ಶಿರಸಿ: 95ವರ್ಷ ಸಾರ್ಥಕವಾಗಿ ಪೂರೈಸಿದ ಶಿರಸಿಯ ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ ಸೊಸೈಟಿಯು2017-18ನೇ ಸಾಲಿನಲ್ಲಿರೂ.2.05ಕೋಟಿ ನಿವ್ವಳ ಲಾಭ ಗಳಿಸಿದ್ದು ಶೇರುದಾರ ಸದಸ್ಯರಿಗೆ ಶೇ.20 ಲಾಭಾಂಶ ಘೋಷಿಸಿದೆ. ಸಂಘದ2017-18ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯು ದಿನಾಂಕ: 01.08.2018ರಂದು ಮಧ್ಯಾಹ್ನ3:00ಘಂಟೆಗೆಜರುಗಲಿದ್ದು, ಸಂಘದ ವಾರ್ಷಿಕಅಢಾವೆಯಲ್ಲಿ ಈ ವಿವರಗಳನ್ನು ನೀಡಲಾಗಿದೆ.

ಸಂಘವು ವರದಿ ವರ್ಷದಲ್ಲಿ ಒಟ್ಟೂರೂ.792ಕೋಟಿ ವಹಿವಾಟು ನಡೆಸಿದೆ.ಸಂಘದ ದಲಾಲಿ ವಿಭಾಗದಲ್ಲಿ1.76 ಲಕ್ಷಕ್ವಿಂಟಲ್‍ ಅಡಿಕೆ ವಿಕ್ರಿ ಮಾಡಿರೂ.442ಕೋಟಿ ವಹಿವಾಟು ನಡೆಸಲಾಗಿದೆ.ಸಂಘದ ಸಿಹಿ ಅಡಿಕೆ ಪುಡಿ ವಿಭಾಗದಲ್ಲಿ ರೂ.44ಕೋಟಿ ವಹಿವಾಟು ನಡೆಸಲಾಗಿದ್ದು,15,460ಕ್ವಿಂಟಲ್‍ಅಡಿಕೆ ವಿನಿಯೋಗಿಸಿರೂ.27ಲಕ್ಷ ಲಾಭ ಗಳಿಸಲಾಗಿದೆ.ಸಂಘದಅಡಿಕೆಖರೀದಿ ವಿಭಾಗದಲ್ಲಿ70,987ಕ್ವಿಂಟಲ್‍ ಅಡಿಕೆ ಖರೀದಿಸಿ, ಸಂಸ್ಕರಿಸಿ ರೂ.183.53ಕೋಟಿ ವಹಿವಾಟು ನಡೆಸಿ ರೂ.75 ಲಕ್ಷ ಲಾಭ ಗಳಿಸಲಾಗಿದೆ.ಸಂಘದ ಸುಪರ್ ಮಾರ್ಕೆಟ್‍ನ ಕಿರಾಣಿ ಹಾಗೂ ಕೃಷಿ ವಿಭಾಗದಲ್ಲಿರೂ.121ಕೋಟಿ ವಹಿವಾಟು ನಡೆಸಿ ರೂ. 2.68ಕೋಟಿ ಲಾಭ ಗಳಿಸಲಾಗಿದೆ.
ಸಂಘದಲ್ಲಿ ಸದಸ್ಯರ ಠೇವಣಿರೂ.147ಕೋಟಿಗೆಏರಿದ್ದು, ಸಂಘದ ಸ್ವಂತಠೇವಣಿ ವಿವಿಧ ಸಂಸ್ಥೆಗಳಲ್ಲಿ 68ಕೋಟಿಆಗಿರುತ್ತದೆ.ಸಂಘದ ವ್ಯಕ್ತಿ ಸದಸ್ಯರಿಗೆರೂ.117.82ಕೋಟಿ ಸಾಲ ನೀಡಿದ್ದು, ಪ್ರಾಥಮಿಕ ಸಹಕಾರಿ ಸಂಘಗಳಿಗೆ 11.40 ಕೋಟಿರೂ.ಸಾಲ ನೀಡಿದೆ.ಖರೀದಿದಾರರಿಗೂರೂ.58.56ಕೋಟಿ ಉದ್ರಿ ನೀಡಿದ್ದು ಇದರಿಂದ ಅಡಿಕೆ ಮಾರುಕಟ್ಟೆ ಒಂದು ಸ್ಥಿರ ದರದಲ್ಲಿ ನಿಲ್ಲುವಂತಾಗಿದೆ.