ಭಾರತೀಯ ಮಾರುಕಟ್ಟೆ ಸೇರಿದಂತೆ ಜಾಗತಿಕವಾಗಿ ಒಂದು ಬಿಲಿಯನ್ ಗಿಂತಲೂ ಹೆಚ್ಚಿನ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಸೋಶಿಯಲ್ ಮೇಸೆಜಿಂಗ್ ಆಪ್, ಹೊಸದಾಗಿ ಎಲ್ಲಾ ಬಳಕೆದಾರರಿಗೂ ಗ್ರೂಪ್ ವಿಡಿಯೋ ಕಾಲ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಈಗಾಗಲೇ ಬೀಟಾ ಬಳಕೆದಾರರಿಗೆ ಮಾತ್ರವೇ ದೊರೆತಿದ ಆಯ್ಕೆಯೂ ಬೇರೆ ಎಲ್ಲಾ ಸಾಮಾನ್ಯ ಬಳಕೆದಾರರಿಗೂ ಲಭ್ಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಮಂದಿ ವಾಟ್ಸ್‌ಆಪ್ ಅನ್ನೇ ವಿಡಿಯೋ ಕಾಲಿಂಗ್ ಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರ ಸಂಖ್ಯೆ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ.

ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲ್ ಸದ್ಯ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಜುಲೈ 30 ರಿಂದ ಹೊಸ ಆಪ್ ಡೇಟ್ ದೊರೆಯಲಿದೆ. ಈ ಹೊಸ ಆಯ್ಕೆಯಿಂದಾಗಿ ವಾಟ್ಸ್‌ಆಪ್ ಬಳಕೆದಾರರು ಒಂದೇ ಬಾರಿ ತಮ್ಮ ನಾಲ್ಕು ಸ್ನೇಹಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾಗಿದೆ. ಈ ಹಿಂದೆ ಕಾನ್ಫರೆನ್ಸ್ ಕಾಲ್ ಮಾಡಿದ ರೀತಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ ಮಾಡಬಹುದಾಗಿದೆ. ಇದರಿಂದಾಗಿ ವಾಟ್ಸ್‌ಆಪ್ ಬಳಕೆ ಇನ್ನಷ್ಟು ಹೆಚ್ಚಾಗಲಿದೆ.

ಸದ್ಯ ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲ್ ನಲ್ಲಿ ಕೇವಲ 4 ಮಂದಿ ಮಾತ್ರವೇ ಭಾಗಿಯಾಗುವ ಅವಕಾಶವನ್ನು ಮಾಡಿಕೊಡಲಾಗಿದೆ. ಕಾರಣ ಮೊಬೈಲ್ ಸ್ಕ್ರಿನ್ ನಲ್ಲಿ ಹೆಚ್ಚು ಮಂದಿಗೆ ಕರೆ ಮಾಡಿದರೆ ಒಮ್ಮೆಗೆ ನೋಡಲು ಸಾಧ್ಯವಿಲ್ಲ ಎನ್ನುವುದಕ್ಕಾಗಿ. ಈ ಗ್ರೂಪ್ ವಿಡಿಯೋ ಕಾಲ್ ಸಹ ಎನ್ಸ್ಕ್ರಿಪ್ಡೆಡ್ ಆಗಲಿದ್ದು, ನಿಮ್ಮ ವಿಡಿಯೋ ಚಾಟ್ ಅನ್ನು ಬೇರೆ ಯಾವುದೇ ಮೂರುನೇ ವ್ಯಕ್ತಿ ಇಣುಕಿ ನೋಡಲು ಸಾಧ್ಯವೇ ಇಲ್ಲ ಎನ್ನಲಾಗಿದೆ.

RELATED ARTICLES  ಟಿಪ್ಪರ್ ಹರಿದು ಪಾದಚಾರಿ ಸಾವು.

ನೀವು ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲ್ ಮಾಡುವ ಸಲುವಾಗಿ ಮೊದಲಿಗೆ ನಿಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿ. ಕನೆಕ್ಟ್ ಆದ ನಂತರದಲ್ಲಿ ಮೇಲ್ ಭಾಗದ ಬಲ ತುದಿಯಲ್ಲಿ ನಿಮಗೆ ಒಂದು ಬಟನ್ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಕಾಂಟೆಕ್ಟ್ ಓಪನ್ ಆಗಲಿದೆ. ನಂತರದಲ್ಲಿ ಅದರಲ್ಲಿ ನಿಮಗೆ ಬೇಕಾದ ಕಾಂಟೆಕ್ಟ್ ಅನ್ನು ಆಯ್ಕೆ ಮಾಡಿಕೊಂಡು ಕರೆಯಲ್ಲಿ ಅವರನ್ನು ಭಾಗಿ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಆಯ್ಕೆಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಮಂದಿ ಬಳಸುತ್ತಿದ್ದಾರೆ. ಈ ಹೊಸ ಆಯ್ಕೆಯಿಂದಾಗಿ ಇನ್ನಷ್ಟು ಹೆಚ್ಚಿನ ಮಂದಿ ವಾಟ್ಸ್‌ಆಪ್ ಕಡೆಗೆ ವಾಲುವ ಸಾಧ್ಯತೆ ಇದೆ.ಭಾರತೀಯ ಮಾರುಕಟ್ಟೆ ಸೇರಿದಂತೆ ಜಾಗತಿಕವಾಗಿ ಒಂದು ಬಿಲಿಯನ್ ಗಿಂತಲೂ ಹೆಚ್ಚಿನ ಮಂದಿ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಸೋಶಿಯಲ್ ಮೇಸೆಜಿಂಗ್ ಆಪ್, ಹೊಸದಾಗಿ ಎಲ್ಲಾ ಬಳಕೆದಾರರಿಗೂ ಗ್ರೂಪ್ ವಿಡಿಯೋ ಕಾಲ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಈಗಾಗಲೇ ಬೀಟಾ ಬಳಕೆದಾರರಿಗೆ ಮಾತ್ರವೇ ದೊರೆತಿದ ಆಯ್ಕೆಯೂ ಬೇರೆ ಎಲ್ಲಾ ಸಾಮಾನ್ಯ ಬಳಕೆದಾರರಿಗೂ ಲಭ್ಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಮಂದಿ ವಾಟ್ಸ್‌ಆಪ್ ಅನ್ನೇ ವಿಡಿಯೋ ಕಾಲಿಂಗ್ ಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರ ಸಂಖ್ಯೆ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ.

ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲ್ ಸದ್ಯ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಜುಲೈ 30 ರಿಂದ ಹೊಸ ಆಪ್ ಡೇಟ್ ದೊರೆಯಲಿದೆ. ಈ ಹೊಸ ಆಯ್ಕೆಯಿಂದಾಗಿ ವಾಟ್ಸ್‌ಆಪ್ ಬಳಕೆದಾರರು ಒಂದೇ ಬಾರಿ ತಮ್ಮ ನಾಲ್ಕು ಸ್ನೇಹಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾಗಿದೆ. ಈ ಹಿಂದೆ ಕಾನ್ಫರೆನ್ಸ್ ಕಾಲ್ ಮಾಡಿದ ರೀತಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ ಮಾಡಬಹುದಾಗಿದೆ. ಇದರಿಂದಾಗಿ ವಾಟ್ಸ್‌ಆಪ್ ಬಳಕೆ ಇನ್ನಷ್ಟು ಹೆಚ್ಚಾಗಲಿದೆ.

RELATED ARTICLES  ದಸರಾ ರಜೆ ವಿಸ್ತರಣೆ : ನಡೆಯುತ್ತಿದೆ ಹಲವರರಿಂದ ಹಲವು ಚರ್ಚೆ.

ಸದ್ಯ ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲ್ ನಲ್ಲಿ ಕೇವಲ 4 ಮಂದಿ ಮಾತ್ರವೇ ಭಾಗಿಯಾಗುವ ಅವಕಾಶವನ್ನು ಮಾಡಿಕೊಡಲಾಗಿದೆ. ಕಾರಣ ಮೊಬೈಲ್ ಸ್ಕ್ರಿನ್ ನಲ್ಲಿ ಹೆಚ್ಚು ಮಂದಿಗೆ ಕರೆ ಮಾಡಿದರೆ ಒಮ್ಮೆಗೆ ನೋಡಲು ಸಾಧ್ಯವಿಲ್ಲ ಎನ್ನುವುದಕ್ಕಾಗಿ. ಈ ಗ್ರೂಪ್ ವಿಡಿಯೋ ಕಾಲ್ ಸಹ ಎನ್ಸ್ಕ್ರಿಪ್ಡೆಡ್ ಆಗಲಿದ್ದು, ನಿಮ್ಮ ವಿಡಿಯೋ ಚಾಟ್ ಅನ್ನು ಬೇರೆ ಯಾವುದೇ ಮೂರುನೇ ವ್ಯಕ್ತಿ ಇಣುಕಿ ನೋಡಲು ಸಾಧ್ಯವೇ ಇಲ್ಲ ಎನ್ನಲಾಗಿದೆ.

ವಾಟ್ಸ್‌ಆಪ್ ಗ್ರೂಪ್ ಕಾಲ್ ಮಾಡುವುದು ಹೇಗೆ..?

ನೀವು ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲ್ ಮಾಡುವ ಸಲುವಾಗಿ ಮೊದಲಿಗೆ ನಿಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿ. ಕನೆಕ್ಟ್ ಆದ ನಂತರದಲ್ಲಿ ಮೇಲ್ ಭಾಗದ ಬಲ ತುದಿಯಲ್ಲಿ ನಿಮಗೆ ಒಂದು ಬಟನ್ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಕಾಂಟೆಕ್ಟ್ ಓಪನ್ ಆಗಲಿದೆ. ನಂತರದಲ್ಲಿ ಅದರಲ್ಲಿ ನಿಮಗೆ ಬೇಕಾದ ಕಾಂಟೆಕ್ಟ್ ಅನ್ನು ಆಯ್ಕೆ ಮಾಡಿಕೊಂಡು ಕರೆಯಲ್ಲಿ ಅವರನ್ನು ಭಾಗಿ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಆಯ್ಕೆಯೂ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಮಂದಿ ಬಳಸುತ್ತಿದ್ದಾರೆ. ಈ ಹೊಸ ಆಯ್ಕೆಯಿಂದಾಗಿ ಇನ್ನಷ್ಟು ಹೆಚ್ಚಿನ ಮಂದಿ ವಾಟ್ಸ್‌ಆಪ್ ಕಡೆಗೆ ವಾಲುವ ಸಾಧ್ಯತೆ ಇದೆ.