ಜೊಯಡಾ: ತಾಲೂಕಿನ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವ್ಹಿ ದೇಶಪಾಂಡೆ ಅವರು ತಾಲೂಕಿಗೆ ಮಂಜೂರಾದ ಮಿನಿ ಬಸ್ಸ್ ಗಳನ್ನು ಉದ್ಘಾಟನೆ ಮಾಡಿದರು.

RELATED ARTICLES  ಭಗವಂತನ ಸ್ಮರಣೆ ಮಾಡುವಾಗ ತೂಕಡಿಕೆ ಇರಬಾರದು : ಸ್ವರ್ಣವಲ್ಲೀ ಶ್ರೀ

ನಂತರ ಮಾತನಾಡಿದ ಆರ್.ವ್ಹಿ ದೇಶಪಾಂಡೆ ಅವರು ” ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಮಾಡುತ್ತಿದೆ. ಸಾರಿಗೆ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಬರಲಿದೆ. ಜಿಲ್ಲೆಯ ಭಟ್ಕಳ ,ಯಲ್ಲಾಪುರ , ಹಳಿಯಾಳದಲ್ಲಿ ನೂತನ ಬಸ್ ನಿಲ್ದಾಣ ಸ್ಥಾಪನೆ ಆಗಲಿದೆ” ಎಂದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 213 ಕೊರೋನಾ ಪಾಸಿಟೀವ್ ಪ್ರಕರಣ