ಸಿದ್ದಾಪುರ ಶಾಖೆಯಲ್ಲಿ32 ಸಾವಿರಕ್ವಿಂಟಲ್‍ಅಡಿಕೆ ವಿಕ್ರಿಆಗಿದ್ದರೆ, ಯಲ್ಲಾಪುರದಲ್ಲಿಯೂ31 ಸಾವಿಉ್ಪಕ್ವಿಂಟಲ್‍ಅಡಿಕೆ ವಿಕ್ರಿ ವರದಿ ವರ್ಷದಲ್ಲಿ ಆಗಿರುತ್ತದೆ.ಮುಂಡಗೋಡ ಶಾಖೆ ಹಾಗೂ ಶಿರಸಿಯಲ್ಲಿ 820ಟನ್ ಜೋಳ ಖರೀದಿಸಲಾಗಿದೆ.ಸಂಘದ ಸ್ವಂತ ಬಂಡವಾಳವು ರೂ.100.91 ಕೋಟಿಗೆಏರಿದೆ.ಗಳಿಸಿದ ದಲಾಲಿ 5.04 ಕೋಟಿಗಳಾಗಿದ್ದು, ಒಟ್ಟೂ ಲಾಭದ ಪೂರ್ವದಲ್ಲಿರೂ.7.76ಕೋಟಿ ವಿವಿಧ ನಿಧಿಗೆತೆಗೆದಿರಿಸಲಾಗಿದೆ.ಪ್ರಸಕ್ತ ವರ್ಷದಲ್ಲಿರೂ.5.36ಕೋಟಿ ಮೌಲ್ಯದಧಾರಾಹಿಂಡಿಯ51,765 ಚೀಲಗಳನ್ನು ವಿಕ್ರಿ ಮಾಡಲಾಗಿದೆ.

ತೋಟಗಾರ್ಸ್‍ಕೋ-ಆಪರೇಟಿವ್ ಸೇಲ್ ಸೊಸೈಟಿಯು ಅಡಿಕೆದರದ ಸ್ಥಿರತೆಗಾಗಿ ಮಾಡಿದ ಹಾಗೂ ಮಾಡುತ್ತಿರುವಯತ್ನದ ಫಲ ಈಗ ಕಳೆದ ಕೆಲ ವರ್ಷಗಳಿಂದ ಸ್ಪಷ್ಟವಾಗಿ ಸದಸ್ಯರೈತರಿಗೆ ದೊರೆಯುತ್ತಿದೆ. ಅಡಿಕೆದರದ ಏರಿಳಿತದ ಭರಾಟೆಯಿಂದಅಡಿಕೆ ಬೆಳೆಗಾರರು ಕಂಗೆಟ್ಟಿದ್ದ ಸಂದರ್ಭದಲ್ಲಿ ಸಂಘವು ಖರೀದಿದಾರರ ಪಾತ್ರವಹಿಸಿ ಸ್ವಂತಅಡಿಕೆಖರೀದಿ ಆರಂಭಿಸಿತು.ಅಡಿಕೆ ಬೆಲೆ ಕುಸಿತವಾದಾಗಲೆಲ್ಲ ಸರಕಾರಗಳು ಘೋಷಿಸುತ್ತಿದ್ದ “ಬೆಂಬಲ ಬೆಲೆ” ಯೋಜನೆ ಕೇವಲ ನಾಮಕೇವಾಸ್ತೆ ಎಂಬಂತಾಗಿಅಡಿಕೆ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗದೇ ಹೋದಂತಹ ಸಂದರ್ಭದಲ್ಲಿಅಡಿಕೆ ಬೆಳೆಗಾರರಿಗೆ ಉತ್ತಮವಾದ ಹಾಗೂ ಸ್ಥಿರವಾದ ದರ ಕಲ್ಪಿಸಿಕೊಡುವಲ್ಲಿ ಸಂಘವು ಮಹತ್ವದ ಪಾತ್ರವಹಿಸುತ್ತಿದೆ.ಸಂಘವು ಮಾರುಕಟ್ಟೆಯಲ್ಲಿನದರಕ್ಕಿಂತ ಹೆಚ್ಚಿನದರದಲ್ಲಿಅಡಿಕೆಖರೀದಿ ಆರಂಭಿಸಿದ್ದರಿಂದ ಸಹಜವಾಗಿಆರಂಭದ ಹಂತದಲ್ಲಿ ಸಂಘಕ್ಕೆ ವ್ಯಾಪಾರೀ ನಷ್ಟವಾಯಿತಾದರೂ ಸದಸ್ಯರಿಗೆ ಹೆಚ್ಚಿನದರ ದೊರಕಿಸಿಕೊಟ್ಟು ಸಂಕಲ್ಪಿತಉದ್ದೇಶ ಸಾಧಿಸಿದ ಸಾರ್ಥಕತೆ ಸಂಘಕ್ಕಿದೆ.