ನಲಾಗಿದೆ. ಸದ್ಯಕ್ಕೆ ಘಟನೆ ಸಂಬಂಧ ಬಂಧಿತ ಆರೋಪಿಗಳಿಂದ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಪಟ್ಟಂತೆ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಎಲ್ಲಾ ಆಯಾಮಗಳಿಂದ ಕೂಡ ಎಸ್ ಐ ಟಿ ತಂಡ ತನಿಖೆ ನಡೆಸಲಾಗುತ್ತಿದೆ.