ಕುಮಟಾ: 2018-19ನೇ ಶೈಕ್ಷಣಿಕ ವರ್ಷದ ಪಾಲಕರ-ಶಿಕ್ಷಕ-ಆಡಳಿತ ಮಂಡಳಿಯ ಮೊದಲ ಸಭೆಯು ಇದೇ ತಾ. 28/07/2018 ಶನಿವಾರ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ಪದವಿ ಪೂರ್ವ ಕಾಲೇಜಿನ ಇನ್ಫೋಸಿಸ್ ಬ್ಲಾಕ್‍ನಲ್ಲಿ ನಡೆಯಿತು. ಆಪ್ತಸಲಹಾಗಾರರಾಗಿ ಡಾ. ವಿಶಾಲ ಮನಶಾಸ್ತ್ರಜ್ಞರು ಸೆಂಟ ಇಗ್ನೇಷಿಯಸ್ ಆಸ್ಪತ್ರೆ ಹೊನ್ನಾವರ ಮತ್ತು ಪ್ರಸೂತಿತಜ್ಞರಾದ ಡಾ. ಅಶ್ವಿನಿ ಶ್ಯಾನಭಾಗ ಹದಿಹರೆಯ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಪಾಲಕರಿಗೆ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಡಾ. ವಿಶಾಲ, ಡಾ. ಅಶ್ವಿನಿ ಶ್ಯಾನಭಾಗ, ಡಾ. ಎಂ. ಆರ್. ನಾಯಕ ಪ್ರೋ. ಎಸ್.ಡಿ.ಎಮ್. ಕಾಲೇಜು ಹೊನ್ನಾವರ ಮತ್ತು ಪಾಲಕಾರಾದ ಎಸ್.ಎಸ್.ಪೈ ಹಿರಿಯ ಶಿಕ್ಷಕರು ಗಿಬ್ ಹೈಸ್ಕೂಲ್ , ಕುಮಟಾ ರವರನ್ನು ಒಳಗೊಂಡ ಆಪ್ತಸಲಹಾ ಸಮಿತಿ ರಚಿಸಲಾಯಿತು.
ಕೊಂಕಣ ಎಜ್ಯುಕೇಶನ್ ಟ್ರಸ್ಟನ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಇತ್ತೀಚಿಗಿನ ದಿನಗಳಲ್ಲಿ ಮಕ್ಕಳ ವ್ಯಕ್ತಿತ್ವದಲ್ಲಿ ನಡೆಯುತ್ತಿರುವ ಬದಲಾವಣೆಗಳಿಗೂ ಮನಸಿಕ ಆರೋಗ್ಯಕ್ಕೂ ಮತ್ತು ಪಾಲಕರಿಗೆ ಇರುವ ಸಂಭಂಧದ ಬಗ್ಗೆ ಮಾರ್ಮಿಕವಾಗಿ ತಿಳಿಸಿದರು.
ಪ್ರಾಶುಂಪಾಲರಾದ ಡಾ. ಸುಲೋಚನಾ ರಾವ್. ಬಿ ಅವರು ಪ್ರಾಸ್ತವಿಕ ಮಾತುಗಳಾನ್ನಾಡಿದರು. ಮತ್ತು ಪಾಲಕರೊಂದಿಗೆ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ವಿಶ್ವಸ್ಥರಾದ ರಮೇಶ ಪ್ರಭುರವರು ಮತ್ತು ವಿದ್ಯಾರ್ಥಿ ಸಲಹೆಗಾರರಾದ ಶ್ರೀಮತಿ ಲೀಲಾವತಿ ನಾಯಕರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಾರದ ಶ್ರೀ ಚಿದಾನಂದ ಭಂಡಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.