ನಂತರದ ಹಂತದಲ್ಲಿ ನಿಧಾನವಾಗಿ ಮಾರುಕಟ್ಟೆಯಲ್ಲಿ ಸಂಘದ ಹಿಡಿತ ಪ್ರಬಲವಾಗುತ್ತಾ ಹೋಗಿ ಇಂದು ಭಾರತದಾದ್ಯಂತಉತ್ತಮಗುಣಮಟ್ಟದಅಡಿಕೆ ಪೂರೈಕೆದಾರರಲ್ಲಿ ಸಂಘವು ಮೊದಲ ಸ್ಥಾನದಲ್ಲಿದೆ.ಕಳೆದ ನಾಲ್ಕೈದು ವರ್ಷಗಳಿಂದ ಅಡಿಕೆದರಆಕಾಶಕ್ಕೇರದಿದ್ದರೂ ಸಹ ಪಾತಾಳಕ್ಕೂ ಇಳಿದಿಲ್ಲವೆಂಬುದುಅತ್ಯಂತ ಪ್ರಮುಖವಾಗಿ ಗಮನಿಸಬೇಕಾದ ಅಂಶ. ವರ್ಷದುದ್ದಕ್ಕೂಅಡಿಕೆದರ ಸರಿಸುಮಾರುಒಂದೇ ಪ್ರಮಾಣದಲ್ಲಿಇರುವುದರಿಂದಎಲ್ಲ ಸ್ತರದ ಬೆಳೆಗಾರರಿಗೂ ಉತ್ತಮದರದೊರೆಯುವಂತಾಗಿದೆ.ಸದಸ್ಯರಿಗೆಇದರಿಂದಾಗಿತಮ್ಮ ವಾರ್ಷಿಕಆದಾಯದ ಕುರಿತು ಒಂದು ಸ್ಪಷ್ಟಚಿತ್ರಣ ದೊರೆಯುವಂತಾಗಿದೆ.ಸದಸ್ಯರು ಪರಿಸ್ಥಿತಿಯನ್ನು ಅರಿತುಕೊಂಡುತಮ್ಮಒಂದು ವರ್ಷದಆದಾಯದ ಮಿತಿಯಲ್ಲಿತಮ್ಮಖರ್ಚುವೆಚ್ಚಗಳನ್ನು ಮಿತಿಗೊಳಿಸಿಕೊಂಡು ತಮ್ಮ ಸಾಲವನ್ನೂ ಸಹ ಆದಾಯದ ಮಿತಿಯೊಳಗೇ ಇರುವಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಿದೆ.

ಅಡಿಕೆ ಬೆಳೆಗಾರರಿಗೆ ಬೆಳೆ ಮಾರಾಟದಲ್ಲಿಆಗುತ್ತಿದ್ದ ಶೋಷಣೆಯನ್ನುತಪ್ಪಿಸಲು ಮಾರುಕಟ್ಟೆ ಮಧ್ಯಪ್ರವೇಶಯೋಜನೆಯಡಿ ಸ್ವಂತಅಡಿಕೆಖರೀದಿ ವ್ಯವಹಾರ ಆರಂಭಿಸಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದ ನಂತರ ಸಂಘವು ಅಡಿಕೆ ಬೆಳೆಗಾರರಿಗೆ ಜೀವನಾವಶ್ಯಕಗಳು ಹಾಗೂ ಕೃಷಿ ಅಗತ್ಯಗಳ ಖರೀದಿಯಲ್ಲಿಯೂಶೋಷಣೆಯಾಗದಂತೆ ನೋಡಿಕೊಳ್ಳಲು ಸಂಘದಕಿರಾಣಿಅಂಗಡಿಯನ್ನು ಮೇಲ್ದರ್ಜೆಗೇರಿಸಿ ಸುಪರ್ ಮಾರ್ಕೆಟ್ ಆರಂಭಿಸಿತು. ಅತ್ಯಲ್ಪಕಾಲದಲ್ಲಿ ಬೃಹತ್‍ಪ್ರಮಾಣದಲ್ಲಿ ಬೆಳೆದು ನಿಂತಿರುವಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ಇಂದುಅಡಿಕೆ ಬೆಳೆಗಾರರ ಮಟ್ಟಿಗೆ ಕೇಳಿದ್ದನ್ನೆಲ್ಲ ಕೊಡುವಕಲ್ಪವೃಕ್ಷವಾಗಿದೆಯೆಂದರೆಅತಿಶಯೋಕ್ತಿಯೇನಲ್ಲ!

