ಯಲ್ಲಾಪುರ: ದಾಂಡೇಲಿಯ ಅಜಿತ ನಾಯಕ ಅವರನ್ನು ಶುಕ್ರವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿ ಬಂಧನದ ಬಗ್ಗೆ ಪೋಲೀಸರು ತನಿಖೆ ಚುರುಕುಗೊಳಿಸಿದ್ದರು.

ದಾಂಡೇಲಿಯ ಅಜಿತ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಸಂಜೆ ಓರ್ವನನ್ನು ಪಟ್ಟಣದ ಬೆಲ್ ರಸ್ತೆಯಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

RELATED ARTICLES  ಪ್ರವಾಸಕ್ಕೆ ಬಂದವನು ಸಮುದ್ರದಲ್ಲಿ ಕಣ್ಮರೆ..!

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಯ ಮುಖ ಚಹರೆಯ ಆಧಾರದ ಮೇಲೆ ಶಂಕಿತನನ್ನು ಬಂಧಿಸಲಾಗಿದೆ. ದಾಂಡೇಲಿ ಮೌಳಂಗಿಯ ಪಾಂಡು ಯಾನೆ ದೀಪಕ‌ ಕಾಂಬ್ಳೆ ಶಂಕಿತ ಆರೋಪಿ ಎಂದು ವರದಿಯಾಗಿದೆ.

ಈತನ ಚಲನವಲನ ಗಮನಿಸಿದ ಪೊಲೀಸ್ ಸಿಬ್ಬಂದಿಯೋರ್ವರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಶಂಕಿತ ಕೊಲೆಗಾರನೆಂದು ತಿಳಿದು ಬಂದಿದೆ. ತಕ್ಷಣ ಈತನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಈವರೆಗೂ ಪೊಲೀಸರು ಇದನ್ನು ಅಧಿಕೃತಗೊಳಿಸಿಲ್ಲ.

RELATED ARTICLES  ಶ್ರೀಮದ್ ವಿದ್ಯಾಧೀಶ ತೀರ್ಥರ ಚಾತುರ್ಮಾಸ್ಯ ಜುಲೈ 20 ರಿಂದ

ತನಿಖೆಯ ನಂತರ ಪೋಲೀಸರ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.