ಅಂಕೋಲಾ:ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೋಟ್ ಒಂದು ಕಡಲ‌ ಅಲೆಗಳಿಗೆ ಸಿಲುಕಿ ಮುಳುಗಡೆಯಾಗುವ ಸಂದರ್ಭ ಎದುರಾಗಿದ್ದು ಇನ್ನೊಂದು ಬೋಟ್ ನಲ್ಲಿ ಇದ್ದವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಅಂಕೋಲಾದಿಂದ ವರದಿಯಾಗಿದೆ.

ಮುಳುಗುತ್ತಿದ್ದ ಫಿಶಿಂಗ್ ಬೋಟ್ ನಲ್ಲಿದ್ದ ಐವರು ಮೀನುಗಾರರನ್ನು ಇಬ್ಬರು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

RELATED ARTICLES  ಸಂಪನ್ನವಾಯ್ತು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇ ದಿನ.

ಕೃಷ್ಣರಾಮ ಬಾಣವಾಳೇಕರ್ ಎನ್ನುವವರಿಗೆ ಸೇರಿದ ರಾಮೇಶ್ವರ ಎಂಬ ಹೆಸರಿನ ಬೋಟ್ ಅಲೆಗಳ ರಭಸಕ್ಕೆ ಸಿಲುಕಿ ಬೆಳಂಬರ ಗ್ರಾಮದ ಬಳಿಯ ಸಮುದ್ರದಲ್ಲಿ ಮುಳುಗಡೆಯಾಗುತ್ತಿತ್ತು. ಇದರಲ್ಲಿ ಐವರು ಮೀನುಗಾರರಿದ್ದರು. ಬೋಟ್ ಮುಳುಗಡೆಯಾಗುತ್ತಿರುವುದನ್ನು ಗಮನಿಸಿದ ಸಮೀಪದಲ್ಲಿದ್ದ ಹಾರವಾಡದ ಶಾಂತದುರ್ಗಾ ಎಂಬ ಇನ್ನೊಂದು ಬೋಟ್’ನ ತುಕಾರಾಮ ವಿಠ್ಠಲ ಖಾವಿ೯ ಮತ್ತು ಸಂತೋಷ ಧಾಕು ಖಾವಿ೯ ಅಪಾಯದಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ್ದಾರೆ.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಾಧನೆಗೆ ಅಭಿನಂದಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ

ಕರಾವಳಿ ಕಾವಲುಪಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದ್ದು ಕಡಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.