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 180 ಕರೊನಾ ಕೇಸ್

ಅಡಿಕೆಆರೋಗ್ಯಕ್ಕೆ ಹಾನಿಕಾರಕವೆಂಬ ಕಳಂಕ ಹೊತ್ತುಕೊಂಡು ನಿಷೇಧಕ್ಕೊಳಗಾಗುವ ಆತಂಕಕಾರಿ ಬೆಳವಣಿಗೆಗಳಾಗಿ, ಅಡಿಕೆ ಬಳಕೆಯ ಬಹುದೊಡ್ಡ ಮಾಧ್ಯಮವಾಗಿದ್ದಗುಟ್ಕಾಉದ್ಯಮ ನಿಷೇಧಕ್ಕೊಳಗಾಗಿ ಸಂಪೂರ್ಣ ಸ್ಥಗಿತಗೊಳ್ಳುವಂತ ಸಂದರ್ಭದಲ್ಲಿಅಡಿಕೆ ಬಳಕೆಯ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು, ಬಳಕೆಯನ್ನು ಹೆಚ್ಚಿಸಿ ಮಾರುಕಟ್ಟೆಯಲ್ಲಿಅಡಿಕೆಯ ಬೇಡಿಕೆ ಕುಸಿಯದಂತೆ ಮಾಡುವಉದ್ದೇಶದಿಂದ ಸಂಘವು ಅಡಿಕೆಯ ಮೌಲವರ್ಧನೆ ಮಾಡಿ ಸಿಹಿ ಅಡಿಕೆ ಪುಡಿತಯಾರಿಕೆ ಆರಂಭಿಸಿತು. ಇದಕ್ಕೂ ಸಹ ಆರಂಭದಲ್ಲಿತೀವ್ರವಾದ ಟೀಕೆಗಳನ್ನು ಎದುರಿಸಬೇಕಾಯಿತು.ಆದರೆಇಂದುಟಿ.ಎಸ್.ಎಸ್. ಟೈಗರ್ ಸಿಹಿ ಅಡಿಕೆ ಪುಡಿಅಡಿಕೆಯ ಬಳಕೆಗೆ ಬಹುದೊಡ್ಡ ಪ್ರಮಾಣದಲ್ಲಿಕೊಡುಗೆ ನೀಡುತ್ತಿರುವುದು ಎಲ್ಲರೆದುರು ಇರುವ ಸತ್ಯ.ಸಂಘವು ಸ್ವಂತಅಡಿಕೆಖರೀದಿಯ ಸುಮಾರು ಶೇ.20-25ರಷ್ಟು ಪ್ರಮಾಣದಅಡಿಕೆಯನ್ನು ಸಿಹಿ ಅಡಿಕೆಪುಡಿತಯಾರಿಕೆಗೆ ಬಳಸುತ್ತಿದೆ.ಇದರಿಂದಾಗಿ ಮಾರುಕಟ್ಟೆದರದಲ್ಲಿನ ಏರಿಳಿತದ ಪರಿಣಾಮವನ್ನುತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.

ವಯಕ್ತಿಕವಾದ ಲಾಭದಉದ್ದೇಶವಿಲ್ಲದೇ, ಸದಸ್ಯರ ಹಿತರಕ್ಷಣೆಯನ್ನೇ ಪ್ರಧಾನವಾಗಿರಿಸಿಕೊಂಡು ಸಂಘವು ಅಡಿಕೆ ಬೆಳೆಗಾರರ ಬೆಳೆಗೆ ಉತ್ತಮವಾದ ಸ್ಥಿರವಾದ ದರ ಹಾಗೂ ಬೇಡಿಕೆಕಲ್ಪಿಸುವ ಮೂಲಕ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದಂತೆಯೇ ಸಾಂಘಿಕ ಯತ್ನದಿಂದಾಗಿಅಡಿಕೆ ಬೆಳೆಗಾರರ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ಸಹ ಹಿಡಿತ ಸಾಧಿಸುತ್ತಿರುವುದು ಸಹಕಾರಿಕ್ಷೇತ್ರದಅಭೂತಪೂರ್ವ ಬೆಳವಣಿಗೆಯೆಂದರೆ ತಪ್ಪಾಗಲಿಕ್ಕಿಲ್ಲ.

