ನಮ್ಮ ಹಿರಿಯರು ಪ್ಲಾಸ್ಟಿಕ್ ಬಾಟಲಿಗಳ ಬದಲು ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದ ಕ್ರಮ ಖಂಡಿತಾ ಸರಿಯಾದದ್ದು! ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದರಿಂದ ವ್ಯಕ್ತಿಯ ಆರೋಗ್ಯ ಉತ್ತಮಗೊಳ್ಳುವುದಲ್ಲದೆ, ಹಲವಾರು ರೋಗಗಳ ವಿರುದ್ಧ ಹೋರಾಡುವಲ್ಲಿ ಇದು ಸಹಾಯ ಮಾಡುತ್ತದೆ.

ತಾಮ್ರದ ಪಾತ್ರೆಯಲ್ಲಿನ ಹತ್ತಾರು ಔಷಧೀಯ ಗುಣಗಳಲ್ಲಿ ಬೆರಳೆಣಿಕೆಯ ಪ್ರಯೋಜನೆಗಳನ್ನು ಇಲ್ಲಿ ನೀಡಲಾಗಿದೆ.

ಬ್ಯಾಕ್ಟೀರಿಯಾ ನಿವಾರಣೆ

ತಾಮ್ರದ ಪಾತ್ರೆಯಲ್ಲಿನ ನೀರು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ತಾಮ್ರ, ಸೂಕ್ಷ್ಮಾಣು ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದ್ದು, ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ತಾಮ್ರದ ಪಾತ್ರೆಗಳಲ್ಲಿ ಸಂಗ್ರಹ ಮಾಡಿ ಇಟ್ಟ ನೀರು ಅಲ್ಪ ಅವಧಿಯಲ್ಲೇ ಬ್ಯಾಕ್ಟೀರಿಯಾ ನಿವಾರಿಸಬಲ್ಲದು. ನೀರಿನ ಮೂಲಕ ಹರಡುವ ರೋಗಗಳು, ಉದಾಹರಣೆಗೆ, ಸ್ಯಾಲ್ಮನೆಲ್, ಟೈಫಸ್, ಕಾಲರಾ ಮತ್ತು ವೈರಸ್‌ಗಳಾದ ಹೆಪಟೈಟಿಸ್ ಎ ಮತ್ತು ಎಂಟರೋ ವೈರಸ್ ಗಳ ವಿರುದ್ಧ ಹೋರಾಡಲು ಕೂಡ ತಾಮ್ರ ಸಹಾಯ ಮಾಡುತ್ತದೆ.

RELATED ARTICLES  ಬಾಳೆಹಣ್ಣು ಆವಕಾಡೊ(ಬೆಣ್ಣೆ ಹಣ್ಣು) ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು.

ಥೈರಾಯ್ಡ್ ತೊಂದರೆಗೆ ರಾಮಬಾಣ

ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ತಾಮ್ರ ಇರುವುದು ಅಗತ್ಯ. ಥೈರಾಯಿಡ್ ಸಮಸ್ಯೆಗೆ ಹಲವು ಕಾರಣಗಳಿದ್ದರೂ, ತಾಮ್ರದ ಕೊರತೆ ಒಂದು ಪ್ರಮುಖ ಕಾರಣ. ಹೀಗಾಗಿ, ತಾಮ್ರದ ಜಗ್ ನಲ್ಲಿ ಸಂಗ್ರಹಿಸಲಾಗಿರುವ ನೀರನ್ನು, ಊಟಕ್ಕೆ ಮೊದಲು ಕುಡಿಯುವುದರಿಂದ ಥೈರಾಯಿಡ್ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

ಸಂಧಿವಾತ ಮತ್ತು ರಕ್ತಹೀನತೆ ನಿವಾರಣೆ

RELATED ARTICLES  ನಿಮಗೆ ಗೊತ್ತೆ? , ಮುಟ್ಟಿದರೆ ಮುನಿ ಗಿಡದಲ್ಲಿರುವ ಔಷಧೀಯ ಗುಣದ ಬಗ್ಗೆ?

ಸಂಧಿವಾತ ಮತ್ತು ಇತರ ಕೀಲುನೋವುಗಳ ನಿವಾರಣೆಯಲ್ಲಿ ತಾಮ್ರ ಸಹಾಯಮಾಡುತ್ತದೆ. ಇದು ಅತ್ಯಂತ ಪರಿಣಾಮಕಾರಿ ಹಾಗೂ ಶಮನಕಾರಿ ಗುಣಗಳನ್ನು ಹೊಂದಿದ್ದು ರುಮಾಟಾಯ್ಡ್ ಆರ್ಥ್ ರೈಟಿಸ್‌ನಿಂದ ಬರುವ ಕೀಲುನೋವು ನಿವಾರಣೆಗೆ ಸಹಾಯಕಾರಿ.

ಹತ್ತಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಇದು ತೀವ್ರ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತಾಮ್ರದ ಕೊರತೆ ರಕ್ತಹೀನತೆಗೆ ಕಾರಣವಾಗಬಹುದು. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಲಾದ ನೀರನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.

ಆದ್ದರಿಂದ ಸಮಯ ವ್ಯರ್ಥ ಮಾಡದೆ ತಾಮ್ರದ ಪಾತ್ರೆಯಲ್ಲಿ ನೀರು ಶೇಖರಿಸಲು ಆರಂಭಿಸಿ. ಕೆಲವೊಮ್ಮೆ, ಸಂಪ್ರದಾಯಗಳನ್ನು ಪಾಲಿಸುವುದು ನಿಜಕ್ಕೂ ಸಹಕಾರಿಯಾಗಬಲ್ಲದು.