ಕಾರವಾರ: ಜಿಲ್ಲೆಯಲ್ಲಿ ಮರು ಭೂಮಾಪನ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಆದೇಶಿಸಿದ್ದಾರೆ.
ಈ ಸಂಬಂಧ ಹೊರಡಿಸಿರುವ ಆದೇಶದಲ್ಲಿ ಅವರು ಮರು ಭೂಮಾಪನ ಮತ್ತು ಟಿಪ್ಪಣಿಗಳ ಗಣಕೀಕರಣ ಮಾಡುವ ಈ ಯೋಜನೆಗೆ ಕೇಂದ್ರ ಸರಕಾರವು ಡಿಐಎಲ್‍ಆರ್‍ಎಂಪಿ ಯೋಜನೆಯಡಿ ಒಟ್ಟು 24.12 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

RELATED ARTICLES  46 ಟರ್ಕಿ ಕೋಳಿಗಳಿಗೆ ವಿಷ ಹಾಕಿ ಸಾಯಿಸಿದ ದುಷ್ಕರ್ಮಿಗಳು.

ಹಾಸನ, ಬೆಳಗಾವಿ, ಉತ್ತರಕನ್ನಡ, ರಾಮನಗರ, ತುಮಕೂರು ಜಿಲ್ಲೆಯಲ್ಲೂ ಮರು ಭೂಮಾಪನಕ್ಕೆ ಕಂದಾಯ ಸಚಿವರು ಆದೇಶದ್ದಾರೆ. ಮರು ಭೂಮಾಪನ ಯೋಜನೆಯಡಿ, ಇಲಾಖೆಯಲ್ಲಿ ಲಭ್ಯವಿರುವ ಹಳೆಯ ಮೂಲ ದಾಖಲೆಗಳನ್ನು ಇಂದೀಕರಣ (ಅಪ್ಡೇಟಿಂಗ್) ಮಾಡಲು ಉದ್ದೇಶಿಸಲಾಗಿದೆ. ಇದರ ಪ್ರಕಾರ, ಆಧುನಿಕ ಸಾಧನಗಳ ಮೂಲಕ ಭೂಮಿಯ ಅಳತೆ ಕಾರ್ಯವನ್ನುನಡೆಸಬೇಕು ಎಂದು ಸಚಿವ ದೇಶಪಾಂಡೆಯವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಜುಲೈ 5ರಂದು ಮಂಡಿಸಿದ ಬಜೆಟಿನಲ್ಲಿ ಕೂಡ, ರಾಜ್ಯದೆಲ್ಲೆಡೆ ಹಂತಹಂತವಾಗಿ ಮರುಭೂಮಾಪನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿತ್ತು. ಈ ಮಧ್ಯೆ ರಾಜ್ಯದ 14 ಜಿಲ್ಲೆಗಳ 27 ಗ್ರಾಮಗಳಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಪ್ರಾಯೋಗಿಕವಾಗಿ ಮರುಭೂಮಾಪನ ಕಾರ್ಯವನ್ನು ನಡೆಸಲಾಗಿತ್ತು. ಈ ಅನುಭವದ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಬಳಸಿಕೊಂಡು 5 ಜಿಲ್ಲೆಗಳಲ್ಲಿ ಮರು ಭೂಮಾಪನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

RELATED ARTICLES  ಪ್ರವಾಸಿ ತಾಣಗಳಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ ಆದೇಶ