ಸಂಘದ ವಿಶಿಷ್ಟವಾದಸೇವೆಗಳು
• ಪಾನ್‍ಕಾರ್ಡ್ ವ್ಯವಸ್ಥೆ
• ಇ-ಸ್ಟಾಂಪಿಂಗ್ ವ್ಯವಸ್ಥೆ
• ವಿದ್ಯುತ್ ಬಿಲ್ ಪಾವತಿ
• ರೈತರಿಗೆ ಮಧ್ಯಾಹ್ನಊಟದ ವ್ಯವಸ್ಥೆ
• ಊಟದ ನಂತರ ವಿಶ್ರಾಂತಿ ವ್ಯವಸ್ಥೆ
• ಎಸ್.ಎಂ.ಎಸ್. ಮೂಲಕ ವ್ಯವಹಾರಗಳ ಮಾಹಿತಿ
• ವ್ಯಾಪಾರಆದಾಗ ದರಗಳ ಮಾಹಿತಿಎಸ್.ಎಂ.ಎಸ್ ಮೂಲಕ
• ಕಚ್ಚಾ ತೂಕಆದ ನಂತರಎಸ್.ಎಂ.ಎಸ್ ಮೂಲಕ ಮಾಹಿತಿ
• ಸಂಘದಲ್ಲೇ ಮೂಲಕ ಶುಲ್ಕ ರಹಿತ ಹಣದ ವರ್ಗಾವಣೆ ವ್ಯವಸ್ಥೆ.
• ಬಸ್, ಟ್ರೇನ್ ಹಾಗೂ ಫ್ಲೈಟ್‍ಟಿಕೆಟ್ ಬುಕಿಂಗ್ ವ್ಯವಸ್ಥೆ.

ವೈವಿಧ್ಯಮಯ ಸುಪರ್ ಮಾರ್ಕೆಟ್…ಎಲ್ಲವೂಇಲ್ಲೇ!
• ಕಿರಾಣಿ ಸಾಮಾನುಗಳು
• ರಸಗೊಬ್ಬರ-ಸಾವಯವಸಹಿತ
• ವಿವಿಧ ಹಿಂಡಿಗಳು
• ಕ್ರಿಮಿನಾಶಕಗಳು
• ಕೃಷಿ ಉಪಕರಣಗಳು
• ಟಿ.ವಿ, ಫ್ರಿಡ್ಜ್& ವಾಷಿಂಗ್ ಮಷಿನ್‍ಗಳು
• ಪೂಜಾ ಸಾಮಗ್ರಿಗಳು
• ತರಕಾರಿ ಮತ್ತು ಹಣ್ಣುಗಳು
• ಉಡುಗೊರೆ ಸಾಮಗ್ರಿಗಳು
• ಸ್ಟೀಲ್ ಪಾತ್ರೆಗಳು
• ಬಂಗಾರದ ಆಭರಣಗಳು
• ಕ್ರೀಡಾ ಸಾಮಗ್ರಿಗಳು
• ಮೊಬೈಲ್ ಪೋನ್‍ಗಳು
• ಬಟ್ಟೆಗಳು
• ಬಂಗಾರ-ಬೆಳ್ಳಿ
• ಮೇಲ್ಛಾವಣಿ ಶೀಟುಗಳು
• ಪಾದರಕ್ಷೆಗಳು
• ನೀರಾವರಿ ಉಪಕರಣಗಳು
• ಹಾರ್ಡವೇರ್ ಉಪಕರಣಗಳು
• ಬಣ್ಣ ಮತ್ತು ಬಣ್ಣದ ಸಾಮಾನುಗಳು
• ಗೃಹೋಪಯೋಗಿ ವಸ್ತುಗಳು
• ಪ್ಲಾಸ್ಟಿಕ್‍ನ ವಿವಿಧ ಸಾಮಾನುಗಳು
• ವಿದ್ಯುತ್ ಸಾಮಾನುಗಳು
• ಕಂಪ್ಯೂಟರ್ ಸಾಮಗ್ರಿಗಳು
• ಲ್ಯಾಪ್‍ಟಾಪ್
• ಔಷಧಿಗಳು & ಜನೌಷಧಿಗಳು
• ಕಟ್ಟಡ ಸಾಮಗ್ರಿಗಳು
• ಸಿಮೆಂಟ್ ಉತ್ಪನ್ನಗಳು
• ಟೈಲ್ಸ್ ಮತ್ತು ಸಿರಾಮಿಕ್ಸ್
• ಪೀಠೋಪಕರಣಗಳು
• ಸ್ಟೇಷನರಿ ಸಾಮಗ್ರಿಗಳು
ಸರಕಾರಕ್ಕೆ ವಿವಿಧ ತೆರಿಗೆಗಳು:
ಸಂಘದದೈನಂದಿನ ವಹಿವಾಟುಗಳಿಂದ ಸದಸ್ಯರಿಗೆ ಅನುಕೂಲ ಕಲ್ಪಿಸುವುದರಜೊತೆಗೆ ಸಂಘವು ಸರಕಾರಕ್ಕೂ ಸಹ ಈ ಕೆಳಕಾಣಿಸಿದ ಬಾಬ್ತಿನಲ್ಲಿಕೋಟ್ಯಂತರ ರೂಪಾಯಿಗಳನ್ನು ಭರಣ ಮಾಡುತ್ತಿದೆ.ನಾವು 2017-18ನೇ ಸಾಲಿನಲ್ಲಿ ಸರಕಾರಕ್ಕೆ ವಿವಿಧರೀತಿಯಲ್ಲಿ ಪಾವತಿಸಿದ ತೆರಿಗೆ/ಶುಲ್ಕದ ವಿವರ
