ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲದ ಮಾಸಿಕ ಸಭೆಯು
29.07.2018 ರಂದು ಆದಿತ್ಯವಾರ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಜರುಗಿತು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿಯನ್ನು ಮಂಡಿಸಿದರು.

ಕೋಶಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಗಬ್ಲಡ್ಕ ಇವರು ಲಕ್ಷ್ಮೀಲಕ್ಷಣವೆಂಬ ಗಣಕೀಕೃತ ಮಾಧ್ಯಮದಲ್ಲಿ ಎಲ್ಲಾ ವಲಯಗಳ ಸಕ್ರಿಯ ಭಾಗವಹಿಸುವಿಕೆಗೆ ಮೆಚ್ಚುಗೆ ಸೂಚಿಸಿ, ಲೆಕ್ಕಪತ್ರ ಮಂಡಿಸಿದರು.

ಡಾ// ಡಿ ಪಿ ಭಟ್ , ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಕೇಶವಪ್ರಸಾದ ಎಡಕ್ಕಾನ, ಕುಸುಮಾ ಪೆರ್ಮುಖ, ದೇವಕಿ ಪನ್ನೆ, ಮಹೇಶ ಸರಳಿ, ಸತ್ಯಶಂಕರ ಭಟ್ ಹಿಳ್ಳೆಮನೆ, ವೈ ಕೆ ಗೋವಿಂದ ಭಟ್ ಇವರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು.

RELATED ARTICLES  ರಾಘವೇಶ್ವರ ಶ್ರೀಗಳ ಆಗಮನದ ಸವಿ ನಿರೀಕ್ಷೆಯಲ್ಲಿರುವ ಅಖಿಲ ಹವ್ಯಕ ಮಹಾಸಭೆ!

ಕೃಷ್ಣ ಮೋಹನ ಎಡನಾಡು ಇವರು ಉಲ್ಲೇಖ ವಿಭಾಗದ ಮಾಹಿತಿಗಳನ್ನೊದಗಿಸುವುದರೊಂದಿಗೆ, ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ನೇತೃತ್ವದಲ್ಲಿ ನಡೆಯುವ ಉಚಿತ ಚಿಕಿತ್ಸಾ ಶಿಬಿರಗಳ ಕುರಿತು ವಿವರಣೆಗಳನ್ನಿತ್ತರು.
ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಸದ್ರಿ ವಿಭಾಗದ ಕಾರ್ಯವೈಖರಿಯ ಕುರಿತು ಮಾಹಿತಿಗಳನ್ನಿತ್ತರು.

ಸಭೆಯಲ್ಲಿ ಉನ್ನತ ಅಂಕ ಗಳಿಸಿದ ವಲಯದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಹು ನಿರೀಕ್ಷೆಯ ಗೋಸ್ವರ್ಗದ ಏಕಪದ ಯೋಜನೆಗೆ ದೇಣಿಗೆ, ಶ್ರೀ ಕ್ಷೇತ್ರದ ಆಡಳಿತ ಸಮಿತಿಯವರಿಂದ ಶ್ರೀ ಮಠಕ್ಕೆ ಚರಣ ಕಾಣಿಕೆ ಹಾಗೂ ಮೂಲ ಮಠ ಅಶೋಕೆಗೆ ಕಾರ್ಮಾರು ನರಸಿಂಹ ಭಟ್ ಸಹೋದರರಿಂದ ದೇಣಿಗೆಗಳನ್ನು ಈ ಸಂದರ್ಭದಲ್ಲಿ ಸಮರ್ಪಣೆ ಮಾಡಲಾಯಿತು.

RELATED ARTICLES  ಪ್ರೊ ಕಬಡ್ಡಿ ಲೀಗ್‌ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ ಬೆಂಗಳೂರು ಬುಲ್ಸ್,

ಇದೇ ಸಂದರ್ಭದಲ್ಲಿ ಮಂಡಲ ಮಾತೃ ವಿಭಾಗದಿಂದ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆ ಜರುಗಿತು ಹಾಗೂ ಮಂಡಲದ ವತಿಯಿಂದ ವಿಶೇಷ ಕಾರ್ತಿಕ ಪೂಜೆಯನ್ನು ನೆರವೇರಿಸಲಾಯಿತು. ಕಾಮದುಘಾ ಯೋಜನೆಯ ಜತೆ ಕಾರ್ಯದರ್ಶಿ ಮತ್ತು ಮಂಡಲ ಸಂಘಟನಾ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಮೀನಗದ್ದೆ ಇವರು ಉಪಸ್ಥಿತರಿದ್ದರು.

ಮಂಡಲ ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಪೈಸಾರಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಶ್ರೀ ಮಠದ ವಿವಿಧ ಯೋಜನೆಗಳಲ್ಲಿ ಎಲ್ಲರೂ ಕೈಜೋಡಿಸುವುದಲ್ಲದೇ, ಬೆಂಗಳೂರಿನಲ್ಲಿ ನಡೆಯುವ ಗೋಸ್ವರ್ಗ ಚಾತುರ್ಮಾಸ್ಯದಲ್ಲಿ ಮಂಡಲದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆಯಿತ್ತರು.
ರಾಮತಾರಕಮಂತ್ರ, ಶಾಂತಿಮಂತ್ರ, ಗೋಸ್ತುತಿ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.