ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಗೋಹತ್ಯೆ ನಿಷೇಧವಾಗಬೇಕು ಎಂಬ ಕೂಗು ಹೆಚ್ಚಾಗಿದೆ. ಇದು ಜಾತಿ ಹಾಗೂ ಧರ್ಮದ ಬಣ್ಣವನ್ನೂ ಪಡೆದುಕೊಂಡಿದೆ.
ಗೋ ಹತ್ಯೆ ನಿಷೇಧ ಹಿಂದೂ ಧರ್ಮದ ಆಗ್ರಹವಾಗಿರುವ ಬೆನ್ನಲ್ಲೇ ಇದು ಹಲವೆಡೆ ಹಿಂಸಾಚಾರಕ್ಕೂ ಕಾರಣವಾಗಿದೆ. ಆದರೆ, ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಗೋ ಹತ್ಯೆ ನಿಷೇಧವಾಗಬೇಕು ಎಂಬ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ.
ಇವರ ಹೆಸರು ಮಹಮ್ಮದ್ ಫೈಜ್ ಖಾನ್. ದೇಶದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ಒತ್ತಾಯ ಹಾಗೂ ಜನಜಾಗೃತಿಗಾಗಿ ದೇಶದಾದ್ಯಂತ 380 ದಿನಗಳ 6000 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ನಡೆಸಿದ್ದಾರೆ.
ಗೋವು ರೈತರ ಜೀವನಾಡಿಯಂತೆ ಇದೆ ಎನ್ನುವ ಫೈಜ್ ಖಾನ್, ಗೋಕಳ್ಳತನ ಮಾಡಿ ಒಂದು ಗೋವನ್ನು ಹತ್ಯೆ ಮಾಡಿದರೆ ಒಬ್ಬ ರೈತನನ್ನೇ ಹತ್ಯೆ ಮಾಡಿದಂತೆ ಎನ್ನುತ್ತಾರೆ.
ಹೀಗಾಗಿ, ಆರು ಸಾವಿರ ಕಿಲೋ ಮೀಟರ್ ಪಾದಯಾತ್ರೆ ನಡೆಸಿದ ಇವರು, ದೇಶದಲ್ಲಿ ಗೋಹತ್ಯೆ ನಿಷೇಧ ಶೀಘ್ರ ಜಾರಿಯಾಗಬೇಕು ಎಂದು ಆಗ್ರಹಿಸುತ್ತಾರೆ.