ಅ.ನಂ. ವಿವರ ರಖಂ(ರೂ.) ಕೋಟಿ ಗಳಲ್ಲಿ
1 ವ್ಯಾಟ್ 2.25 ಕೋಟಿ
2 ಮಾರ್ಕೆಟ್ ಸೆಸ್ 8.10 ಕೋಟಿ
3 ಆದಾಯತೆರಿಗೆ 1.21 ಕೋಟಿ
4 ಸೆಂಟ್ರಲ್‍ಎಕ್ಸೈಸ್ 25.81 ಲಕ್ಷ
5 ಸಿ ಜಿ ಎಸ್ ಟಿ 7.07 ಕೋಟಿ
6 ಎಸ್ ಜಿ ಎಸ್ ಟಿ 6.90 ಕೋಟಿ
7 ಅಂತರರಾಜ್ಯಜಿ.ಎಸ್.ಟಿ. 5.08 ಕೋಟಿ
8 ಇತರೆ ಕರಗಳು 63 ಲಕ್ಷ
ಅಂತೂ 31.49 ಕೋಟಿ

ಸಂಘದ ನಿಧಿಗಳು…
ವಿವರ ಪ್ರಸಕ್ತ ಸಾಲಿನಲ್ಲಿ ತೆಗೆದಿರಿಸಿದ್ದು 31.03.2018ಕ್ಕೆ ಇದ್ದಂತೆ
• ಕಟ್ಟಡ ನಿಧಿ 3.00 27.86
• ಮುಳುಗುವ ಸಾಲದ ನಿಧಿ 1.20 16.85
• ದರ ಏರಿಳಿತ ನಿಧಿ 0.20 22.60
• ಗಂಡಾಂತರ ನಿಧಿ 0.20 2.37
• ವಾಹನ ಬದಲಾಯಿಸುವ ನಿಧಿ 0.67 2.66
• ಯಂತ್ರೋಪಕರಣ ಬದಲಾಯಿಸುವ ನಿಧಿ 0.50 2.00
• ಆರೋಗ್ಯ ನಿಧಿ 0.93 1.79
• ಕೃಷಿ ಅವಘಡ ಪರಿಹಾರ ನಿಧಿ 0.26 0.78
• ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆ ಸಂಶೋಧನಾ ನಿಧಿ 0.20 0.40
• ಕಾಯ್ದಿಟ್ಟ ನಿಧಿ 0.59 19.85
• ಪ್ರಚಾರ ನಿಧಿ 0.10 0.02
• ಧರ್ಮಾರ್ಥ ನಿಧಿ 0.02
• ಸದಸ್ಯರಕ್ಷೇಮ ನಿಧಿ 1.02 2.73
• ನೌಕರರಕ್ಷೇಮ ನಿಧಿ 0.08 0.70
• ಶತಮಾನೋತ್ಸವ ನಿಧಿ 0.10 0.70
ಒಟ್ಟೂ ನಿಧಿಗಳು 9.05 101.33

RELATED ARTICLES  ಗುರು ಸುಧೀಂದ್ರ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಿಕ್ಕಿತು ಭಾರೀ ಸ್ವಾಗತ

ಸಂಘದ ಸದಸ್ಯ ಪರ ಖರ್ಚುಗಳು (ಸಂಘದ ಸಾಮಾಜಿಕಸೇವಾ ಬದ್ಧತೆ)
• ಮೈತ ಸದಸ್ಯರಅಂತ್ಯಸಂಸ್ಕಾರಕ್ಕೆ ನೀಡಿದ್ದು 96ಜನರಿಗೆ ರೂ. 9,60,000/-
• ಧರ್ಮಾರ್ಥ ನಿಧಿಯಿಂದಜನರಿಗೆ/ಸಂಸ್ಥೆಗಳಿಗೆ 151ಜನರಿಗೆ ರೂ.9,98,411/-
• ಬೈಫ್ ಮತ್ತುಸುರಧೇನುಕೃತಕಗರ್ಭಧಾರಣೆ ಕೇಂದ್ರಗಳು 6 ಕೇಂದ್ರಗಳು ರೂ.16,52,404/-
