ಕೂದಲು ಉದುರುವಿಕೆ ಈಗ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಸ್ಥಳೀಯ ನೀರು ಮತ್ತು ಫುಡ್ ಬದಲಾವಣೆಯಿಂದ ಯುವಕರಲ್ಲಿ ಈಗ ಕೂದಲು ಹೆಚ್ಚು ಉದುರಲಾರಂಭಿಸಿದೆ.
ಸಕಾಲಕ್ಕೆ ಎಣ್ಣೆ ಹಾಕುವುದು, ಮಸಾಜ್ ಮಾಡುವ ಪದ್ಧತಿ ಕೈಬಿಟ್ಟಿರುವುದು ಕೂಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಇದಲ್ಲದೆ ಹೆಲ್ಮೆಟ್ ಹಾಕಿ ಹೆಚ್ಚಿಗೆ ಓಡಾಡುವುದರಿಂದ ಗಾಳಿಯ ಚಲನೆ ಇಲ್ಲದೆ ಕೂದಲು ಉದುರುತ್ತಿದೆ.
ಕೂದಲನ್ನು ಸಂರಕ್ಷಿಸಿಕೊಳ್ಳಲು ಬಹುತೇಕರು ತಿಂಗಳಿಗೆ ಸಾವಿರಾರೂ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಬಗೆಬಗೆಯ ಶಾಂಪು, ಜೆಲ್ ಹೀಗೆ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಆದರೆ ಅತಿ ಸುಲಭ ಮತ್ತು ಕಡಿಮೆ ಖರ್ಚಿನಲ್ಲಿ ಕೂದಲು ಉದುರುವುದನ್ನು ತಡೆಯಬಹುದಾಗಿದೆ.
ಕೂದಲು ಉದುರುವಿಕೆಗೆ ಮೊಟ್ಟೆ ತುಂಬಾ ಸಹಕಾರಿ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಮೊಟ್ಟೆಯಲ್ಲಿರುವ ಲೋಳೆಯನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೂದಲ ಬುಡ ಬಿಗಿಯಾಗಲಿದೆಯಂತೆ. ಸುಮಾರು 20 ನಿಮಿಷಗಳ ಕಾಲ ಲೋಳೆ ಹಚ್ಚಿ ನಂತರ ಸ್ನಾನ ಮಾಡುವುದರಿಂದ ಕೂದಲು ಶೈನಿಂಗ್ ಬರುವುದು ಮಾತ್ರವಲ್ಲ ಉದುರುವುದನ್ನು ಕೂಡ ತಡೆಯಬಹುದಾಗಿದೆ ಎನ್ನುತ್ತಾರೆ. ಮೊಟ್ಟೆಯಲ್ಲಿ ನಾನಾ ಪೋಷಕಾಂಶಗಳು ಇರುವುದರಿಂದ ಕೂದಲು ಉದುರುವುದನ್ನು ತಡೆಯಬಹುದಾಗಿದೆ.