ಭಾರತೀಯ ರೈಲ್ವೆ ಇಲಾಖೆಯ ವಾಯುವ್ಯ ವಿಭಾಗವು ರೈಲ್ವೆ ನೇಮಕಾತಿ ಕೋಶ (ಆರ್’ಆರ್’ಸಿ) ದಿಂದ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 21
ಹುದ್ದೆಗಳ ವಿವರ
1.ಅಥ್ಲೆಟಿಕ್ಸ್ – 02
2.ಬಾಕ್ಸಿಂಗ್ – 03
3.ಚೆಸ್ – 01
4.ಕ್ರಿಕೆಟ್ – 03
5.ಸೈಕ್ಲಿಂಗ್ – 02
6.ಪವರ್ ಲಿಫ್ಟಿಂಗ್ – 02
7.ಶೂಟಿಂಗ್ – 02
8.ವೇಯ್ಟ್ ಲಿಫ್ಟಿಂಗ್ – 02
9.ರೆಸ್ಲಿಂಗ್ – 04

RELATED ARTICLES  ಉತ್ತರಕನ್ನಡದ ಚುನಾವಣಾ ಫಲಿತಾಂಶ.

ವಿದ್ಯಾರ್ಹತೆ : ಲೆವೆಲ್ 4 ಮತ್ತು 5 ರ ಹುದ್ದೆಗಳಿಗೆ ಪದವಿ, ಲೆವೆಲ್ 2 ಮತ್ತು 3ರ ಹುದ್ದೆಗಳಿಗೆ ದ್ವಿತೀಯಾ ಪಿಯುಸಿ ಪೂರೈಸಿರಬೇಕು

ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ನಿಗದಿ ಮಾಡಲಾಗಿದೆ. ವಯೋಮಿತಿಯಲ್ಲಿ ಯಾವುದೇ ಸಡಿಲತೆ ನೀಡಿಲ್ಲ.

ಶುಲ್ಕ : ಎಲ್ಲಾ ವರ್ಗದವರಿಗೂ 500 ರೂ ಶುಲ್ಕ ನಿಗದಿ ಮಾಡಲಾಗಿದೆ.

RELATED ARTICLES  ವಿಶ್ವಕಮ೯ ಗೆಳೆಯರ ಬಳಗ(ರಿ) ಭಟ್ಕಳ ಇದರ ಆಶ್ರಯದಲ್ಲಿ " ಮನೆಗೊಂದು ಗಿಡ" ಅಭಿಯಾನದ ಕಾರ್ಯಕ್ರಮ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-08-2018

ಅರ್ಜಿ ಸಲ್ಲಿಸುವ ವಿಳಾಸ : ಅಸಿಸ್ಟೆಂಟ್ ಪರ್ಸನಲ್ ಆಫೀಸರ್, ರೈಲ್ವೆ ರಿಕ್ರೂಟ್’ಮೆಂಟ್ ಸೆಲ್, ನಾರ್ತ್ ವೆಸ್ರ್ಟನ್ ರೈಲ್ವೆ, ಪವರ್ ಹೌಸ್ ರೋಡ್, ಆಪೋಸಿಟ್ ಡಿಆರ್’ಎಂ ಆಫೀಸ್, ಜೈಪುರ್ 302006 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ www.nwr.indianrailways.gov.in ಗೆ ಭೇಟಿ ನೀಡಿ.