• ಕಟ್‍ಬಾಕಿ ಸದಸ್ಯರಿಗೆಏಕಕಂತಿನ ಬಡ್ಡಿರಿಯಾಯತಿ 53ಜನರಿಗೆ ರೂ. 61,62,531/-
• ಕೃಷಿ ಅವಘಡ ಪರಿಹಾರಗಳ ನಿಧಿಯಿಂದ 29 ಜನರಿಗೆ ರೂ. 5,15,388/-
• ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ 420ಜನರಿಗೆ ರೂ. 5,77,150/-
• ರೈತರಿಗೆ ವಿಕ್ರಿಮೇಲಿನ ಬೋನಸ್ 12,162ಜನರಿಗೆ ರೂ. 55,61,060/-
• ಸದಸ್ಯ ಸಹಕಾರ ಸಂಘಗಳಿಗೆ ರಿಬೇಟ್ 119ಸಂಘಗಳಿಗೆ ರೂ. 43,37,177/-
• ಸದಸ್ಯರಿಗೆ ಸುಪರ್‍ಮಾರ್ಕೆಟ್ ಬೋನಸ್ ತೆಗೆದಿರಿಸಿದ್ದು ರೂ. 31,06,418/-
• ಟಿ.ಎಸ್.ಎಸ್. ಆಸ್ಪತ್ರೆಯಲ್ಲಿರಿಯಾಯಿತಿ ರೂ. 7,34,143/-
• ಅಡಿಕೆ ವ್ಯಾಪಾರದಿಂದ 2ನೇ ಟೆಂಡರ್‍ನಲ್ಲಾದ ವ್ಯತ್ಯಾಸಗಳು ರೂ. 4,50,31,664/-
• ಕೃಷಿ ಕಿರಾಣಿ ಮಾರುಕಟ್ಟೆಗಿಂತ 3% ರಷ್ಟುಕಡಿಮೆ ರೂ.3,62,40,392/-
ಅಂತೂ ರೂ. 10,58,76,738/-

1923ರಿಂದ ಇಂದಿನವರೆಗೆ…
 21-09-1923ರಂದು ಸಂಘದ ಸ್ಥಾಪನೆ.
 1947ರಲ್ಲಿ ಸಿದ್ದಾಪುರ ಶಾಖೆ ಆರಂಭ.
 ಪತ್ತು ಮತ್ತು ಮಾರಾಟಜೋಡಣೆ ಪದ್ಧತಿಜಾರಿ.
 1955ರಲ್ಲಿಯಲ್ಲಾಪುರದಲ್ಲಿ ಶಾಖೆ ಆರಂಭ.
 08-10-1962ರಂದುಔಷಧüಅಂಗಡಿ ಪ್ರಾರಂಭ.
 17-06-1964ರಂದು ನಮಾಜಗುಡ್ಡದಲ್ಲಿ ಹೊಸ ಕಛೇರಿಉದ್ಘಾಟನೆ.
 21-12-1964ರಂದು ಪೆಟ್ರೋಲ್ ಬಂಕ್‍ಆರಂಭ.
 09-05-1965ರಂದು ಅಕ್ಕಿ ಗಿರಣಿಆರಂಭ.
 ಸಂಘದ ಸಹಯೋಗದೊಂದಿಗೆ, ಸಂಘದಕಟ್ಟಡದಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿಂದ ಮಣ್ಣು ಸಂಶೋಧನಾಕೇಂದ್ರ ಸ್ಥಾಪನೆ.
 1969-70ರಲ್ಲಿ ಸರಕಾರದ ಶೇರು ಭಂಡವಲು ಹಾಗೂ ಸಾಲ ವಾಪಸು.
 ಎ.ಟಿ.ಎಮ್. ಮೂಲಕ 24ಗಂಟೆ ಸದಸ್ಯರಿಗೆ ಹಣ ಬಟವಡೆ.
 2000-01ರಲ್ಲಿಅಡಿಕೆಖರೀದಿ ವಿಕ್ರಿ ಮಾಡುವ ಸಲುವಾಗಿ ವ್ಯಾಪಾರಿ ವಿಭಾಗ ಪ್ರಾರಂಭ.
 14-11-2005ರಂದುಆಧುನಿಕತಂತ್ರಜಾÐನದಆಸ್ಪತ್ರೆಕಾರ್ಯಾರಂಭ.
 ಎಲ್ಲಾ ವಿಭಾಗಗಳಲ್ಲಿ ಗಣಕಯಂತ್ರಗಳ ಅಳವಡಿಕೆ.
