ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಿದ್ದು, ಇದು ಸಾಲದ ಬಡ್ಡಿದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಹೆಚ್ಚಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂದು ರೆಪೊ ದರಗಳನ್ನು ಹೆಚ್ಚಿಸಿದೆ. ಅಂದರೆ ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಈ ಬಡ್ಡಿದರಗಳ ಏರಿಕೆ, ಸಾಮಾನ್ಯವಾಗಿ ಬ್ಯಾಂಕುಗಳ ಸಾಲ ಮತ್ತು ಠೇವಣಿ ದರ ಹೆಚ್ಚಳಕ್ಕೆ ಕಾರಣವಾಗಬಹುದು.

RELATED ARTICLES  ಕಿತ್ರೆಯ ದೇವಿಮನೆಯ ಶ್ರೀ ದುರ್ಗಾಪರಮೇಶ್ವರಿ ದೇವಿಯ ರಥೋತ್ಸವ ಸಂಪನ್ನ.

ಜೂನ್ ಸಭೆಯಲ್ಲಿ ರೆಪೊ ದರ ಹೆಚ್ಚಿದಂತೆ, ಹೆಚ್ಚಿನ ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರು ಆರ್ಬಿಐ ದರ ಏರಿಸಲಿದೆ ಎಂದೇ ಭಾವಿಸಿದ್ದರು. ಸಮಿತಿಯ ಆರು ಜನ ಸದಸ್ಯರಲ್ಲಿ ಐದು ಜನರು ದರ ಏರಿಕೆಗೆ ಮತ ಚಲಾಯಿಸಿದ್ದಾರೆ.
ಹಣಕಾಸು ನೀತಿಯ ಪ್ರಮುಖ ಅಂಶಗಳು:

– ರೆಪೊ ದರ 6.25 ರಿಂದ ಶೇ. 6.5 ಕ್ಕೆ ಏರಿಕೆ

– ಜೂನ್ ತಿಂಗಳಲ್ಲಿ ಮೊದಲನೆ ಹೆಚ್ಚಳ ಮಾಡಿದ ನಂತರ, ಆರ್ಬಿಐನಿಂದ ಎರಡನೇ ನೇರ ಹೆಚ್ಚಳ

RELATED ARTICLES  ಕಾರು ಸ್ಕೂಟಿ ನಡುವೆ : ಅಪಘಾತ ಸವಾರನಿಗೆ ಪೆಟ್ಟು

– 2018-19ರಲ್ಲಿ ಜಿಡಿಪಿ ಶೇಕಡಾ 7.4 ಕ್ಕೆ ಇಳಿಕೆ

– 6 ಎಂಪಿಸಿ ಸದಸ್ಯರ ಪೈಕಿ 5 ಮಂದಿ ಏರಿಕೆಗೆ ಮತ ಚಲಾವಣೆ

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಮೇ ತಿಂಗಳಲ್ಲಿ ಶೇ. 4.9 ರಿಂದ ಶೇ. 5 ಕ್ಕೆ ಏರಿದೆ. ಬಡ್ಡಿದರಗಳಲ್ಲಿ ಇಂದಿನ ಏರಿಕೆಯೂ ಮುಂಬರುವ ದಿನಗಳಲ್ಲಿ ಸಾಲಗಳ ಮೇಲೆ ಪರಿಣಾಮ ಬೀರಲಿದ್ದು, ಹೆಚ್ಚು ದುಬಾರಿಯಾಗಬಹುದು. ಆದಾಗ್ಯೂ, ಬಡ್ಡಿಯ ಆದಾಯವನ್ನು ಹುಡುಕುವವರಿಗೆ ಇದು ಸ್ವಲ್ಪ ನೆಮ್ಮದಿ ತರಬಹುದು.