 ದಿನಾಂಕ 05-10-2005ರಿಂದ ಬೈಫ್ ಸಹಯೋಗದಲ್ಲಿ ಪಶು ಸಂವರ್ಧನಾಕೇಂದ್ರಆರಂಭ.
 ದಿನಾಂಕ 06-06-2006ರಿಂದ ಸಾರ್ವಜನಿಕಗ್ರಂಥಾಲಯಆರಂಭ.
 2007ರಲ್ಲಿಅಡಿಕೆ ಸಂಗ್ರಹಣೆಗೆ ಶ್ಯೆತ್ಯಾಗಾರ ನಿರ್ಮಾಣ.
 7-10-2006ರಂದು ಸಂಘದ ಸಹಯೋಗದಲ್ಲಿಕರ್ನಾಟಕರಾಜ್ಯಅಡಿಕೆ ಮಾರಾಟ ಸಹಕಾರ ಮಂಡಳ ನಿಯಮಿತ ಶಿವಮೊಗ್ಗ ಕಾರ್ಯಾರಂಭ.
 ಡಿಸೆಂಬರ್2009ರಿಂದ ಸುಗಂಧಿತ ಸಿಹಿ ಅಡಿಕೆ ಪುಡಿತಯಾರಿಕೆ ಹಾಗೂ ರಾಜ್ಯ ಮತ್ತು ಹೊರರಾಜ್ಯಗಳ ಬೇರೆ ಬೇರೆ ಭಾಗಗಳಲ್ಲಿ ಮಾರಾಟ ವ್ಯವಸ್ಥೆ.
 ಗ್ರಾಹಕರಿಗೆ ದಿನನಿತ್ಯದಅಗತ್ಯ ವಸ್ತುಗಳು ಒಂದೇ ಸೂರಿನಡಿಒದಗಿಸಲುಏಪ್ರಿಲ್2011ರಲ್ಲಿಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ನ್ನು ಪ್ರಾರಂಭ.
 23-06-2012ರಂದುಯೂರಿಯಾರಹಿತಧಾರಾ ಪಶು ಆಹಾರಉತ್ಪಾದನಾಘಟಕ ಸ್ಥಾಪನೆ.
 2012ರಲ್ಲಿಅಡಿಕೆಯ ಸ್ಲೈಸ್& ಮಮ್ರಿಕಟಿಂಗ್ ಮಾರಾಟಆರಂಭ.
 ದಿನಾಂಕ 04-11-2015ರಂದು ಮುಂಡಗೋಡ ಶಾಖೆ ಆರಂಭ.
 24-12-2016ರಂದು ಟಿ.ಎಸ್.ಎಸ್ ಸುಪರ್ ಮಾರ್ಕೆಟ್ ಶ್ರೀಪಾದ ಹೆಗಡೆಕಡವೆ ಸಂಕೀರ್ಣಕ್ಕೆ ಸ್ಥಳಾಂತರ. ದೊಡ್ಡ ಪ್ರಮಾಣದಲ್ಲಿ ಸುಪರ್ ಮಾರ್ಕೆಟ್ ವ್ಯವಹಾರ ಪ್ರಾರಂಭ ಮತ್ತು ಅಂದಿನಿಂದ ಬೆಳ್ಳಿ ಮತ್ತು ಬಂಗಾರದ ಮಾರಾಟ ಮಳಿಗೆ ಪ್ರಾರಂಭ.
 21-03-2017ರಂದುತನ್ನದೇ ಬ್ರಾಂಡ್‍ನಡಿಯಲ್ಲಿ ‘ಟಿ.ಎಸ್.ಎಸ್. ಗ್ರೀನ್‍ಗೋಲ್ಡ್’ ಸಾವಯವಗೊಬ್ಬರದಉತ್ಪಾದನೆ& ಮಾರಾಟ ಪ್ರಾರಂಭ.
 ದಿನಾಂಕ 28-08-2017ರಂದು ಸಂಘದಆವಾರದಲ್ಲಿ ವಿಜಯಾ ಬ್ಯಾಂಕ್ ಶಾಖೆ ಆರಂಭ.
 09-09-2017ರಂದು ಸುಪರ್ ಮಾರ್ಕೆಟಿನಲ್ಲಿ ಭಾರತೀಯಜನೌಷಧಿ ಮಳಿಗೆ ಪ್ರಾರಂಭ.
 ದಿನಾಂಕ 02-03-2018ರಂದು ಸಿದ್ದಾಪುರ ಶಾಖೆಯಲ್ಲಿಕಿರಾಣಿ ಮತ್ತು ಕೃಷಿ ಸುಪರ್ ಮಾರ್ಕೆಟ್ ನೂತನಕಟ್ಟಡಕ್ಕೆ ಸ್ಥಳಾಂತರ.